Advertisement

ಯಾದಗಿರಿಯ ತೀವ್ರ ಜ್ವರ, ಕೆಮ್ಮಿನಿಂದ ಬಾಲಕಿ ಸಾವು: ಕೋವಿಡ್-19 ಶಂಕೆ

10:33 AM Apr 08, 2020 | keerthan |

ಯಾದಗಿರಿ:  ಜಿಲ್ಲೆಯ ಶಹಾಪುರ ತಾಲೂಕಿನ ಕೊಂಗಂಡಿ ಗ್ರಾಮದ 6 ವರ್ಷದ ಬಾಲಕಿ ತೀವ್ರ ಜ್ವರ ಕೆಮ್ಮಿನಿಂದ ಬಳಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಕೋವಿಡ್-19 ಭೀತಿ ಹಿನ್ನೆಲೆ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದ ಕುಟುಂಬ ಏ.1 ರಂದು ಜಿಲ್ಲೆಯ ಸ್ವಗ್ರಾಮಕ್ಕೆ ಹಿಂತಿರಿಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ವಗ್ರಾಮ ಆಗಮನ ವೇಳೆ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಟ್ಟು, 14 ದಿನಗಳ ಕಾಲ ಕ್ವಾರಂಟೈನ್ ಮನೆಯಲ್ಲಿಯೇ ಇರಲು ವೈದ್ಯರು‌ ಸೂಚಿಸಿದ್ದರು ಎನ್ನಲಾಗಿದೆ.

ಮಗುವಿನ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಮಾಹಿತಿ ನೀಡಿದ್ದಾರೆ.

ವರದಿ ಬಳಿಕ ಕೋವಿಡ್-19 ಸೋಂಕು ಇತ್ತೋ,  ಇಲ್ಲವೋ ಎನ್ನುವುದು ತಿಳಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next