ಯಾದಗಿರಿ: ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲೂಕಿನ 63ಗ್ರಾಪಂಗಳಿಗೆ ಡಿ.22ರಂದು ಮೊದಲ ಹಂತದ ಚುನಾವಣೆಯ ಮತದಾನ ನಡೆಯುತ್ತಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಹಾಪುರ ತಾಲೂಕಿನ 22 ಗ್ರಾಪಂಗಳಲ್ಲಿ, ಸುರುಪುರ ತಾಲೂಕಿನ 20 ಗ್ರಾಪಂ ಹಾಗೂಹುಣಸಗಿ ತಾಲೂಕಿನ 17 ಗ್ರಾಪಂಗಳಲ್ಲಿ ಮೊದಲನೇ ಹಂತದಲ್ಲಿ ಡಿ.22ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ.
ಶಹಾಪುರ ತಾಲೂಕಿನ ಶಿರವಾಳ ಗ್ರಾಪಂನ ಎಲ್ಲಾ 17 ಸದಸ್ಯ ಸ್ಥಾನ, ಸುರಪುರ ತಾಲೂಕಿನಯಾಳಗಿ ಗ್ರಾಪಂನ 17 ಸದಸ್ಯ ಸ್ಥಾನಗಳಿಗೆ ಹಾಗೂ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಪಂನ 22 ಸದಸ್ಯ ಸ್ಥಾನಗಳಿಗೆ ಅವಿರೋಧಆಯ್ಕೆಯಾಗಿರುವುದರಿಂದ ಈ ಗ್ರಾಪಂಗಳಿಗೆಮತದಾನ ನಡೆಯುವುದಿಲ್ಲ. ಜಿಲ್ಲೆಯಲ್ಲಿ226 ಅಭ್ಯರ್ಥಿಗಳು ಈಗಾಗಲೇ ಅವಿರೋಧಆಯ್ಕೆಯಾಗಿದ್ದಾರೆ. ಶಹಾಪುರ ತಾಲೂಕಿನ ಗೋಗಿಪೇಠ ಗ್ರಾಮ ಪಂಚಾಯಿತಿಯ 19 ಸ್ಥಾನಗಳಿಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿರುವುದರಿಂದ ಮತದಾನ ನಡೆಯುತ್ತಿಲ್ಲ.
ಅಭ್ಯರ್ಥಿಗಳು: ಡಿ.22ರಂದು ನಡೆಯಲಿರುವ ಮೊದಲ ಹಂತದಲ್ಲಿ ಚುನಾವಣೆಗೆ ಶಹಾಪುರ ತಾಲ್ಲೂಕಿನಲ್ಲಿ 495 ಸ್ಥಾನಗಳಲ್ಲಿ 87 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಚುನಾವಣೆನಡೆಯಲಿರುವ 389 ಸ್ಥಾನಗಳಿಗೆ 1008 ಅಭ್ಯರ್ಥಿಗಳು, ಸುರುಪುರ ತಾಲೂಕಿನಲ್ಲಿ 383 ಸ್ಥಾನಗಳಲ್ಲಿ 58 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಚುನಾವಣೆ ನಡೆಯಲಿರುವ325 ಸ್ಥಾನಗಳಿಗೆ 785 ಅಭ್ಯರ್ಥಿಗಳು ಹಾಗೂ ಹುಣಸಗಿ ತಾಲೂಕಿನಲ್ಲಿ 286 ಸ್ಥಾನಗಳಿಗೆ 651 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಮತಗಟ್ಟೆಗಳು: ಮೊದಲನೇ ಹಂತದಲ್ಲಿ ಮತದಾನ ನಡೆಯುವ ಶಹಾಪುರತಾಲೂಕಿನಲ್ಲಿ 180 ಮತಗಟ್ಟೆ, ಸುರಪುರತಾಲೂಕಿನಲ್ಲಿ 141 ಮತಗಟ್ಟೆ ಹಾಗೂಹುಣಸಗಿ ತಾಲೂಕಿನಲ್ಲಿ 128 ಮತಗಟ್ಟೆಗಳನ್ನುಗುರುತಿಸಲಾಗಿದೆ. ಮೊದಲನೇ ಹಂತದಚುನಾವಣೆಯಲ್ಲಿ ಒಟ್ಟು 449 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಬಂದೋಬಸ್ತ್: ಮೊದಲ ಹಂತದ ಮತದಾನಕ್ಕಾಗಿ ಸೂಕ್ತ ಬಂದೋಬಸ್ತ್ ಒದಗಿಸಲು ಶಹಾಪುರ ತಾಲೂಕಿಗೆ ಒಟ್ಟು 257 ಪೊಲೀಸ್ ಸಿಬ್ಬಂದಿ, ಸುರುಪುರ ತಾಲೂಕಿಗೆ ಒಟ್ಟು 201 ಸಿಬ್ಬಂದಿ ಹಾಗೂ ಹುಣಸಗಿ ತಾಲೂಕಿಗೆ ಒಟ್ಟು 202 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅತ ಸೂಕ್ಷ್ಮ ಮತಗಟ್ಟೆ: ಶಹಾಪುರ ತಾಲೂಕಿನಲ್ಲಿ 14, ಸುರುಪುರ ತಾಲೂಕಿನಲ್ಲಿ 33 ಮತ್ತು ಹುಣಸಗಿ ತಾಲೂಕಿನಲ್ಲಿ 33 ಒಟ್ಟು 80 ಅತೀ ಸೂಕ್ಷ್ಮ ಮತಗಟ್ಟೆಗಳನ್ನುಗುರುತಿಸಲಾಗಿದ್ದು, ಮತದಾನ ದಿನದಂದು ಮತಗಟ್ಟೆಗಳಲ್ಲಿ ವಿಡಿಯೋಗ್ರಾಫ್ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.