ಮುಂಬಯಿ: ಬಡಗು ತಿಟ್ಟಿನ ಯಕ್ಷಗಾನವನ್ನು ಮುಂಬಯಿಯಲ್ಲಿ ಉಳಿಸಿ- ಬೆಳೆಸಬೇಕೆನ್ನುವ ಉದ್ದೇಶದಿಂದ ಮೀರಾರೋಡ್ ಪರಿಸರದ ಮಕ್ಕಳಲ್ಲಿ ಯಕ್ಷಗಾನ ಬಗ್ಗೆ ಆಸಕ್ತಿ ಬೆಳೆಸಿ ಅವರಿಗೆ ತರಬೇತಿಯನ್ನು ನೀಡಿ ಮಕ್ಕಳಲ್ಲಿ ಕಲೆಯ ಅಭಿರುಚಿಯನ್ನು ಮೂಡಿಸುತ್ತಿರುವ ಭಾಗವತ ಶಂಕರನಾರಾಯಣ ಎಳ್ಳಾರೆ ನೇತೃತ್ವದ ಯಕ್ಷ ವೈಭವ ಮಕ್ಕಳ ಮೇಳ ಮುಂಬಯಿ ಇದರ 7 ನೇ ವಾರ್ಷಿಕ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆಯು ಜು. 16 ರಂದು ಸಂಜೆ ಮೀರಾರೋಡ್ ಮೀರಾಗಾಂವ್‌ನ ಶ್ರೀ ಮಹಾಲಿಂಗೇಶ್ವರ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಮೀರಾರೋಡ್ ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ಧನ ಭಟ್ ಅವರ ಆಶೀರ್ವಾದಗಳೊಂದಿಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಬಾ ರಂಜನ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮವು ನೆರವೇರಿತು. ಬಾಲ ಕಲಾವಿದರ ಉಪಸ್ಥಿತಿಯಲ್ಲಿ ಗಣ್ಯರು ದೀಪಪ್ರಜ್ವಲಿಸಿ ಯಕ್ಷಗಾನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು. ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಹಾಮಂಗಳಾರತಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರುಗಳಾದ ಮಾಧವ ಭಟ್, ವಿಠಲ್ ಭಟ್, ಸುರೇಶ್ ಭಟ್ ಕುಂಟಾಡಿ, ಗೌರಿ ಶಂಕರ ಭಟ್, ಅನಿಲ್ ಶೆಟ್ಟಿ, ಚಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ, ಅಜಿತ್ ಶೆಟ್ಟಿ ಬೆಳ್ಮಣ್, ಹರೀಶ್ ಶೆಟ್ಟಿ ನಿಂಜೂರು, ಸತೀಶ್ ಶೆಟ್ಟಿ, ಕುಸುಮಾಕರ ಶೆಟ್ಟಿ, ಶರತ್ ಶೆಟ್ಟಿ, ದಿನೇಶ್ ಕುಲಾಲ್, ಚಂದ್ರಶೇಖರ ಶೆಟ್ಟಿ, ಸುರೇಶ್ ಪೂಜಾರಿ, ಕುಮಾರ್ ಪೂರ್ಣಾನಂದ ನಾಯಕ್ ಎಳ್ಳಾರೆ, ಆರತಿ ಶೆಟ್ಟಿ ನೆಂಜಾರು, ವಿನಯಾ ಎಚ್. ಶೆಟ್ಟಿ, ಉಷಾ ಬಿ. ಶೆಟ್ಟಿ, ನಯನಾ ಸಿ. ಶೆಟ್ಟಿ, ನಿಶಾ ಎಸ್. ಖಾರ್ವಿ, ಪ್ರಮೋದಾ ಮೂಲ್ಯ, ಜ್ಯೋತಿ ಎಸ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶಿಬಿರಕ್ಕೆ ಶುಭಹಾರೈಸಿದರು.
ಭಾಗವತ ಶಂಕರ ನಾಯಕ್ ಎಳ್ಳಾರೆ ಅವರು ಯಕ್ಷಗಾನದ ಹಾಡನ್ನು ಹಾಡಿ ಮಕ್ಕಳನ್ನು ಕುಣಿಸಿದರು. ಸಾಂತಿಂಜ ಜನಾರ್ಧನ ಭಟ್ ಅವರು ಅತಿಥಿಗಳನ್ನು ಗೌರವಿಸಿ ಪ್ರಸಾದ ವಿತರಣೆಗೈದರು. ಪ್ರತೀ ಭಾನುವಾರ ಅಪರಾಹ್ನ 3 ರಿಂದ ಸಂಜೆ 7 ರವರೆಗೆ ತರಬೇತಿಯು ನಡೆಯಲಿದ್ದು, ಆಸಕ್ತರು ನಿಶುಲ್ಕವಾಗಿ ತರಬೇತಿಯನ್ನು ಪಡೆಯಬಹುದು ಎಂದರು.