Advertisement

ಯಾದಗಿರಿ: 865ಕ್ಕೇರಿದ ಸೋಂಕಿತರ ಸಂಖ್ಯೆ

12:17 PM Jun 18, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 865ಕ್ಕೆ ಏರಿದೆ. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದಲ್ಲಿಯೇ ಅತಿ ಹೆಚ್ಚು 37 ಜನರಿಗೆ ಸೋಂಕು ದೃಢವಾಗಿದೆ.

Advertisement

6 ವರ್ಷದೊಳಗಿನ 6 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3 ವರ್ಷದ ಬಾಲಕ ಪಿ-7666, 4 ವರ್ಷದ ಬಾಲಕ ಪಿ- 7640,5 ವರ್ಷದ ಬಾಲಕ ಪಿ-7647,6 ವರ್ಷದ ಬಾಲಕಿ ಪಿ-7655 ಅದೇ ವಯಸ್ಸಿನ ಮತ್ತೂಬ್ಬ ಬಾಲಕಿ ಪಿ-7668 ಮತ್ತು ಬಾಲಕ ಪಿ-7662 ಸೇರಿದಂತೆ 37 ಜನ ಸೋಂಕಿತರಲ್ಲಿ 20 ಮಹಿಳೆಯರು, 17 ಪುರುಷರಿದ್ದು, ಎಲ್ಲರೂ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ.

253 ಹೊಸ ಮಾದರಿ ಸಂಗ್ರಹ: ಕೋವಿಡ್ ವೈರಸ್‌ ಪರೀಕ್ಷೆಗಾಗಿ ಬುಧವಾರ 253 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈವರೆಗೆ 20302 ಜನರ ವರದಿ ನೆಗೆಟಿವ್‌ ಬಂದಿದೆ. ಕೋವಿಡ್‌-19 ಖಚಿತಪಟ್ಟ 40 ಸೋಂಕಿತರು ಗುಣಮುಖರಾಗಿದ್ದಾರೆ. ಇಂದಿಗೆ ಸೋಂಕಿನಿಂದ ಗುಣಮುಖವಾದವರ ಸಂಖ್ಯೆ 478ಕ್ಕೆ ತಲುಪಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1319 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2716 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 48 ಕಂಟೇನ್ಮೆಂಟ್‌ ಝೋನ್‌ ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 158 ಜನ, ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 65, ಸುರಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 43 ಮತ್ತು ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ ನಲ್ಲಿ 65 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ.

ಜಿಲ್ಲೆಯ 23 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 1052 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next