Advertisement
ಹನುಮಗಿರಿ ಮೇಳದ ಕಲಾವಿದ ಕೆ.ಎನ್.ಸುಬ್ರಾಯ ಹೊಳ್ಳ ಮತ್ತು ಕಟೀಲು ಮೇಳದ ಕಲಾವಿದ ಸುರೇಶ್ ಕುಪ್ಪೆಪದವುಇವರನ್ನು ದಿ| ಬೈಲು ಮೂಡುಕರೆಗುತ್ತು ರಾಜೀವ ಭಂಡಾರಿ ಸ್ಮರಣಾರ್ಥ ಅವರ ಪುತ್ರ ಯಕ್ಷತರಂಗಿಣಿಯ ಮುಖ್ಯಸ್ಥ ಉಮೇಶ್ ಭಂಡಾರಿ ಸಮ್ಮಾನಿಸಿದರು.
ಪೆರಾರ, ಹವ್ಯಾಸಿ ಕಲಾವಿದ ಜಿ.ಶ್ರೀನಿವಾಸ ಭಟ್ ಕೈಕಂಬ, ಸಮಾಜ ಸೇವಕಿ ಅನಸೂಯಾ ಕಾಜವ ಕುಪ್ಪೆಪದವು ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಕೆ.ಎನ್. ಸುಬ್ರಾಯ ಹೊಳ್ಳ, ಹಿರಿಯ ಪ್ರಮುಖ ಕಲಾವಿದರೊಂದಿಗೆ ಹವ್ಯಾಸಿ ಮತ್ತು ಸಮಾಜ ಸೇವಕರನ್ನು ಪುರಸ್ಕರಿಸುತ್ತಿರುವ ಯಕ್ಷ ತರಂಗಿಣಿಯ ಪರಂಪರೆ ಶ್ಲಾಘನೀಯ ಎಂದರು.
Related Articles
Advertisement
ಉದ್ಯಮಿ ಹರಿರಾವ್ ಕೈಕಂಬ, ಡಾ| ಶ್ರೀಪತಿ ಕಿನ್ನಿಕಂಬಳ, ಕೆ.ರಾಜೀವ, ಶಾಂತಾರಾಮ ಕುಡ್ವ ಮೂಡಬಿದಿರೆ, ಹನುಮಗಿರಿ ಮೇಳದ ವ್ಯವಸ್ಥಾಪಕ ದಿವಾಕರ ಕಾರಂತ, ಯಕ್ಷತರಂಗಿಣಿಯ ಸದಸ್ಯರಾದ ವಿ.ಸಿ.ಶೇಖರ್, ವಿ.ಸಿ. ಮೋಹನ್, ಹರಿಶ್ವಂದ್ರ ಆಚಾರ್ಯ ಎ.ಜೆ., ನಾಗೇಶ್ ಜೋಗಿ, ರಾಜೇಶ್ ರಾವ್,ಪ್ರಾಣೇಶ್, ಶಿವರಾಯ ಪ್ರಭು, ಕೆ.ವರುಣಾಕ್ಷ, ಕೆ.ಲೋಕೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಧರ್ ರಾವ್ ವಂದಿಸಿದರು. ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ‘ಭೀಷ್ಮ ಪ್ರತಿಜ್ಞೆ-ಪಂಚವಟಿ -ವಾಲಿಮೋಕ್ಷ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಿತು.