Advertisement

ಸಯೋಗ ಬಜಾರ್‌ಗೆ ಯದುವೀರ ಚಾಲನೆ

09:04 PM Dec 07, 2019 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರೀಮಿಯರ್‌ಯೋಗಾ ಲೈಫ್ಸ್ಟೆçಲ್‌ ಬಾಟಿಕ್‌ ಆಗಿರುವ ಸಯೋಗ ಅತ್ಯುತ್ತಮ ಗುಣಮಟ್ಟದ ಯೋಗ ಮತ್ತು ಕ್ರೀಡಾ ಉತ್ಪನ್ನಗಳ ಸಂಗ್ರಹವನ್ನು ಹೊಂದಿರುವ ಸಯೋಗ ಬಜಾರ್‌, ವಿನೂತನವಾದ ಮತ್ತು ನೈಸರ್ಗಿಕವಾದ ಉತ್ಪನ್ನಗಳೊಂದಿಗೆ ಸ್ಥಳೀಯಮಟ್ಟದ ಪ್ರತಿಭೆಗಳ ಅನಾವರಣ ಮತ್ತು ಪ್ರದರ್ಶನ ಮಾಡುವ ಸಲುವಾಗಿ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

Advertisement

ಈ ವಾರ್ಷಿಕ ಕಾರ್ಯಕ್ರಮವನ್ನು ಶನಿವಾರ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಸಯೋಗದ ಮಾಲೀಕರಾದ ಶೃತಿರಂಗ ಉದ್ಘಾಟಿಸಿದರು.

ಅತ್ಯಾಕರ್ಷಕವಾಗಿವೆ: ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಸಯೋಗ ಬಜಾರ್‌ ಒಂದು ಅತ್ಯುತ್ತಮವಾದ ಕಾರ್ಯಕ್ರಮವಾಗಿದೆ. ನಾನು ಇದರಲ್ಲಿ ಭಾಗಿಯಾಗಿರುವುದಕ್ಕೆ ಸಂತಸವೆನಿಸುತ್ತಿದೆ. ಇಲ್ಲಿ ಪ್ರದರ್ಶಿಸಲಾಗುತ್ತಿರುವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು ಅತ್ಯಾಕರ್ಷಕವಾಗಿವೆ ಎಂದರು.

ಸಾರ್ವಜನಿಕರಿಗೆ ಮುದ: ಸಯೋಗದಲ್ಲಿ ಅತ್ಯದ್ಭುತವಾದ ಮತ್ತು ಸುಂದರವಾದ ಕುಸುರಿ ಕಲೆಯನ್ನು ಹೊಂದಿರುವ ಮತ್ತು ಅತ್ಯುತ್ಕೃಷ್ಠವಾದ ಕೌಶಲ್ಯ ಹೊಂದಿರುವ ಪ್ರತಿಭೆಗಳ ಅನಾವರಣವಾಗಿರುವುದು ನನಗೆ ತುಂಬಾ ಕೌತುಕವನ್ನುಂಟು ಮಾಡಿದೆ. ಎಲ್ಲಾ ಬಗೆಯ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗುತ್ತಿರುವುದು ಸಾರ್ವಜನಿಕರಿಗೆ ಮುದ ನೀಡುತ್ತದೆ. ಈ ಮೂಲಕ ಪ್ರದರ್ಶನವು ವೀಕ್ಷಕರಿಗೆ ಒಂದು ಅತ್ಯದ್ಭುತವಾದ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ ಎಂದರು.

ಸ್ಥಳೀಯರ ಪ್ರತಿಭೆ ಅನಾವರಣ: ಸಯೋಗ ಮಾಲೀಕರಾದ ಶೃತಿರಂಗ ಮಾತನಾಡಿ, ನಗರದಲ್ಲಿ ನಾವು ಸಯೋಗ ಬಜಾರ್‌ಅನ್ನು ಆಯೋಜಿಸುತ್ತಿರುವುದಕ್ಕೆ ಅತ್ಯಂತ ಸಂತಸವೆನಿಸುತ್ತಿದೆ. ನಮ್ಮ ಸ್ಥಳೀಯ ಮಟ್ಟದ ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಪ್ರತಿಭೆಗಳನ್ನು ಅನಾವರಣ ಮಾಡಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಗ್ರಾಹಕರ ಕಣ್ಣಿಗೆ ಮುದ ನೀಡುವುದಷ್ಟೇ ಅಲ್ಲದೇ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಪ್ರತಿಭೆಗಳನ್ನು ಹೊರಜಗತ್ತಿಗೆ ಅನಾವರಣ ಮಾಡುವ ಒಂದು ವೇದಿಕೆಯನ್ನು ಈ ಪ್ರದರ್ಶನ ನೀಡುತ್ತಿದೆ ಎಂದು ತಿಳಿಸಿದರು.

Advertisement

ವಿವಿಧ ಉತ್ಪನ್ನಗಳ ಪ್ರದರ್ಶನ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಆಭರಣಗಳು, ಪಾದರಕ್ಷೆಗಳು, ಸಿದ್ಧ ಉಡುಪುಗಳು, ಹೋಂಕೇರ್‌ ಮತ್ತು ಪರಿಸರ ಸ್ನೇಹಿ ಸ್ಟೆಷನರಿಗಳು, ಸೆರಾಮಿಕ್‌ ವೇರ್‌ ಸೇರಿದಂತೆ ಇನ್ನಿತರೆ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಟರೋಟ್‌ಕಾರ್ಡ್‌ ರೀಡಿಂಗ್‌, ನ್ಯೂಮರೋಲಾಜಿ, ಕ್ರಿಸ್ಟಲ್‌ ಹೀಲಿಂಗ್‌ ಮತ್ತು ಇನ್ನಿತರೆ ವಿನೋದದ ಚಟುವಟಿಕೆಗಳ ಅನುಭವವನ್ನು ಪಡೆಯಬಹುದಾಗಿದೆ.

ಕಾನೂನಿನ ಮೂಲಕವೇ ಶಿಕ್ಷೆಯಾಗಬೇಕು: ಹೈದ್ರಾಬಾದ್‌ ಅತ್ಯಾಚಾರಿಗಳ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದ್ರಬಾದ್‌ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ.

ಎನ್‌ಕೌಂಟರ್‌ ಘಟನೆಗಳು ಯಾರಿಗೂ ಸಂತೋಷ ತರಲ್ಲ. ಆದರೆ, ಸಮಾಧಾನ ತಂದಿದೆ. ರಾಜರ ಆಳ್ವಿಕೆ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸವಿದೆ. ಹೀಗಾಗಿ ಕಾನೂನಿನ ಬದಲಾವಣೆ ಬಗ್ಗೆ ಮಾತನಾಡುವುದಕ್ಕಿಂತ ಕಾನೂನಿನ ಮೂಲಕವೇ ತಪ್ಪತಸ್ಥರಿಗೆ ತ್ವರಿತವಾಗಿ ಶಿಕ್ಷೆ ಯಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next