Advertisement

ಯಾದಗಿರಿ: 430 ಮಾದರಿ ಸಂಗ್ರಹ

12:24 PM May 17, 2020 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಪರೀಕ್ಷೆ ಮಾದರಿ ಸಂಗ್ರಹಿಸುವ ಕಾರ್ಯ ತೀವ್ರಗತಿಯಲ್ಲಿ ಸಾಗಿದ್ದು ಶನಿವಾರ 430 ಜನರ ಮಾದರಿ ಸಂಗ್ರಹಿಸಲಾಗಿದೆ. ಮೇ 16ರ ವರೆಗೆ ಒಟ್ಟು 1851 ಮಾದರಿಗಳ ವರದಿ ನೆಗೆಟಿವ್‌ ಬಂದಿವೆ. ಇನ್ನು 734 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾ ಧಿಕಾರಿ ಪ್ರಕಾಶ್‌ ರಜಪೂತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕೋವಿಡ್‌-19 ಖಚಿತಪಟ್ಟ ಪಿ-867, ಪಿ-868 ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದೆ. ಹೊಸ ಜಿಲ್ಲಾಸ್ಪತ್ರೆ ಐಸೋಲೇಷನ್‌ ವಾರ್ಡ್‌ನಲ್ಲಿ 7 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಎಸ್‌ಐಸಿನಲ್ಲಿ 33 ಮತ್ತು ಸುರಪುರ ಸೂಪರ್‌ ಕ್ವಾರಂಟೈನ್‌ ಸೆಂಟರ್‌ನಲ್ಲಿ 51 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಪ್ರಾಥಮಿಕ 39 ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 117 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯ ಒಟ್ಟು 85 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಮೇ 16ರಂದು ಸೇರ್ಪಡೆಯಾಗಿದ್ದು, 883 ಜನ ಸೇರಿದಂತೆ ಒಟ್ಟು 6112 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next