Advertisement

ಯಕ್ಷಪ್ರಿಯ ಬಳಗ ಮೀರಾ ಭಾಯಂದರ್‌ ವತಿಯಿಂದ ಸಾಧಕರಿಗೆ ಸಮ್ಮಾನ

12:24 PM Apr 21, 2019 | Team Udayavani |

ಮುಂಬಯಿ: ಯಕ್ಷಪ್ರಿಯ ಬಳಗ ಮೀರಾ ಭಾಯಂದರ್‌ ಇದರ 4ನೇ ವಾರ್ಷಿಕೋತ್ಸವ ಮತ್ತು ಸಮ್ಮಾನ ಸಮಾರಂಭವು ಎ. 15 ರಂದು ಸಂಜೆ ಮೀರಾರೋಡ್‌ ಪೂರ್ವದ, ಸಾಯಿಬಾಬಾ ನಗರದಲ್ಲಿರುವ ಸೈಂಟ್‌ ಥಾಮಸ್‌ ಚರ್ಚ್‌ ಸಭಾಗೃಹದಲ್ಲಿ ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್‌ ನಲಸೋಪರ ಇದರ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಶ್‌ ಶೆಟ್ಟಿ
ಕಾಪು, ಸುರೇಶ್‌ ಇರ್ವತ್ತೂರು ಮಲಾಡ್‌ ಮತ್ತು ಗುಣಕಾಂತ್‌ ಶೆಟ್ಟಿ
ಕರ್ಜೆ ಇವರನ್ನು ಗಣ್ಯರ ಸಮ್ಮುಖಶಾಲು ಹೊದೆಸಿ. ಫಲಪುಷ್ಪ, ಸ್ಮರಣಿಕೆ
ಯನ್ನಿತ್ತು ಸಮ್ಮಾನಿಸಲಾಯಿತು.

ಪೂರ್ಣಿಮಾ ಎಂ. ಪೂಜಾರಿ, ವಿನೋದಾ ಕೊಠಾರಿ, ಸುಂದರಿ ಆರ್‌.
ಕೋಟ್ಯಾನ್‌ ಅವರು ಸಮ್ಮಾನ ಪತ್ರವಾಚಿಸಿದರು. ಸ್ಥಾಪಕ ಯಕ್ಷಗುರು ನಾಗೇಶ ಕುಮಾರ್‌ ಪೊಳಲಿ ಸ್ವಾಗತಿಸಿದರು. ನಟ ಜಿ. ಕೆ. ಕೆಂಚನೆಕೆರೆ ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ಶೆಟ್ಟಿ, ಕೊಟ್ರಾಪಾಡಿಗುತ್ತು ವಂದಿಸಿದರು.

ವೇದಿಕೆಯಲ್ಲಿ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನ ಮೀರಾ ರೋಡಿನ ಪ್ರಧಾನ ಆರ್ಚಕ ಸಾಂತಿಂಜ ಜನಾರ್ದನ ಭಟ್‌, ದಹಿಸರ್‌ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಶಂಕರಗುರು ಭಟ್‌, ಗುರು ಶಂಕರ ಭಟ್‌, ವಸಾಯಿ ಕರ್ನಾಟಕ ಸಂಘ ಅಧ್ಯಕ್ಷ ಪಾಂಡು ಎಲ…. ಶೆಟ್ಟಿ, ಮೀರಾ ಡಹಾಣು ಬಂಟ್ಸ್‌ ಗೌರವಾಧ್ಯಕ್ಷ ಡಾ| ವಿರಾರ್‌ ಶಂಕರ್‌ ಶೆಟ್ಟಿ, ಬಂಟ್ಸ್‌ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಆರ್‌. ಪಕ್ಕಳ, ವಸಾಯಿ ಕರ್ನಾಟಕ ಸಂಘದ ಸಲಹೆಗಾರ ಒ. ಪಿ. ಪೂಜಾರಿ, ವಸಾಯಿ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ಬಿಲ್ಲವರ ಅಸೋಸಿಯೇಶನ್‌ ನಲಸೋಪರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಬೊಂಟ್ರ, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡು ಸ್ಥಳೀಯ ಸಮಿತಿಯ ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಕಲಾ ಪೋಷಕ ಗಣೇಶ ಸುವರ್ಣ, ಶೇಖರ ಪೂಜಾರಿ ಮುರಳೀಧರ ಮಂಚಿತ್ತಾಯ, ಭಾಗವತ ಗಣೇಶ್‌ ಮಯ್ಯ ವರ್ಕಾಡಿ, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡು ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸುಂದರ ಎ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಗುರು ನಾಗೇಶ್‌ ಕುಮಾರ್‌ ಪೊಳಲಿ ಅವರ ನಿರ್ದೇಶನದಲ್ಲಿ ಯಕ್ಷ ಪ್ರಿಯ ಬಳಗದ ಕಲಾವಿದ ರಿಂದ ಬಬ್ರುವಾಹನ ಕಾಳಗ ಮತ್ತು ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Advertisement

ಕಲಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next