Advertisement

ನಾಡಿದ್ದು ವಿಭಾಗ ಮಟ್ಟದ ಚಿಂತನಾ ಸಮಾವೇಶ

06:44 PM Feb 26, 2021 | Team Udayavani |

ಯಾದಗಿರಿ: ಜಿಲ್ಲೆಯ ಶಹಾಪುರದ ಸಾರಿಪುತ್ರ ಬುದ್ಧವಿಹಾರ, ಧಮ್ಮಗಿರಿಯಲ್ಲಿ ಫೆ.28ರ ಬೆಳಿಗ್ಗೆ 11ರಂದು ನಡೆಯುವ ಕಲಬುರಗಿ ವಿಭಾಗದ ಮಟ್ಟದ ಚಿಂತನಾ ಸಮಾವೇಶ ಮತ್ತು ದೀಕ್ಷಾ ಕಾರ್ಯಕ್ರಮದಲ್ಲಿ ಎಲ್ಲಾ ದಲಿತ ನಾಯಕರಿಗೆ ಬೌದ್ಧ  ದೀಕ್ಷೆ ನೀಡಲಾಗುವುದು ಎಂದು ಪೂಜ್ಯ ಬಂತೆ ವರಜ್ಯೋತಿ ಅಣದೂರ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಅಂಬೇಡ್ಕರ್‌ ಅವರು ಬೌದ್ಧ ದಿಧೀಕ್ಷೆ ಪಡೆದು ಅಕ್ಟೋಬರ್‌ಗೆ 65 ವರ್ಷಗಳಾಗಲಿದ್ದು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅಂಬೇಡ್ಕರ್‌ ನೀಡಿರುವ ಸಂಪತ್ತು ಎಂದು ವ್ಯಾಖ್ಯಾನಿಸಿದರು. ಶಹಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ವಿವಿಧ ಜಿಲ್ಲೆಗಳ ಬಂತೆಜಿಗಳು ಆಗಮಿಸಲಿದ್ದಾರೆ ಎಂದರು.

ಮೊದಲು ಮುಖಂಡರಿಗೆ ದೀಕ್ಷೆ ನೀಡುವುದರಿಂದ ಬೌದ್ಧ ಧರ್ಮದ ಅರ್ಥ, ಸಾರವನ್ನು ಅರಿತು ಹಳ್ಳಿ-ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಹಾಗಾಗಿ ಮೊದಲು ನಾಯಕರಿಗೆ ದೀಕ್ಷೆ ನೀಡುವ ನಿರ್ಧಾರ ಮಾಡಲಾಗಿದೆ ಎಂದರು.

ದಲಿತ ಮುಖಂಡ ಮರೆಪ್ಪ ಚಿಟ್ಟರಕರ್‌ ಮಾತನಾಡಿ, ಬೌದ್ಧ ಧಮ್ಮದ ಕಡೆ ನಮ್ಮ ಏಕತಾ ನಡೆ ಕಾರ್ಯಕ್ರಮಕ್ಕೆ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿದ್ದು, ದಲಿತ ಸಂಘಟನೆಗಳ ಒಕ್ಕೂಟ, ಬೌದ್ಧ ದಾಖಲಾತಿ ಆಂದೋಲನ ಹಾಗೂ ವಿಶ್ವ ಧಮ್ಮ ಸಂಘ ಬೆಂಗಳೂರು ಸಹಯೋಗದಲ್ಲಿ ನಡೆಯಲಿದ್ದು, ಡಾ| ಅಂಬೇಡ್ಕರ್‌ರ ಧಮ್ಮ ಕ್ರಾಂತಿಯ ಪೂರ್ವಾಪರ, ಧಮ್ಮದ ಬಗ್ಗೆ ದಲಿತ ಸಂಘಟನೆಗಳು ಈವರೆಗೆ ತಳೆದ ನಿಲುವು-ಆತ್ಮಾವಲೋಕನ ಮತ್ತು ಧಮ್ಮದಲ್ಲಿ ಎಲ್ಲಾ ಜಾತಿ ಉಪಜಾತಿಗಳನ್ನು ಒಳಗೊಳ್ಳುವ ಬಗೆ ಹಾಗೂ 2021ರ ಬೃಹತ್‌ ಧಮ್ಮ ಧೀಕ್ಷಾ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚಿಂತನೆ ನಡೆಯಲಿದೆ ಎಂದು ವಿವರಿಸಿದರು. ಈ ವೇಳೆ ಮಹಾದೇವ ದಿಗ್ಗಿ, ಶರಣು ನಾಟೇಕರ್‌, ಅಶೋಕ ಹೊಸಮನಿ, ಗೋಪಾಲ ತಳಗೇರಾ, ಶಿವಕುಮಾರ ಕುರಕುಂಬಳ, ಉಪೇಂದ್ರ ವಟಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next