Advertisement

ಮನೆಯಲ್ಲೇ ಯೋಗ ದಿನಾಚರಣೆ

07:00 PM Jun 24, 2020 | Naveen |

ಯಾದಗಿರಿ: ಭಾರತ ಸರ್ಕಾರದ ಆಯುಷ್‌ ಮಂತ್ರಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ರವಿವಾರ ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿದರು.

Advertisement

ಪ್ರಸ್ತುತ ಕೋವಿಡ್‌-19 ಕಾರಣದಿಂದ ಸಾರ್ವಜನಿಕ ಸಭೆ, ಸಮಾರಂಭಗಳು, ಮತ್ತಿತರ ಕಾರ್ಯಕ್ರಮಗಳ ಆಯೋಜನೆ ನಿಷೇಧಿಸಿದ್ದರಿಂಧ “ಯೋಗ ಆ್ಯಟ್‌ ಹೋಮ್‌, ಯೋಗ ವಿಥ್‌ ಫ್ಯಾಮಿಲಿ’ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸೂಚಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಸಹ ಮನೆಯಲ್ಲಿಯೇ ಯೋಗಾಸನ ಮಾಡಿದರು.

ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ಮನೆಯಲ್ಲಿಯೇ ಯೋಗ ಮಾಡಿದರು. ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೂಡಾ ಮನೆಯಲ್ಲಿಯೇ ಯೋಗ ಮಾಡಿ, ಇಲಾಖೆಯಿಂದ ಯ್ಯೂಟೂಬ್‌ ಮೂಲಕ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು ಎಂದು ತಿಳಿಸಿದ್ದಾರೆ.

ಪತಂಜಲಿ ಯೋಗ ಸಮಿತಿ: ವಿಶ್ವ ಯೋಗ ದಿನಚರಣೆ ಅಂಗವಾಗಿ ನಗರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಯೋಗ ಮಾಡಲಾಯಿತು. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು. ರವಿವಾರ ಬೆಳಿಗ್ಗೆ ಸಾಮಾಜಿಕ ಅಂತರ ಕಾಪಾಡಿ ಶಿಬಿರಾರ್ಥಿಗಳಿಗೆ ಯೋಗ ಕಲೆಗಳನ್ನು ಹೇಳಿ ಕೊಡಲಾಯಿತು. ಯೋಗ ಪಟು ಸೋಮನಾಥ ಕೋಡ್ಲಾ ಯೋಗಗಳನ್ನು ಕಲಿಸಿದರೆ, ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನಿಲ ಗುರೂಜಿ ಯೋಗದ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next