Advertisement

Mantralaya: ರಾಯರ ಆರಾಧನೆಯಲ್ಲಿ ಯದುವೀರ್ ಒಡೆಯರ್ ಭಾಗಿ

11:44 AM Aug 22, 2024 | |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಲ್ಲಿ ಮೈಸೂರು ರಾಜ ಮನೆತನದ ಶ್ರೀ ಯದುವೀರ್ ಒಡೆಯರ್ ಪಾಲ್ಗೊಂಡರು.

Advertisement

ಬುಧವಾರ ರಾತ್ರಿ ಆಗಮಿಸಿದ ಅವರನ್ನು ಶ್ರೀಮಠದಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮೊದಲಿಗೆ ಗ್ರಾಮದೇವಿ ಮಂಚಾಲಮ್ಮ ಹಾಗೂ ರಾಯರ ಬೃಂದಾವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬಳಿಕ ರಾಯರ ಬೃಂದಾವನ ಸುತ್ತಲಿನ ಶಿಲಾಮಂಟಪಕ್ಕೆ ಅಳವಡಿಸುತ್ತಿರುವ ಸ್ವರ್ಣಕವಚವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಯದುವೀರ್ ಒಡೆಯರ್ ಜಂಟಿಯಾಗಿ ಲೋಕಾರ್ಪಣೆ ಮಾಡಿದರು.

Advertisement

ಬಳಿಕ ಮಠದಲ್ಲಿ ನಡೆದ ಪ್ರಹ್ಲಾದರಾಜರ ಗಜವಾಹನೋತ್ಸವದಲ್ಲಿ ಪಾಲ್ಗೊಂಡು ಪ್ರಹ್ಲಾದರಾಜರಿಗೆ ಚಾಮರ ಸೇವೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next