Advertisement
ನ್ಯೂಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳು ಸ್ಥಾಪಿಸಿದ ಶ್ರೀಕೃಷ್ಣ ವೃಂದಾವನ ದೇಗುಲದ ಸಭಾಂಗಣದಲ್ಲಿ ಜುಲೈ 20ರಂದು ಪಟ್ಲ ಸತೀಶ್ ಶೆಟ್ಟರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಪ್ರದರ್ಶನ ಜರಗಿತು.ಮರುದಿನ ಕರಾವಳಿಯ ಯಕ್ಷಗಾನ ಇತಿಹಾಸದಲ್ಲೊಂದು ಮಹತ್ವದ ಘಟನೆಯೆಂಬಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ 34ನೇ ಘಟಕ ಅಮೆರಿಕದಲ್ಲಿ ಉದಿಸಿತು. ಇದರಂಗವಾಗಿ ಶ್ರೀನಿವಾಸ ಕಲ್ಯಾಣ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ನಾವೂ ಯಕ್ಷಗಾನ ವೇಷಧಾರಿಗಳಾಗಿ ರಂಗಸ್ಥಳವೇರಿದ್ದು ಒಂದು ವಿಶೇಷ ಅನುಭವ. ಈ ಲೇಖಕನೂ ಸೇರಿದಂತೆ ಪ್ರೊ| ಎಂ.ಎಲ್. ಸಾಮಗ, ಕದ್ರಿ ನವನೀತ ಶೆಟ್ಟಿ, ಅಜಿತ್‌ಕುಮಾರ್ ಹೆಗ್ಡೆ ಶಾನಾಡಿ, ಪೂವಪ್ಪ ಶೆಟ್ಟಿ ಅಳಿಕೆ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮಹೇಶ್ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಸುಮಂತ್ ಭಟ್ ಮತ್ತು ಕು| ಸ್ಫೂರ್ತಿ ಪೂಂಜ ಪಾತ್ರಧಾರಿಗಳಾಗಿದ್ದು ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಜಯರಾಮ ಭಟ್ ಹಾಗೂ ಪದ್ಮನಾಭ ಉಪಾಧ್ಯಾಯರ ಹಿಮ್ಮೇಳ ಸಾಂಗತ್ಯ ಅನಿವಾಸಿ ಭಾರತೀಯರ ಮನಗೆದ್ದಿತು.
Advertisement
ದೊಡ್ಡಣ್ಣನ ನಾಡಿನಲ್ಲಿ ಪಟ್ಲ ಯಕ್ಷಯಾನ
07:05 PM Jul 25, 2019 | mahesh |
Advertisement
Udayavani is now on Telegram. Click here to join our channel and stay updated with the latest news.