Advertisement

ಯಾದಗಿರಿ: ನಿನ್ನೆ 11 ಜನರಲ್ಲಿ ಪಾಸಿಟಿವ್

08:56 AM Jun 28, 2020 | Suhan S |

ಯಾದಗಿರಿ : ಜಿಲ್ಲೆಯಲ್ಲಿ ಶನಿವಾರ ಮಹಾರಾಷ್ಟ್ರದಿಂದ ಬಂದಿರುವ 11 ಜನರಲ್ಲಿ ಮತ್ತು ಒಬ್ಬರಿಗೆ ಗುಜರಾತ ಪ್ರಯಾಣದಿಂದ ಹಾಗೂ ಮತ್ತೂಬ್ಬರಿಗೆ ಸೋಂಕಿತ ಪಿ-8228 ಸಂಪರ್ಕದಿಂದ ಕೋವಿಡ್ ತಗುಲಿದೆ.

Advertisement

ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ 2 ವರ್ಷದ ಬಾಲಕ (ಪಿ-11272), ಸುರಪುರ ತಾಲೂಕಿನ ಕೆಂಭಾವಿಯ 24 ವರ್ಷದ ಪುರುಷರಿಬ್ಬರು (ಪಿ-11263, ಪಿ-11264) ಮತ್ತು ಹುಣಸಗಿ ತಾಲೂಕಿನ ಬೈಲಗಿಡ್ಡ ತಾಂಡಾದ 32 ವರ್ಷದ (ಪಿ-11265)ಗೆ ಸುರಪುರ ಸಾರಿಗೆ ಚಾಲಕನ ಸಂಪರ್ಕದಿಂದ ಸೋಂಕು ತಗುಲಿದೆ, ಗುರುಮಠಕಲ್‌ ತಾಲೂಕಿನ ಕೊಂಕಲ್‌ ಗ್ರಾಮದ 20 ವರ್ಷದ ಮಹಿಳೆ (ಪಿ-11266), ಯಲಸತ್ತಿಯ 27 ವರ್ಷದ ಪುರುಷ (ಪಿ-11267) ಅದೇ ಗ್ರಾಮದ 70 ವರ್ಷದ ಮಹಿಳೆ (ಪಿ-11268), ಅಲ್ಲಿಪುರ ದೊಡ್ಡ ತಾಂಡಾದ 5 ವರ್ಷದ ಬಾಲಕಿ (ಪಿ-11269) ಮತ್ತು 34 ವರ್ಷದ ಪುರುಷ (ಪಿ-11273), ಹತ್ತಿಕುಣಿ ಗ್ರಾಮದ 27 ವರ್ಷದ ಮಹಿಳೆ (ಪಿ-11270) ಮತ್ತು 5 ವರ್ಷದ ಬಾಲಕ (ಪಿ-11271) ಹಾಗೂ ಯಾದಗಿರಿ ಬಸವೇಶ್ವರ ನಗರದ 25 ವರ್ಷದ ಪುರುಷ (ಪಿ-11274) ಹಾಗೂ ಗುಜರಾತ್‌ ನಿಂದ ಆಗಮಿಸಿದ್ದ ಗುರುಮಠಕಲ್‌ನ 11 ವರ್ಷದ ಬಾಲಕ (ಪಿ-11275) ಸೋಂಕಿಗೆ ತುತ್ತಾಗಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ 221 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು ಒಟ್ಟು 1154 ಜನರ ಗಂಟಲು ದ್ರವದ ಮಾದರಿ ವರದಿ ಬರಬೇಕಿದೆ. ಈವರೆಗೆ 785 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next