Advertisement

ಅಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆ ಆಲಿಸಲು ಸೂಚನೆ

03:08 PM Aug 15, 2021 | Team Udayavani |

ಯಾದಗಿರಿ: ನಗರದ ಪ್ರಮುಖ ಸ್ಥಳಗಳಲ್ಲಿಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿಕೂಡಲೇ ಬಗೆಹರಿಸುವಂತೆ ಜಿಲ್ಲಾಧಿಕಾರಿಡಾ| ರಾಗಪ್ರಿಯಾ ಆರ್‌. ಅಧಿಕಾರಿಗಳಿಗೆಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಜರುಗಿದ ನಗರ ಸ್ಥಳೀಯ ಸಂಸ್ಥೆಗಳಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರುಮಾತನಾಡಿದರು.

Advertisement

ಅಧಿಕಾರಿಗಳು ನಗರದಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಬೇಕು.ಘನತ್ಯಾಜ್ಯ ವಿಂಗಡನೆಯ ನಿರ್ವಹಣೆಗೆಎಲ್ಲ ಸ್ಥಳೀಯ ಸಂಸ್ಥೆಗಳು ಪ್ರಥಮ ಆದ್ಯತೆನೀಡಬೇಕು. ಮನೆ-ಮನೆ ಕಸ ಸಂಗ್ರಹಣೆ ಮತ್ತುಮೂಲದಲ್ಲಿಯೇ ತ್ಯಾಜ್ಯ ವಿಂಗಡನೆಯನ್ನು ತಮ್ಮತಮ್ಮ ನಗರದ ಎಲ್ಲ ವಾರ್ಡ್‌ ಗಳಲ್ಲಿ ಜಾರಿಗೆತರಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನನೀಡಿದರು.

ಸಾರ್ವಜನಿಕರಿಗೆ ಕೋವಿಡ್‌ ಲಸಿಕಾ ಕುರಿತುನಗರದ ವ್ಯಾಪ್ತಿಯಲ್ಲಿ ಜಾಗೃತ ಅಭಿಯಾನಆಯೋಜಿಸಬೇಕು. ಎಲ್ಲ ಸ್ಥಳೀಯ ಸಂಸ್ಥೆಯಪ್ರತಿ ಸಿಬ್ಬಂದಿಗೆ 50 ಜನರ ಗುರಿ ನೀಡಿ ನಗರದಲ್ಲಿಸಂಪೂರ್ಣವಾಗಿ ಲಸಿಕಾಕರಣ ಗುರಿ ತಲುಪಲುಸೂಚಿಸಿದರು.

ನಗರೋತ್ಥಾನ ಹಂತ 3ರಡಿಯಲ್ಲಿಮಂಜುರಾದ ಜಿಲ್ಲೆಯ ನಗರ ಸ್ಥಳೀಯಸಂಸ್ಥೆಗಳ ಪ್ರಗತಿ ಪರಿಶೀಲಿಸಿದರು. ಬಾಕಿ ಉಳಿದಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿಎಂದವರು, ವಿಳಂಬ ಮಾಡುವ ಅಧಿಕಾರಿಗಳವಿರುದ್ಧ ಕ್ರಮ ವಹಿಸಲಾಗುತ್ತದೆ ಎಂದುಸೂಚಿಸಿದರು. ಶೌಚಾಲಯ ನಿರ್ಮಾಣ ಹಾಗೂವಿಕಲಚೇತನರ ನಿಧಿಯ ಬಳಕೆಯಲ್ಲಿ ಹೆಚ್ಚುಪ್ರಗತಿ ಸಾಧಿಸಲು ತಿಳಿಸಿದರು.

14 ಮತ್ತು 15ನೇ ಹಣಕಾಸು ಬೇಸಿಕ್‌ಗ್ರಾÂಂಟ್‌ ಮತ್ತು ಎಸ್‌ಎಫ್‌ಸಿ, ಮುಕ್ತ ನಿಧಿ,ವಿಶೇಷ ಅನುದಾನದಡಿ ಪ್ರತಿಯೊಂದು ನಗರದಸ್ಥಳೀಯ ಸಂಸ್ಥೆಗಳ ಕಾಮಗಾರಿ ಪ್ರಗತಿಯಮಾಹಿತಿಯನ್ನು ಜಿಲ್ಲಾಧಿಕಾರಿ ಮಾಹಿತಿಪಡೆದರು. ವಾರ್ಡ್‌ಗಳು ಸಮಸ್ಯೆ ಮತ್ತಿತರಕಾರಣಗಳಿಂದ ವಿಳಂಬವಾಗಿದ್ದರೆ ಮರು ಕ್ರಿಯಾಯೋಜನೆ ಸಲ್ಲಿಸಿ ನಿಗದಿತ ಅವಧಿಯೊಳಗಾಗಿ ಎಲ್ಲಕಾಮಗಾರಿಗಳನ್ನು ಮುಕ್ತಾಯಗೊಳಿಸುವಂತೆಜಿಲ್ಲಾಧಿಕಾರಿ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಶಂಕರಗೌಡಸೋಮನಾಳ, ನಗರಾಭಿವೃದ್ಧಿ ಯೋಜನಾನಿರ್ದೇಶಕ ಸಲಾಂ ಹುಸೇನ್‌, ನಗರಸಭೆಆಯುಕ್ತ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next