Advertisement

ಗಿರಿನಾಡಿನ ಬಹುದಿನಗಳ ಕನಸಿಗೆ ಸ್ಪಂದನೆ : ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಸಿಎಂ ಶಂಕುಸ್ಥಾಪನೆ

04:28 PM Jan 06, 2021 | Team Udayavani |

ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ಗಿರಿನಾಡು ಖ್ಯಾತಿಯ ಯಾದಗಿರಿ ಜಿಲ್ಲೆಯ ಜನರ ಬಹುದಿನಗಳ ಕನಸಿನ ಕೂಸಾಗಿರುವ ಯಿಮ್ಸ್ (ಯಾದಗಿರಿ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಮುದ್ನಾಳ ಬಳಿ ನಿರ್ಮಿಸಲು ಉದ್ದೇಶಿಸಲಿರುವ ಯಿಮ್ಸ್ ಕಟ್ಟಡದ ಸ್ಥಳದಲ್ಲಿ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದರು.

325 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಗ್ರಾಮದ ಹತ್ತಿರ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಕಾಮಗಾರಿ ಆರಂಭವಾಗಲಿದೆ.

ಯಿಮ್ಸ್ ಸಂಸ್ಥೆಯು 70 ಎಕರೆ ಜಾಗದಲ್ಲಿ ಸಾಕಾರಗೊಳ್ಳುತ್ತಿದ್ದು. ಈ ಯೋಜನೆಯ ಒಟ್ಟು ಅಂದಾಜು ಮೊತ್ತ 438.75 ಕೋಟಿ ರೂ.ಗಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸ್ಥಾಪಿಸಲಾಗುತ್ತಿದೆ.

ಇದನ್ನೂ ಓದಿ:ತೈಲ ಬೆಲೆ ಸತತ ಏರಿಕೆ: ಬೆಂಗಳೂರು ಸೇರಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

Advertisement

ಯಿಮ್ಸ್ ಸ್ಥಾಪನೆಯಾಗುವುದರಿಂದ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿಭಾವಂತರಿಗೆ ವೈದ್ಯರಾಗುವ ಅವಕಾಶ ಕಲ್ಪಿಸಿಕೊಡುತ್ತಿದೆ ಮತ್ತು ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ.

ಇದರ ಜೊತೆಗೆ ಗುಣಮಟ್ಟದ ಚಿಕಿತ್ಸಯೂ ಈ ಭಾಗದ ಜನರಿಗೆ ಲಭ್ಯವಾಗುವ ಆಶಾವಾದ ಮೂಡಿದೆ.

ಶೈಕ್ಷಣಿಕ ವಿಭಾಗದ ನಾಲ್ಕು ಅಂತಸ್ತಿನ ಕಟ್ಟಡ, ಆರು ಅಂತಸ್ತಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, ಬೋಧಕ ಸಿಬ್ಬಂದಿಯ 5 ಅಂತಸ್ತಿನ ವಸತಿ ಕಟ್ಟಡ, ಬೋಧಕೇತರ ಸಿಬ್ಬಂದಿಯ 7 ಅಂತಸ್ತಿನ ಕಟ್ಟಡ, 7 ಅಂತಸ್ತಿನ ನರ್ಸ್ ವಸತಿ ಗೃಹ, ಡೀನ್ ಮತ್ತು ಪ್ರಾಂಶುಪಾಲರಿಗೆ ವಸತಿ ಗೃಹಗಳು ಈ ಆವರಣದಲ್ಲಿ ತಲೆ ಎತ್ತಲಿವೆ.

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿನಲ್ಲಿ 150 ಎಂ.ಬಿ.ಬಿ.ಎಸ್. ಸೀಟುಗಳ ಹೊಸ ವೈದ್ಯಕೀಯ ಕಾಲೇಜ್‍ನ್ನು ಸ್ವಾಯತ್ತ ಸಂಸ್ಥೆಯ ಸ್ಥಾನಮಾನದೊಂದಿಗೆ ಸ್ಥಾಪಿತವಾಗಲಿದೆ.

ಯಿಮ್ಸ್ ಕಟ್ಟಡದ ಕಾಮಗಾರಿಯನ್ನು 24 ತಿಂಗಳೊಳಗೆ ಮುಗಿಸಲು ಸರಕಾರವು ಗುತ್ತಿಗೆ ಪಡೆದಿರುವ ಹೈದರಾಬಾದ್‍ನ ಕೆಎಂವಿ ಪ್ರೈವೆಟ್ ಪ್ರೊಜೆಕ್ಟ್ ಲಿಮಿಟೆಡ್‍ಗೆ ಸೂಚಿಸಿದೆ.

ಯಿಮ್ಸ್ ಕಟ್ಟಡದಲ್ಲೇನಿರಲಿದೆ..?:  ಯಿಮ್ಸ್ ನಲ್ಲಿ  37117.50 ಚದರ ಮೀಟರ್ ವಿಸ್ತೀರ್ಣದಲ್ಲಿ ಅಕಾಡೆಮಿಕ್ ಬ್ಲಾಕ್ ನಿರ್ಮಾಣವಾಗಲಿದ್ದು, 4 ಅಂತಸ್ತಿನ ಕಟ್ಟಡ, ಆಡಳಿತ ಕಛೇರಿ, ಭೋಧಕ ಕೊಠಡಿಗಳು, ಕೇಂದ್ರ ಗ್ರಂಥಾಲಯ, ಪರೀಕ್ಷಾ ಕೊಠಡಿಗಳು, ಸೆಮಿನಾರ್ ಹಾಲ್, ಪ್ರಯೋಗಾಲಯಗಳು ಇನ್ನೀತರ ಪ್ರಮುಖವುಗಳು ಒಳಗೊಂಡಿರಲಿದೆ.

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕೀಯರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

9509.00 ಚದರ ಮೀಟರ್ ವಿಸ್ತೀರ್ಣದಲ್ಲಿ 5 ಅಂತಸ್ತಿನ ಬೋಧಕ ಸಿಬ್ಬಂದಿ ವಸತಿ ಗೃಹ ನಿರ್ಮಾಣವಾಗಲಿದ್ದು, 32 ವಸತಿಗೃಹಗಳಿರಲಿವೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ 28 ಶಿಕ್ಷಕರು, 68 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢ

ಬೋಧಕೇತರ ಸಿಬ್ಬಂದಿಗೂ 3422 ಚದರ ಮೀಟರ್ ವಿಸ್ತೀರ್ಣದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು, 24 ವಸತಿ ಗೃಹಗಳಿರಲಿವೆ.3422 ಚದರ್ ಮೀಟರ್ ವಿಸ್ತೀರ್ಣದಲ್ಲಿ ಶೂಶ್ರುಷಕರಿಗಾಗಿ 7 ಅಂತಸ್ತಿನ ಕಟ್ಟಡ ವಸತಿ ಗೃಹ ನಿರ್ಮಿಸಲಾಗುತ್ತಿದ್ದು, 24 ವಸತಿಗೃಹಗಳಿರಲಿವೆ.

ಡೀನ್ ಹಾಗೂ ಪ್ರಾಂಶುಪಾಲರುಗಳಿಗೆ ವಸತಿ ಗೃಹ, 330.00 ಚ.ಮೀ ವಿಸ್ತೀರ್ಣದಲ್ಲಿ ವಾಣಿಜ್ಯ ಕಟ್ಟಡ, ಸರ್ವಿಸ್ ಬ್ಲಾಕ್ ಕಟ್ಟಡ ನಿರ್ಮಾಣ ಒಳಗೊಂಡಿರುತ್ತದೆ.

ಈ ಯಿಮ್ಸ್ ಆವರಣದಲ್ಲಿ  ನಿರ್ಮಿಸಲು ಉದ್ದೇಶಿಸಿರು ಕಟ್ಟಡಗಳ ಒಟ್ಟಾರೆ ವಿಸ್ತೀರ್ಣ  : 78072.50 ಚದರ ಮೀಟರ್ (839935.18 ಚದರ ಅಡಿಗಳು) ಇರಲಿದೆ.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ,ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ನರಸಿಂಹ ನಾಯಕ,ಸಂಸದರಾದ ರಾಜಾ ಅಮರೇಶ್ವರ ನಾಯಕ,ಡಿಸಿ ರಾಗಪ್ರಿಯ,ಎಸ್ಪಿ,ಜಿಪಂ‌ ಸಿಇಒ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next