Advertisement

ಒಂದೇ ದಿನ 4 ಸಾವಿರ ಜನ ಮರಳಿ ಗೂಡಿಗೆ

12:53 PM May 06, 2020 | Naveen |

ಯಾದಗಿರಿ: ಬೆಂಗಳೂರಿನಿಂದ ಮಂಗಳವಾರ ಒಂದೇ ದಿನ ಜಿಲ್ಲೆಗೆ ನಾಲ್ಕು ಸಾವಿರ ಜನರು ಆಗಮಸಿದ್ದಾರೆ. 119 ಸಾರಿಗೆ ವಾಹನಗಳ ಮೂಲಕ ಜಿಲ್ಲೆಗೆ ಜಿಲ್ಲೆಯ ಗ್ರಾಮೀಣ ಭಾಗಗಳ ಜನರು ಮರಳಿ ಬಂದಿದ್ದಾರೆ. ಮೊದಲ ಹಂತದ ಲಾಕ್‌ಡೌನ್‌ ಅವಧಿ ಮುಕ್ತಾಯದ ವೇಳೆಯಿಂದಲೂ ಬೆಂಗಳೂರಿನಿಂದ ಈವರೆಗೆ ಜಿಲ್ಲೆಗೆ ಒಟ್ಟು 30 ಸಾವಿರದಷ್ಟು ಜನರು ತಮ್ಮ ಸ್ವಗ್ರಾಮಗಳಿಗೆ ಹಿಂತಿರುಗಿದ್ದಾರೆ.

Advertisement

ರಡನೇ ಹಂತದ 40 ದಿನಗಳ ಲಾಕ್‌ಡೌನ್‌ ಅವಧಿ ಮುಕ್ತಾಯದ ವೇಳೆ ಸರ್ಕಾರವೇನೋ ವಿನಾಯಿತಿ ನೀಡಿದೆ. ಆದರೇ ಕೆಂಪು ಮತ್ತು ಕಿತ್ತಳೆ ಪಟ್ಟಿಯಲ್ಲಿರುವ ಬೆಂಗಳೂರು ಮಹಾನಗರದ ವಿವಿಧ ಭಾಗಗಳಿಂದ ಹಸಿರು ಪಟ್ಟಿಯ ಯಾದಗಿರಿಗೆ ಆಗಮಿಸಿದ್ದಾರೆ. ಈ ಹಿಂದೆ ಗ್ರಾಮೀಣ ಭಾಗದ ಜನರು ಸಾರಿಗೆ ಸೌಕರ್ಯವಿಲ್ಲದ ಸಂದರ್ಭದಿಂದಲೂ ಸರಕು ವಾಹನಗಳ ಮೂಲಕ ಆಗಮಿಸಿದ್ದರು.

ಬೆಂಗಳೂರಿನಿಂದ ಸೋಮವಾರ 62 ಸಾರಿಗೆ ಬಸ್‌ ಗಳ ಮೂಲಕ ಜನರು ಆಗಮಿಸಿದ್ದು, ಮಂಗಳವಾರ 119 ಬಸ್‌ಗಳ ಮೂಲಕ ಮಹಿಳೆ, ಪುರುಷ, ವೃದ್ಧರು ಹಾಗೂ ಮಕ್ಕಳೂ ಸೇರಿದಂತೆ ಅಂದಾಜು 4 ಸಾವಿರ ಜನರು ಬಂದಿಳಿದಿದ್ದಾರೆ. ಎಲ್ಲ ಬಸ್‌ಗಳನ್ನು ನೇರವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿಯೇ ಜ್ವರ ತಪಾಸಣೆಗೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಂಡಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೆಂಟ್‌ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಆಹಾರಕ್ಕೂ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ವಲಸಿಗರನ್ನು ಕೇವಲ ಸ್ಕ್ರೀನಿಂಗ್‌ ಮಾಡಲಾಗುತ್ತಿದ್ದು, ಅವರ ದೇಹ ತಾಪ ಅಳೆದು ಎಲ್ಲಿಂದ ಬಂದಿದ್ದು ಎಲ್ಲಿಗೆ ತೆರಳುತ್ತಿರುವುದು ಜತೆಗೆ ಅವರ ಸಂಪರ್ಕ ಸಂಖ್ಯೆ ಹೀಗೆ ಮಾಹಿತಿಯನ್ನು ಅಧಿಕಾರಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕಡ್ಡಾಯವಾಗಿ 14 ದಿನಗಳವರೆಗೆ ಮನೆಯಲ್ಲಿಯೇ ಇದ್ದು ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳಿದ್ದರೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವಂತೆ ತಿಳಿಸಲಾಗುತ್ತಿದೆ. ಕೈಗೆ ಸೀಲ್‌ ಹಾಕುವ ಕಾರ್ಯವೂ ನಡೆಯುತ್ತಿದೆ. ಜ್ವರ ತಪಾಸಣೆ ಬಳಿಕ ಸಾರಿಗೆ ಬಸ್‌ಗಳು ಕರೆತಂದ ಜನರನ್ನು ಕೇಂದ್ರ ಬಸ್‌ ನಿಲ್ದಾಣದಲ್ಲಿ ಇಳಿಸುತ್ತಿವೆ. ಇಲ್ಲಿಂದ ಜನರು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರ ಸಿಂಗ್‌ ಠಾಕೂರ, ವೈದ್ಯರು ಸೇರಿ ಹಲವರು ಸೋಮವಾರ ರಾತ್ರಿಯಿಂದ ನಿದ್ದೆಯೂ ಮಾಡದೇ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.

ಜ್ವರ ನಿಯಂತ್ರಣ ಮಾತ್ರೆ ನುಂಗಿದರೆ?: ಜಿಲ್ಲೆಗೆ ಹಿಂತಿರುಗುತ್ತಿರುವ ಜನರ ದೇಹದ ಉಷ್ಣಾಂಶ ಪರೀಕ್ಷಿಸಲಾಗುತ್ತಿದೆ. ಹಿಂತಿರುಗುವ ವೇಳೆ ವ್ಯಕ್ತಿಗಳೇನಾದರೂ ಜ್ವರ ನಿಯಂತ್ರಣದ ಪಾರಾಸಿಟಮೊಲ್‌ ಮಾತ್ರೆ ಏನಾದರೂ ನುಂಗಿದ್ದರೆ ಅವರ ಉಷ್ಣಾಂಶ ಕಡಿಮೆಯೇ ತೋರಿಸುವ ಸಾಧ್ಯತೆಗಳಿರುತ್ತವೆ. ಹಾಗೇನಾದರೂ ನಡೆದರೆ ನಿರ್ಧಿಷ್ಟವಾಗಿ ಶಂಕಿತರನ್ನು ಗುರುತಿಸುವುದು ಕಷ್ಟದ ಕೆಲಸ ಎನ್ನಲಾಗುತ್ತಿದೆ. ಇನ್ನೇನ್ನಿದ್ದರೂ 15 ದಿನ ಜಿಲ್ಲೆಯ ಜನರಿಗೆ ಸೇಫ್‌ ಅಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಗ್ರಾಮಗಳಿಗೆ ತೆರಳಲು ಪರದಾಟ: ಮಹಾನಗರಗಳಿಗೆ ವಲಸೆ ತೆರಳಿ ಅದೇಗೋ ಸಾರಿಗೆ ಬಸ್‌ಗಳ ಮೂಲಕ ಹಿಂತಿರುಗುತ್ತಿರುವ ಜನರಿಗೆ ತಮ್ಮ ಗ್ರಾಮಗಳಿಗೆ ಸೇರಲು ಪರದಾಡುವಂತಾಗಿದೆ. ಈಗಾಗಲೇ ನಿಯಮಿತವಾಗಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ
ಆರಂಭಿಸಲಾಗಿದ್ದು ಇನ್ನೂ ಸಮರ್ಪಕವಾಗಿ ಗ್ರಾಮೀಣ ಭಾಗಕ್ಕೆ ಸೇವೆ ಆರಂಭವಾಗಿಲ್ಲ. ಹಾಗಾಗಿ ಜನರು ಖಾಸಗಿ ಟಂಟಂ ಆಟೋಗಳ ಮೂಲಕವೇ ಮನೆ ಸೇರುತ್ತಿದ್ದಾರೆ.

Advertisement

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next