Advertisement

ಯಡೂರು: ಸರಕಾರಿ ಕಾಲೇಜಿನಲ್ಲಿ  ರಸ್ತೆ ಸುರಕ್ಷತೆ ಸಪ್ತಾಹ ಆಚರಣೆ

01:00 AM Feb 26, 2019 | Harsha Rao |

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ಹಾಗು ಲಯನ್ಸ್‌ ಸಂಸ್ಥೆಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.

Advertisement

ಕಾರ್ಯಕ್ರಮಕ್ಕೆ ಡಿವೈಎಸ್‌ಪಿ ಮುರಳೀಧರ್‌ ಚಾಲನೆ ನೀಡಿದರು. ನಂತರ ಮಾತನಾಡಿ, ಶಾಲಾ, ಕಾಲೇಜು ವಾಹನಗಳ ಚಾಲಕರಿಗೆ ಸರ್ವೋತ್ಛ ನ್ಯಾಯಾಲಯ ಕೆಲವು ಕಟ್ಟು ಪಾಡುಗಳನ್ನು ಮಾಡಿದೆ. ಚಾಲಕರು ರಸ್ತೆ ಸುರಕ್ಷತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಭಾರಿ ವಾಹನ ಚಾಲನೆ ಮಾಡುವವರು ಕನಿಷ್ಟ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು. ಸಮವಸ್ತ್ರ ಧರಿಸಿ ವಾಹನ ಚಾಲನೆ ಮಾಡಬೇಕು. ನಿಗಧಿತ ಸಂಖ್ಯೆ ವಿದ್ಯಾರ್ಥಿಗಳನ್ನು ಮಾತ್ರ ವಾಹನದಲ್ಲಿರಬೇಕು. ವೇಗದ ಚಾಲನೆ ಮಾಡಬಾರದು, ವಾಹನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಹಾಗು ಪೋಷಕರ ಮಾಹಿತಿಯನ್ನು ವಾಹನದಲ್ಲಿ ಅಳವಡಿಸಿರಬೇಕೆಂದರು.

ಲಯನ್ಸ್‌ ಸಂಸ್ಥೆ ಅಧ್ಯಕ್ಷ‌ ಯೋಗೇಶ್‌, ಕಾಲೇಜಿನ ಪ್ರಾಂಶುಪಾಲ‌ ಪೊ›|  ಶ್ರೀಧರ್‌, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್‌, ಕುಶಾಲನಗರದ ಟ್ರಾಫಿಕ್‌ ಇನ್ಸೆಪೆಕ್ಟರ್‌  ಸೋಮೇಗೌಡ ಲಯನ್ಸ್‌ ಪದಾಧಿಕಾರಿಗಳಾದ ಎ.ಆರ್‌. ಮುತ್ತಣ್ಣ, ಮಂಜುನಾಥ್‌ ಚೌಟ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next