Advertisement
ಶನಿವಾರ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಉಳ್ಳವರು ಇಲ್ಲದವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.
ಪಟ್ಲ ಸತೀಶ ಶೆಟ್ಟಿ ಯಕ್ಷಗಾನವನ್ನು ಉನ್ನತ ಮಟ್ಟದತ್ತ ಕೊಂಡೊಯ್ಯುತ್ತಿದ್ದಾರೆ. ಭಾಗವತಿಕೆಯೊಂದಿಗೆ ಹೃದಯ ವಂತಿಕೆ ತೋರಿಸುತ್ತಿದ್ದಾರೆ. ಅವರ ತಂಡದ ಸೇವಾ ಕಾರ್ಯದ ಮೇಲಿನ ಪ್ರೀತಿಯಿಂದ ಟ್ರಸ್ಟ್‌ನ ಗೌರವಾ ಧ್ಯಕ್ಷನಾಗಲು ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು. ಟ್ರಸ್ಟ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಸ್ವಾಗತಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಎಂ.ಎಲ್. ಸಾಮಗ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸಹಾಯಕ ಆಯುಕ್ತ ಮದನಮೋಹನ್, ಹಿರಿಯ ಮಾರ್ಗದರ್ಶಕ ಪಟ್ಲ ಮಹಾಬಲ ಶೆಟ್ಟಿ, ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಶಿಧರ ಬಿ. ಶೆಟ್ಟಿ ಬರೋಡ, ಸಿಎ ದಿವಾಕರ ರಾವ್ ಕಟೀಲು, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷರಾದ ಡಾ| ಮನು ರಾವ್, ದುರ್ಗಾಪ್ರಕಾಶ್ ಪಡುಬಿದ್ರಿ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ಸಂಘಟನ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರ್ವಹಿಸಿ ದರು. ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ವಂದಿಸಿದರು.
Related Articles
ಮೂವರು ಕಲಾವಿದರಿಗೆ ತಲಾ 25 ಸಾವಿರ ರೂ. ವೈದ್ಯಕೀಯ ನೆರವು, ಇಬ್ಬರು ಕಲಾವಿದರಿಗೆ ಮನೆ ನಿರ್ಮಾಣಕ್ಕೆ ತಲಾ 1 ಲ.ರೂ. ನೆರವು ವಿತರಿಸಲಾಯಿತು. ಯಕ್ಷಗಾನ ಸೇರಿದಂತೆ ಬಹುಮುಖ ಪ್ರತಿಭೆ, ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವೃಂದಾ ಕೊನ್ನಾರ್ ಅವರನ್ನು ಸಮ್ಮಾನಿಸಲಾಯಿತು.
Advertisement
ಯಕ್ಷ ಧ್ರುವ ಪಟ್ಲ ಫೌಂಡೇಶನ್ 6 ವರ್ಷಗಳಲ್ಲಿ ಅಶಕ್ತ ಕಲಾವಿದರಿಗೆ ಸುಮಾರು 7.50 ಕೋ.ರೂ. ಆರ್ಥಿಕ ನೆರವು ನೀಡಿದೆ ಎಂದು ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಇನ್ನಷ್ಟು ಕಲಾವಿದರಿಗೆಸಹಾಯವಾಗಲಿ
ಪದಗ್ರಹಣ ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ನೆರವಾಗುವ ಮೂಲಕ ಸರಕಾರದ ಜತೆ ಕೈಜೋಡಿಸಿದೆ. ಟ್ರಸ್ಟ್‌ನ ಸಾಮರ್ಥ್ಯ ಹೆಚ್ಚಾಗಿ ಇನ್ನಷ್ಟು ಕಲಾವಿದರಿಗೆ ಸಹಾಯ ದೊರೆಯಲಿ ಎಂದರು. ತಾನು ಬಾಲ್ಯದಿಂದಲೇ ಯಕ್ಷಗಾನ ಪ್ರಿಯನಾಗಿದ್ದು ಐಎಎಸ್ ತರಬೇತಿ ವೇಳೆ “ಇಂಡಿಯಾ ಡೇ ಸೆಲೆಬ್ರೇಷನ್’ನಲ್ಲಿ ಯಕ್ಷಗಾನ ದೃಶ್ಯ ಪ್ರಸ್ತುತಪಡಿಸಿದ್ದನ್ನು ನೆನಪಿಸಿಕೊಂಡರು.