Advertisement

Yakshagana ಆಟ- ಕೂಟ ಶ್ರುತಿಯ ಪಾತ್ರ

12:14 AM Aug 06, 2023 | Team Udayavani |

ಸಂಗೀತಕ್ಕೆ ಶ್ರುತಿ ಅನಿವಾರ್ಯ. ಶ್ರುತಿ ತಪ್ಪಿ ಹಾಡಿದರೆ ಕೇಳುಗನಿಗೂ ಕಷ್ಟ. ನಾವು ಆಡುವ ಮಾತಿಗೂ ಶ್ರುತಿ ಇದೆಯೇ? ಶ್ರುತಿ ಬೇಕೇ? ಪಂಪನ ಪ್ರಕಾರ ಮಾತು ಹಿತ, ಮಿತ, ಮೃದು ವಾಗಿರಬೇಕು. ಇದಕ್ಕೊಂದು ಸೇರ್ಪಡೆ ಇಂಪಾಗಿರ ಬೇಕು. ಮಾತಿನ ಅಲಂಕಾರಕ್ಕೆ ಜ್ಞಾನ, ಶಬ್ದಸಂಪತ್ತು, ಅಲಂಕಾರ, ಉಕ್ತಿ ಚಮತ್ಕಾರ, ವಿಷಯ ಪ್ರತಿಪಾದನಾ ಕೌಶಲ ಇಷ್ಟೇ ಸಾಕೇ? ಸುಮ್ಮನೆ ಕುಳಿತು ಹೊಡೆಯುವ ಹರಟೆ, ಪಟ್ಟಾಂಗಗಳಿಗಿಂತ ಆಟ ಹಾಗೂ ಕೂಟಗಳ ಮಾತು ಭಿನ್ನವಲ್ಲವೇ? ಇಲ್ಲೆಲ್ಲ ಮಾತಿಗೊಂದು ಶ್ರುತಿ ಇದ್ದರೆ ಕೇಳಲು ಮಧುರವಲ್ಲವೇ? ಹಾಗಾಗಿ ಕಲಾ ವಾತಾವರಣದ ಅನಾವರಣದ ಹಿಂದೆ ಶ್ರುತಿಯ ಪಾತ್ರ ಹಿರಿದು. ಯಕ್ಷಗಾನ ಪ್ರದರ್ಶನಗಳನ್ನೇ ತೆಗೆದುಕೊಳ್ಳೋಣ. ಅಲ್ಲಿ ವೇಷಧಾರಿಯ ಮಾತು ಶ್ರುತಿ ಬದ್ಧವಾಗಿರು ತ್ತದೆ. ಮಾತು ಮುಗಿಸಿ ಅದೇ ಶ್ರುತಿಯಲ್ಲಿ ಕೆಲ ವೊಮ್ಮೆ ವೇಷಧಾರಿಯೇ ಮುಂದಿನ ಪದ್ಯದ ಎತ್ತುಗಡೆ ಮಾಡುತ್ತಾರೆ. ಭಾಗವತರು ಹಾಡು ವಾಗ ಮಧ್ಯೆ ಆಗಾಗ ಅವರೊಂದಿಗೆ ವೇಷ ಧಾರಿ ತಾನೂ ಧ್ವನಿಗೂಡಿಸಿ ಹಾಡುವು ದುಂಟು. ಇಬ್ಬರಿಗೂ ಶ್ರುತಿ ಜ್ಞಾನ ಇಲ್ಲಿ ಅತ್ಯಗತ್ಯ.
ಶ್ರುತಿಯ ಅನುಭವದ ಕೊರತೆ ಕಲಾವಿದನಲ್ಲಿ ಕಂಡು ಬಂದರೆ ಕಲಾವಿದನಿಗೆ ಭಾಗ ವತರೇ ಹೇಳುತ್ತಾರೆ. ನೀನು ಪದ್ಯವನ್ನು ಎತ್ತುವ ಅಥವಾ ಮಧ್ಯೆ ಮಧ್ಯೆ ಬಾಯಿ ಹಾಕುವ ಸಾಹಸ ಕ್ಕೊಂದು ಕೈ ಹಾಕಬೇಡ ಮಾರಾಯ. ಮಾತುಗಾರಿಕೆ ಯಲ್ಲಿ ಶ್ರುತಿ ಕೆಲವು ವೇಷಧಾರಿಗಳಿಗೆ ಯಾವ ಮಟ್ಟ ದಲ್ಲಿ ಒಲಿದಿರುತ್ತದೆ ಎಂದರೆ ಭಾಗವತರು ಶ್ರುತಿ ಯನ್ನು ಏರಿಸುತ್ತಾ ಹೋದಂತೆ ವೇಷಧಾರಿಯೂ ಅದಕ್ಕೆ ಹೊಂದಿ ಕೊಳ್ಳುತ್ತಾ ಹೋಗುತ್ತಾನೆ.

Advertisement

ಆಟವಾಗಲಿ, ಕೂಟವಾಗಲಿ ಶ್ರುತಿ ಬೇಕೇ ಬೇಕು. ಚಂಡೆ ಹಾಗೂ ಮದ್ದಲೆಗಳೂ ಅದೇ ಶ್ರುತಿಯಲ್ಲಿರುತ್ತವೆ. ಇವುಗಳು ಶ್ರುತಿಯಲ್ಲಿಲ್ಲದಿದ್ದರೆ ಭಾಗವತನ ಅಸಮಾಧಾನ ಪ್ರದರ್ಶನದ ಉದ್ದಕ್ಕೂ ಕಂಡುಬರುತ್ತದೆ. ಕೂಟಗಳಲ್ಲಿ ಅರ್ಥಧಾರಿಗಳ ಮಾತೂ ಶ್ರುತಿಯಲ್ಲಿರಬೇಕೇ? ಎಂಬ ಪ್ರಶ್ನೆ ಎದುರಾದಾಗ ಕೆಲವರು ಇರಬೇಕು ಎಂದು ಪ್ರತಿಪಾದಿಸಿದರೆ, ಕೆಲವರು ಅಷ್ಟು ಮುಖ್ಯವಲ್ಲ ಎನ್ನುತ್ತಾರೆ. ಕೆಲವು ವರ್ಷಗಳ ಹಿಂದಿನ ಘಟನೆ. ಉಡುಪಿಯ ರಥಬೀದಿಯ ಗಣೇಶೋತ್ಸವ. ಶೇಣಿಯವರು ಅಂದಿನ ತಾಳಮದ್ದಲೆಯಲ್ಲಿ ಒಬ್ಬರು ಅರ್ಥಧಾರಿಗಳು. ಭಾಗವತರಿಗೆ ಮದ್ದಲೆ ಯಲ್ಲಿ ಜತೆಯಾಗಿದ್ದ ಮದ್ದಲೆವಾದಕರು ಆಗಾಗ ಮದ್ದಲೆಯಿಂದ ಒಂದೊಂದೇ ಪೆಟ್ಟನ್ನು ನುಡಿಸು ತ್ತಿದ್ದರು. ಸಾಮಾನ್ಯವಾಗಿ ಬಹಳ ಹೊತ್ತು ಮಾತ ನಾಡುವಾಗ ಶ್ರುತಿ ತಪ್ಪುವ ಸಾಧ್ಯತೆಗಳಿವೆ. ಮದ್ದಲೆವಾದಕನ ಈ ಅಪರೂಪದ ಶ್ರುತಿಬದ್ಧ ನುಡಿತಗಳು ಶೇಣಿಯವರ ಅರ್ಥಗಾರಿಕೆಗೆ ಕಳೆಗಟ್ಟುತ್ತಿತ್ತು ಎಂದು ಶ್ರೋತೃಗಳಲ್ಲಿ ಒಬ್ಬರು ವಿಮರ್ಶಿಸಿದ ನೆನಪು. ಶೇಣಿಯವರ ಅರ್ಥಗಾರಿಕೆ ಶ್ರುತಿಬದ್ಧವಾಗಿರುತ್ತಿತ್ತು. ಕೆಲವರು ಶ್ರುತಿಯೊಂದಿಗೆ ಹೇಗೆ ಹೊಂದಿಕೊಳ್ಳುತ್ತಾರೆಂದರೆ ಯಾವ ಮೂಲ ದಿಂದಾದರೂ ಶ್ರುತಿ ಕಿವಿಗೆ ಬಿದ್ದರೆ ಸಾಕು ಅದ ರಲ್ಲಿಯೇ ಹಾಡುತ್ತಾರೆ. ಹಿಂದೆ ಒಬ್ಬರು ಭಾಗ ವತರು ಆಕಾಶವಾಣಿ ಕಾರ್ಯಕ್ರಮ ವೊಂದ ರಲ್ಲಿ ಮದ್ದಲೆಯ ಶ್ರುತಿಯ ಆಧಾರದ ಮೇಲೆಯೇ ಪದ್ಯ ಹೇಳಿದ್ದ ಘಟನೆ ಯೊಂದನ್ನು ಓದಿದ್ದ ನೆನಪು.

ಹಾಡು ಹಾಗೂ ಮಾತು ಗಳನ್ನು ಒಬ್ಬರೇ ನಿರ್ವಹಿಸ ಬೇಕಾಗಿ ಬಂದಾಗ ಶ್ರುತಿ ಯನ್ನು ಕಾಯ್ದುಕೊಳ್ಳು ವುದು ಇನ್ನೊಂದು ಸವಾಲಿನ ಕೆಲಸ. ಹಾಗಾಗಿ ಹರಿಕಥೆಯಲ್ಲಿ ಹಾರ್ಮೋ ನಿಯಂ ವಾದಕ ಆಗಾಗ ಹಾರ್ಮೋನಿಯಂನ್ನು ನುಡಿಸು ವುದು ಹರಿದಾಸರಿಗೆ ಸಹಾಯ. ಪುರಾಣ ಪ್ರವಚನಗಳಲ್ಲಿ ಶ್ರುತಿ ನಿಧಾನಗತಿಯಲ್ಲಿ ಧ್ವನಿಸುತ್ತಿರುತ್ತದೆ. ಆದರೆ ಆಟ ಹಾಗೂ ಕೂಟಗಳಲ್ಲಿ ಭಾಗವತರು ಪದ್ಯ ಹೇಳಿ ನಿಲ್ಲಿಸಿದ ಮೇಲೆ ಅರ್ಥಗಾರಿಕೆ. ಆಗ ಶ್ರುತಿಯೂ ನಿಲ್ಲುತ್ತದೆ. ಅರ್ಥ ಮುಗಿದ ಬಳಿಕ ಮತ್ತೆ ಪದ. ಕೆಲವೊಮ್ಮೆ ಅರ್ಥಧಾರಿಯ ಮಾತಿನ ಶ್ರುತಿಯು ಭಾಗವತರು ಹಾಡಲು ಮಾಡಿಕೊಂಡ ಶ್ರುತಿಗಿಂತ ಭಿನ್ನವಾಗಿದ್ದರೆ ಭಾಗವತರಿಗೆ ಮುಂದಿನ ಪದ್ಯ ಎತ್ತಿಕೊಳ್ಳುವುದು ಸ್ವಲ್ಪ ತ್ರಾಸದ ಕೆಲಸ. ಬಹಳ ಹಿಂದೆ ನಾನು ನೋಡಿದ ಒಂದು ತಾಳಮದ್ದಲೆ. ಭಾಗವತರ ಹಾಡಿನ ನಡುವೆ ಅರ್ಥಧಾರಿಯೊಬ್ಬರು ಕುಳಿತ ಲ್ಲಿಂದಲೇ ಸಾಹಿತ್ಯ ಹಾಗೂ ಭಾವಕ್ಕೆ ಅಭಿನಯ ಮಾಡುತ್ತಿದ್ದರು. ಕೆಲವರಿಗೆ ಇದು ಅಭಾಸವಾಗಿ ಕಂಡರೆ, ಇನ್ನು ಕೆಲವರಿಗೆ ತಮಾಷೆಯಾಗಿ ಕಂಡಿತು. ಇಲ್ಲಿಯೂ ಹಿತ, ಮಿತವಾದ ಅಭಿನಯಗಳು ಯಾಕಿರಬಾರದು? ಕೂಟಕ್ಕೆ ಕಳೆಗಟ್ಟಲು ಇದು ಪೂರಕ ವಾಗುವುದಿಲ್ಲವೇ? ಸಂವಹನದಲ್ಲಿ ಈಗ ಪ್ರಾಶಸ್ತÂ ಪಡೆಯುತ್ತಿರುವ‌ body language. . ಮಾತಿನ ವೈಭವ ಅಥವಾ ಅರ್ಥವೈಭವಗಳ ನಡುವೆ ಸುಂದರ ಸಮನ್ವಯಕ್ಕೆ ಶ್ರುತಿಯೂ ಮುಖ್ಯ. ಅರ್ಥಧಾರಿಗೆ ಶ್ರುತಿ ಜ್ಞಾನದಂತೆ ಭಾಗವತರಿಗೆ ಅರ್ಥಜ್ಞಾನವೂ ಇರಬೇಕು ಎಂದು ಹಿರಿಯ ಅರ್ಥಧಾರಿಗಳೊಬ್ಬರು ಒಮ್ಮೆ ಹೀಗೇ ಮಾತ ನಾಡುವಾಗ ಹೇಳಿದ ನೆನಪು.

- ಡಾ| ಶ್ರೀಕಾಂತ್‌ ಸಿದ್ದಾಪುರ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next