Advertisement

ಶ್ರಮಿಕ್‌ ರೈಲಿನಲ್ಲಿ ವಲಸಿಗರು ವಾಪಸ್‌

05:24 PM May 18, 2020 | Team Udayavani |

ಯಾದಗಿರಿ: ಮಹಾರಾಷ್ಟ್ರದ ಸಿಂಧೂದುರ್ಗಾದಿಂದ ರಾಜ್ಯದ ಯಾದಗಿರಿ, ರಾಯಚೂರು, ಕಲಬುರಗಿ, ಬೀದರ, ವಿಜಯಪುರ, ಬಾಗಲಕೋಟ, ಕೊಪ್ಪಳ, ಶಿವಮೊಗ್ಗ, ಉಡುಪಿ, ರಾಮನಗರ ಹಾಗೂ ಉತ್ತರ ಕನ್ನಡದ 1400 ವಲಸೆ ಕಾರ್ಮಿಕರನ್ನು ಕರೆದುಕೊಂಡು ಶ್ರಮಿಕ ರೈಲು ಮಧ್ಯಾಹ್ನ 3:00ಕ್ಕೆ ನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು.

Advertisement

ಎಲ್ಲ ಪ್ರಯಾಣಿಕರ ಹೆಸರು ಮತ್ತು ಇನ್ನಿತರ ವಿವರವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ನೋಂದಾಯಿಸಿಕೊಂಡು ವೈದ್ಯಕೀಯ ತಪಾಸಣೆ ಮಾಡಿದ ನಂತರ ಆಹಾರ, ನೀರು ನೀಡಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ ಗಳ ಮೂಲಕ ಅವರ ಗ್ರಾಮಗಳಿಗೆ ಕಳುಹಿಸಲಾಯಿತು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ, ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಸಹಾಯಕ ಆಯುಕ್ತ ಶಂಕರ ಸೋಮನಾಳ, ಡಿಎಚ್‌ಒ ಎಂ.ಎಸ್‌. ಪಾಟೀಲ, ಟಿಎಚ್‌ಒ ಹಣಮಂತರೆಡ್ಡಿ ಮದ್ನಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸಾರಿಗೆ ಸಂಸ್ಥೆ ವಿಭಾಗಾಧಿಕಾರಿ ಶ್ರೀಹರಿ ಬಾಬು, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಇದ್ದರು. ನಿಲ್ದಾಣದಲ್ಲಿ ಪೋಲಿಸ್‌ ಭದ್ರತೆ ಹೆಚ್ಚಾಗಿ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next