ಯಾದಗಿರಿ: ಅಖಂಡ ಭಾರತಕ್ಕಾಗಿ ಹಿಂದೂ ಸಮಾಜ ಒಗ್ಗಟ್ಟಾಗಿ ಸಂಕಲ್ಪ ಮಾಡಿ ದೇಶ ಧರ್ಮ ಸಂರಕ್ಷಿಸುವ ನಿಟ್ಟಿನಲ್ಲಿ ಪಣ ತೊಡಬೇಕು ಎಂದು ಕೃಷ್ಣ ಜೋಶಿ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿರುವ ಪಂಪಮಹಾಕವಿ ಮಂಟಪದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಕೆಲವು ರಾಜಕೀಯ ಕುತಂತ್ರಿಗಳು ನಮ್ಮಲ್ಲಿಯೇ ಒಡಕು ಮೂಡಿಸಿದ್ದರು. ಈಗಿನ ಪ್ರಧಾನ ಮಂತ್ರಿಗಳು ಕಾಶ್ಮೀರದ ವಿಷಯದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡು ಅಖಂಡ ಭಾರತದ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿದ್ದು ವಿರೋಧಿಗಳ ಪರ ಎಂಬಂತೆ ಹೇಳಿಕೆ ನೀಡುತ್ತಿರುವ ರಾಜಕೀಯ ಪಕ್ಷದ ಕುರಿತು ವಾಗ್ಧಾಳಿ ನಡೆಸಿದ ಅವರು, ಸಂವಿಧಾನದ ಅನುಚ್ಛೇದ 370 ಮತ್ತು 35ಎ ರದ್ದುಗೊಂಡಿದ್ದರಿಂದ ಕಾಶ್ಮೀರ ಅಭಿವೃದ್ಧಿಯಾಗಲಿದೆ ಎಂದು ಕಾಶ್ಮೀರಿಗರು ನಂಬಿಕೆಯಿಂದ ಬಯಸುತ್ತಿದ್ದಾರೆ. ಆದರೆ ಕೆಲ ರಾಜಕೀಯ ಪಕ್ಷಗಳಿಗೆ ಕಾಶ್ಮೀರಿಗರ ಅಭಿವೃದ್ಧಿ ಬೇಕಿಲ್ಲ. ಬದಲಿಗೆ ಅವರನ್ನು ಅಶಾಂತಿಗೆ ದೂಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದರು.
ಪೂಜ್ಯ ಚನ್ನವೀರಯ್ಯ ಸ್ವಾಮಿ ಸೊಪ್ಪಿಮಠ ಸಾನ್ನಿಧ್ಯ ಹಿಂದೂ ಜಾಗರಣ ವೇದಿಕೆ ಯಾದಗಿರಿ ಸಂಚಾಲಕ ಶಾಂತಕುಮಾರ ತಳವಾರ ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಜಾಗರಣೆ ಕಾರ್ಯಕರ್ತರಾದ ವೀರೇಶ ಜಕಾತಿ, ಮಹೇಶ ಹಿರೇಮಠ, ಶಿವು ಅಂಬಿಗೇರ, ದೇವರಾಜ ಆರ್ಯ, ಶರಣು ಮಡಿವಾಳ, ಉದಯ ಚೌವ್ಹಾಣ, ಅಭಿಷೇಕ ಚೌವ್ಹಾಣ, ಸಾಬು ನಕ್ಕಲ, ಪುರಿ ಜಗನ್ನಾಥ, ಮಲ್ಲಿಕಾರ್ಜುನ, ಹಣಮಂತ, ಬನದೇಶ ಪಾಂಚಾಳ, ರಾಘವೇಂದ್ರ ಗೌಳಿ, ಪ್ರಕಾಶ ರಾಯಚೂರು, ಬಾಪುಗೌಡ, ಸಾಗರ ಮಡಿವಾಳ, ಅಭಿಷೇಕ ಹಕೀಂ, ಸಾಗರ ಮಡಿವಾಳ, ರಾಜು ಕರಡಿ ಭಾಗವಹಿಸಿದ್ದರು.
ಚೇತನ ಮಡಿವಾಳ ಸ್ವಾಗತಿಸಿದರು. ಮಹೇಸ ಜಿನಕೇರಿ ಪ್ರಾರ್ಥನಾ ಗೀತೆ ಹಾಡಿದರು. ಮಲ್ಲಿಕಾರ್ಜುನ ಪಾಟೀಲ ಅತಿಥಿಗಳ ಪರಿಚಯ ಮಾಡಿದರು. ಬಂದೇಶ ಅಭಿಷೇಕ್ ಹಿರೇಮs್ ನಿರೂಪಿಸಿದರು. ಹೊರಗಿನ ಮಠ ವಂದಿಸಿದರು.