Advertisement

ಗೃಹ ದಿಗ್ಬಂಧನ ಉಲ್ಲಂಘನೆ; 6 ಜನರ ವಿರುದ್ಧ ಪ್ರಕರಣ

12:05 PM Jul 04, 2020 | Naveen |

ಯಾದಗಿರಿ: ಗೃಹ ದಿಗ್ಬಂಧನ ಉಲ್ಲಂಘಿಸಿದ ಹೊರ ರಾಜ್ಯದಿಂದ ಆಗಮಿಸಿದ 6 ಜನರ ವಿರುದ್ಧ ಒಟ್ಟು 4 ಪ್ರಕರಣ ದಾಖಲಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.

Advertisement

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಸ್ಟ್ಯಾಂಪಿಂಗ್‌ ಮತ್ತು ಹೆಲ್ತ್‌ ಸ್ಕ್ರೀನಿಂಗ್‌ ಮಾಡಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೂ 6 ಜನರು ಕೋವಿಡ್ ಸೋಂಕು ಹರಡುವ ದುರುದ್ದೇಶದಿಂದ ಗ್ರಾಮ, ತಾಂಡಾ, ತಾಲೂಕುಗಳಲ್ಲಿ ತಿರುಗಾಡಿದ್ದು, ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ್ದಾರೆ. ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದ 3 ಜನ, ಮಾವಿನಗಿಡ ತಾಂಡಾದ ಒಬ್ಬ ವ್ಯಕ್ತಿ, ಜುಮಲಪುರ ದೊಡ್ಡ ತಾಂಡಾದ ಒಬ್ಬ ವ್ಯಕ್ತಿ ವಿರುದ್ಧ ಕೊಡೇಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಸುರಪುರ ತಾಲೂಕಿನ ರಂಗಂಪೇಟೆಯ ಒಬ್ಬ ವ್ಯಕ್ತಿ ವಿರುದ್ಧ ಸುರುಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಈ ಆರೋಪಿಗಳನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿ ಇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next