Advertisement

ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಡಿಜಿಟಲ್‌ ಗ್ರಂಥಾಲಯ ವರದಾನ

05:41 PM Mar 08, 2020 | Naveen |

ಯಾದಗಿರಿ: ವಿದ್ಯಾರ್ಥಿಗಳು ಓದುವುದರಲ್ಲಿ ಹೆಚ್ಚಿನ ಕಾಲ ಕಳೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಡಿಜಿಟಲ್‌ ಗ್ರಂಥಾಲಯ ವರದಾನವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ. ಚವ್ಹಾಣ ಹೇಳಿದರು.

Advertisement

ನಗರದ ಅಮರ ಲೇಔಟ್‌ನಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಮೊದಲನೇ ಮಹಡಿ ಮತ್ತು ಡಿಜಿಟಲ್‌ ಗ್ರಂಥಾಲಯ ಹಾಗೂ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಗ್ರಂಥಾಲಯದಲ್ಲಿ 1 ಲಕ್ಷಕ್ಕೂ ಹೆಚ್ಚು ಪುಸ್ತಕಳಿದ್ದು, ಅದರಲ್ಲೂ ಮಹಾನ್‌ ವ್ಯಕ್ತಿಗಳಾದ ಡಾ| ಬಿ.ಆರ್‌. ಅಂಬೇಡ್ಕರ್‌, ಮಹಾತ್ಮ ಗಾಂಧಿಧೀಜಿ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಹನೀಯರ ಕುರಿತ ಪುಸ್ತಕಳಿವೆ. ಇವುಗಳನ್ನು ಓದಿ ನೀವು ಕೂಡ ಮಹಾನ್‌ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.

ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ| ಸತೀಶಕುಮಾರ ಎಸ್‌.ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 7 ಸಾವಿರ ಗ್ರಂಥಾಲಯಗಳಿದ್ದು, ಕರ್ನಾಟಕವು ದೇಶದಲ್ಲೇ ಹೆಚ್ಚು ಗ್ರಂಥಾಲಯಗಳನ್ನು ಹೊಂದಿದ ರಾಜ್ಯವಾಗಿದೆ. ಮಾದರಿ ಗ್ರಂಥಾಲಯಗಳ ರಾಜ್ಯ ಎಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ 272 ಶಾಖಾ ಗ್ರಂಥಾಲಯಗಳಲ್ಲಿ ಡಿಜಿಟಲ್‌ ಸೌಲಭ್ಯವನ್ನು ಒದಗಿಸಿದ್ದು, ಓದುಗರಿಗೆ ಕಂಪ್ಯೂಟರ್‌, ಟ್ಯಾಬ್‌ಗಳ ಸೌಲಭ್ಯ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಕೆಆರ್‌ ಐಡಿಎಲ್‌ ನಿಂದ ನಿರ್ಮಾಣವಾದ ಮೊದಲ ಮಹಡಿ ಗ್ರಂಥಾಲಯ ಕಟ್ಟಡವು ಸುಸಜ್ಜಿತವಾಗಿದ್ದು, ಓದುಗರು ಹೆಚ್ಚಿನ ಅನುಕೂಲವಾಗಲಿದೆ.

ನಗರದ ಕೇಂದ್ರ ಗ್ರಂಥಾಲಯ ಸೇರಿದಂತೆ ಹುಣಸಗಿ, ಕೆಂಭಾವಿ, ಶಹಾಪುರ, ಗುರುಮಠಕಲ್‌, ವಡಗೇರಾ ಪಟ್ಟಣಗಳಲ್ಲಿ ಡಿಜಿಟಲ್‌ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತುತ ಒಂದು ಲಕ್ಷ ಕೃತಿಗಳು ಡಿಜಿಟಲೀಕರಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಶಾಖಾ ಗ್ರಂಥಾಲಯಗಳು ಡಿಜಿಟಲ್‌ ಸೌಲಭ್ಯ ಹೊಂದಲಿದೆ ಎಂದು ತಿಳಿಸಿದರು.

Advertisement

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾ ಧಿಕಾರಿ ಎಂ.ಎಸ್‌. ರೆಬಿನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next