Advertisement

ಬಂಟರ ಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶ‌ನ್‌ ವಿಶೇಷ ಸಭೆ

05:00 PM Apr 18, 2017 | Team Udayavani |

ಮುಂಬಯಿ: ನಾನು ನಿಮ್ಮ ಪ್ರತಿಯೋರ್ವ ಕಲಾಭಿಮಾನಿಗಳ ಮಗು ವಿದ್ದಂತೆ. ನನ್ನ ಕಲಾಸೇವೆಯನ್ನು ನಿಮ್ಮೆಲ್ಲರ ಮನೆಗಳಲ್ಲಿ  ಬೆಳಗಿಸಿ ಪ್ರೋತ್ಸಾಹಿಸಬೇಕು. ನಮ್ಮ ಸಂಸ್ಥೆಯು ಯಕ್ಷಗಾನ ಕಲಾವಿದರಿಗೆ ಇಲ್ಲಿಯವರೆಗೆ 50 ಲಕ್ಷ ರೂ. ಗಳಿಗೂ ಅಧಿಕ ಮೊತ್ತದ ಸಹಾಯ ನಿಧಿಯನ್ನಿತ್ತು ಸ್ಪಂದಿಸಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಭವಿಷ್ಯದಲ್ಲಿ ಹಿರಿಯ ಕಲಾವಿದರಿಗೆ ಮಾಸಿಕ ವೇತನ, ಯಕ್ಷಗಾನ ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯ ಅಡಿಯಲ್ಲಿ 100 ಮನೆಗಳ ನಿರ್ಮಾಣ ಇತ್ಯಾದಿ ಯೋಜನೆಗಳು ನಮ್ಮ ಮುಂದೆ ಇದ್ದು, ಇಂತಹ ಪುಣ್ಯಾದಿ ಮಹಾಕಾರ್ಯಕ್ಕೆ  ಕಲಾಭಿಮಾನಿಗಳ ಸಹಯೋಗ ಅವಶ್ಯವಿದೆ. ಯಾರೊಬ್ಬರಿಗೂ ದೇಣಿಗೆ ಸಹಯೋಗದಲ್ಲಿ ಭಾರವಾಗದಂತೆ ನೋಡಿಕೊಳ್ಳುತ್ತಾ ಕಲಾಕ್ಷೇತ್ರದಲ್ಲಿ ಬದಲಾವಣೆ  ತರುವ ಪ್ರಯತ್ನದತ್ತ ಈ ಸಂಸ್ಥೆ ಕಾರ್ಯ ನಿರತವಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಸತೀಶ್‌ ಶೆಟ್ಟಿ ಪಟ್ಲ ಅವರು ಅಭಿಪ್ರಾಯಿಸಿದರು.

Advertisement

ಎ. 14ರಂದು ಸಂಜೆ ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್‌ ಕಟ್ಟಡದ ವಿಜಯಲಕ್ಷಿ ¾àಮಹೇಶ್‌ ಶೆಟ್ಟಿ (ಬಾಬಾ ಗ್ರೂಪ್‌) ಕಿರು ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಂಗಳೂರು ಇದರ  ಸಮಿತಿಯ ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಫೌಂಡೇಷನ್‌ಗೆ ಮುಂಬಯಿ ಕಲಾ ಪೋಷಕರು, ದಾನಿಗಳ ಸಹಕಾರವನ್ನು ಮರೆಯುವಂತಿಲ್ಲ. ಈಗಾಗಲೇ ಮುಂಬಯಿಗರು ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಯುವ ಪೀಳಿಗೆಗೆ ಅವಕಾಶವನ್ನು ನೀಡುವ ಮೂಲಕ ಸಮಿತಿಯಲ್ಲಿ ಬದಲಾವಣೆ ಅಗತ್ಯವಾಗಿದೆ. ಈ ಬದಲಾವಣೆ ಯಾವುದೇ ರೀತಿಯ ಒತ್ತಡದಿಂದಲ್ಲ. ಈ ಸಂಸ್ಥೆ ನಿಮ್ಮೆಲ್ಲರ ಮನೆಯ ಸಂಸ್ಥೆಯಾಗಿದ್ದು, ಅದನ್ನು ಪೋಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾತಿ, ಮತ, ಧರ್ಮವನ್ನು ಮರೆತು ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಲ ಫೌಂಡೇಷನ್‌ ಮುಂಬಯಿ ಇದರ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಸತೀಶ್‌ ಪಟ್ಲ ಯಕ್ಷಗಾನದ ಮೇರು ಕಲಾವಿದ. ಭವಿಷ್ಯತ್ತಿನ ಪೀಳಿಗೆಗೆ  ಅನುಕರಣೀಯರಾದ ಯುವ ಕಲಾವಿದ ಪಟ್ಲ ಅವರ ದೂರದೃಷ್ಟಿತ್ವ ಅನನ್ಯವಾಗಿದೆ. ಕಲಾರಾಧನೆಯೊಂದಿಗೆ ಕಲಾವಿ ದರ ಬದುಕು-ಬವಣೆಯನ್ನು ಅರ್ಥೈಸಿಕೊಂಡಿ
ರುವ ಅವರಿಂದ ಉತ್ತಮ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿರುವುದು  ಅಭಿನಂದ ನೀಯ. ಅವರ ಸಾರಥ್ಯದ ಈ ಸಂಸ್ಥೆ ನಿಂತ ನೀರಾಗದೆ  ಹರಿಯುವ ನದಿಯಾಗಿ ವಿಶ್ವದಾದ್ಯಂತ ಪಸರಿಸಿ ಕಲೆಯೊಂದಿಗೆ ಕಲಾವಿದರು ಬೆಳೆಯಲಿ ಎಂದು ನುಡಿದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಸಮಿತಿಯ ನೂತನ ಗೌರವಾಧ್ಯಕ್ಷರನ್ನಾಗಿ ಐಕಳ ಹರೀಶ್‌ಶೆಟ್ಟಿ, ಅಧ್ಯಕ್ಷರನ್ನಾಗಿ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಹಾಗೂ ಇತರ ಪದಾಧಿಕಾರಿಗಳನ್ನು ಅವಿರೋಧವಾಗಿ ನೇಮಿಸ ಲಾಯಿತು. ವೇದಿಕೆಯಲ್ಲಿದ್ದ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಸಮಿತಿಯ ನೂತನ ಪದಾಧಿಕಾರಿಗಳಾದ ಕರ್ನೂರು ಮೋಹನ್‌ ರೈ, ರವೀಂದ್ರನಾಥ ಭಂಡಾರಿ, ಪೆರಾರ ಬಾಬು ಶೆಟ್ಟಿ, ಅಜೆಕಾರು ಬಾಲಕೃಷ್ಣ ಶೆಟ್ಟಿ,
ಬೋಲಾ°ಡುಗುತ್ತು ಚಂದ್ರಹಾಸ್‌ ರೈ, ಪೇಟೆಮನೆ ಪ್ರಕಾಶ್‌ಶೆಟ್ಟಿ ಅವರನ್ನು ಪಟ್ಲ ಸತೀಶ್‌ ಶೆಟ್ಟಿ ಗೌರವಿಸಿದರು.

 ಫೌಂಡೇಶನ್‌ನ ಮುಂಬಯಿ ಸಮಿತಿಯ ಸಂಚಾಲಕರಾದ ಐಕಳ ಗಣೇಶ್‌ ವಿ. ಶೆಟ್ಟಿ ಮತ್ತು ಅಶೋಕ್‌ ಶೆಟ್ಟಿ ಪೆರ್ಮುದೆ, ಕೇಂದ್ರೀಯ ಸಮಿತಿಯ ಮಹಿಳಾ ವಿಭಾಗಾಧ್ಯಕ್ಷೆ  ಪೂರ್ಣಿಮಾ ಯತೀಶ್‌ ರೈ ಉಪಸ್ಥಿತರಿದ್ದರು.
ಫೌಂಡೇಶನ್‌ನ  ಮುಂಬಯಿ  ಸಮಿತಿಯ ದಿವಾಕರ್‌ ಶೆಟ್ಟಿ ಇಂದ್ರಾಳಿ, ರವೀಂದ್ರನಾಥ ಎಂ. ಭಂಡಾರಿ, ಐಕಳ ಗುಣಪಾಲ್‌ ಶೆಟ್ಟಿ, ಪ್ರಕಾಶ್‌ ಟಿ. ಶೆಟ್ಟಿ ನಲ್ಯಗುತ್ತು, ವಸಂತ ಶೆಟ್ಟಿ ಪಲಿಮಾರು, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕೊಲ್ಯಾರು ರಾಜು ಶೆಟ್ಟಿ, ಬೊಳ್ನಾಡುಗುತ್ತು ಚಂದ್ರಹಾಸ ರೈ, ಪೇಟೆಮನೆ ಪ್ರಕಾಶ್‌ ಶೆಟ್ಟಿ, ಬಾಬು ಎಸ್‌. ಶೆಟ್ಟಿ ಪೆರಾರ, ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ದಯಾಸಾಗರ್‌ ಚೌಟ, ಎಕ್ಕಾರು ದಯಾಮಣಿ ಸುಧಾಕರ್‌ ಶೆಟ್ಟಿ, ದೆಪ್ಪಣಿಗುತ್ತು ಚಂದ್ರಹಾಸ ಶೆಟ್ಟಿ, ಶಂಕರ್‌ ಗುರುಸ್ವಾಮಿ, ಸುರೇಶ್‌ ಶೆಟ್ಟಿ ಯೆಯ್ನಾಡಿ, ಲತಾ ಪ್ರಭಾಕರ್‌ ಶೆಟ್ಟಿ, ಕರ್ನೂರು ಮೋಹನ್‌ ರೈ, ಮುಂಡ್ಕೂರು ರತ್ನಾಕರ ಶೆಟ್ಟಿ, ಕುಂಠಿನಿ ಪ್ರಕಾಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ ಕಾಪು ಸೇರಿದಂತೆ ಹಲವು ಕಲಾವಿದರು, ಕಲಾ ಸಂಘಟಕರು ಪಾಲ್ಗೊಂಡಿದ್ದರು.

Advertisement

ಪಟ್ಲ ಸತೀಶ್‌ ಶೆಟ್ಟಿ ಅವರು ಕಲಾವಿದರ ಬಗ್ಗೆ ಹೊಂದಿರುವ ಕಾಳಜಿಯನ್ನು ಕಂಡಾಗ ಮನತುಂಬಿ ಬಂತು. ಇಂದು ಫೌಂಡೇಷನ್‌ ಮುಖಾಂತರ ಸಾವಿರಾರು ಕಲಾವಿದರಿಗೆ ಆಸರೆಯಾಗಿ ನಿಂತಿರುವ ಅವರ ಈ ಮಹಾನ್‌ ಕಾರ್ಯಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ಮುಂಬಯಿ ಸಮಿತಿಯು ಇನ್ನಷ್ಟು ಬಲಿಷ್ಠಗೊಂಡು ಅವರ ಆಶಯಗಳನ್ನು ಪೂರೈಸುವಲ್ಲಿ ಶ್ರಮಿಸಬೇಕು. ಪಟ್ಲ ಸತೀಶ್‌ ಶೆಟ್ಟಿ ಅವರು ಫೌಂಡೇಷನ್‌ ಮುಖಾಂತರ ಈಗಾಗಲೇ ಲಕ್ಷಾಂತರ ರೂ. ಗಳನ್ನು ಕಲಾವಿದರ ನೆರವಿಗಾಗಿ ಬಳಸಿದ್ದಾರೆ. ಈ ಹೃದಯವಂತಿಕೆ ಎಲ್ಲರಲ್ಲೂ ಇರುವುದಿಲ್ಲ. ಭವಿಷ್ಯದ ಅವರ ಎಲ್ಲಾ ಕಾರ್ಯಯೋಜನೆಗಳಿಗೆ ಮುಂಬಯಿ ಸಮಿತಿಯ ಪೂರ್ಣ  ಸಹಕಾರವಿದೆ 
                               – ಐಕಳ ಹರೀಶ್‌ ಶೆಟ್ಟಿ 
(ನೂತನ ಗೌರವಾಧ್ಯಕ್ಷರು: ಯಕ್ಷಧ್ರುವ        
     ಪಟ್ಲ ಫೌಂಡೇಷನ್‌ ಮುಂಬಯಿ ಸಮಿತಿ).

ಇಂದು ದೇಶ-ವಿದೇಶಗಳಲ್ಲಿ ಬಂಟ ಸಮಾಜದವರು ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆಯನ್ನು ಕಂಡಾಗ ಆಶ್ಚರ್ಯವಾಗುತ್ತಿದೆ. ಇಂದು ವಿಶ್ವ ಬಂಟ ದಿನಾಚರಣೆಯ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಭಾಗವತರಾದ ಸತೀಶ್‌ ಶೆಟ್ಟಿ ಪಟ್ಲ ಅವರು ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ಇದು ಸತೀಶ್‌ ಪಟ್ಲ ಅವರೊಬ್ಬರ ಸಂಸ್ಥೆಯಲ್ಲ. ನಾವೆಲ್ಲರೂ ಒಂದಾಗಿ ಈ ಸಂಸ್ಥೆಯನ್ನು ಮುಂದುವರಿಸಬೇಕು. ಓರ್ವ ಕಲಾವಿದರಾಗಿ, ಕಲಾವಿದರ ಕ್ಷೇಮಕ್ಕಾಗಿ ಸಂಸ್ಥೆಯನ್ನು ಸ್ಥಾಪಿಸಿರುವುದು ಅಭಿಮಾನಪಡುವ ವಿಷಯವಾಗಿದೆ. ಫೌಂಡೇಷನ್‌ನ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ನನಗೆ ಹೆಮ್ಮೆಯಾಗುತ್ತಿದೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹದಿಂದ ಮುಂಬಯಿ ಸಮಿತಿಯನ್ನು ಇನ್ನಷ್ಟು ಬಲಿಷ್ಠಗೊಳಿಸೋಣ 
                 – ಕಡಂದಲೆ ಸುರೇಶ್‌ ಭಂಡಾರಿ 
   (ನೂತನ ಅಧ್ಯಕ್ಷರು: ಯಕ್ಷಧ್ರುವ ಪಟ್ಲ   
             ಫೌಂಡೇಷನ್‌ ಮುಂಬಯಿ ಸಮಿತಿ).

Advertisement

Udayavani is now on Telegram. Click here to join our channel and stay updated with the latest news.

Next