Advertisement

ಯಾದಗಿರಿ ಐವರಲ್ಲಿ ಕೋವಿಡ್-19 ಸೋಂಕು ಪತ್ತೆ

09:07 PM Jun 02, 2020 | Sriram |

ಯಾದಗಿರಿ: ಜಿಲ್ಲೆಯಲ್ಲಿ ಜೂನ್‌ 2ರಂದು 5 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಕೋವಿಡ್‌19 ಸೋಂಕಿತರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಗಡಿ ಜಿಲ್ಲೆಗೆ ಮಹಾರಾಷ್ಟ್ರದ ನಂಜು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಸೋಮವಾರ ಒಂದೂ ಪ್ರಕರಣ ಪತ್ತೆಯಾಗದೇ ಜಿಲ್ಲೆಯ ಜನರಲ್ಲಿ ಕೊಂಚ ನೆಮ್ಮದಿ ಉಂಟಾಗಿತ್ತು. ಆದರೆ ಮಂಗಳವಾರ ಮತ್ತೆ ಸೋಂಕು ಕಾಣಿಸಿದೆ.

Advertisement

ಗುರುಮಠಕಲ್‌ ತಾಲೂಕು ಗಣಪುರ ಗ್ರಾಮದ 40 ವರ್ಷದ ಪುರುಷ (ಪಿ-3465), ಚಪೆಟ್ಲಾ ಗ್ರಾಮದ 18 ವರ್ಷದ ಯುವತಿ (ಪಿ-3466), ಮಿನಾಸಪುರ ಗ್ರಾಮದ 19 ವರ್ಷದ ಯುವತಿ (ಪಿ-3467), ಕೇಶ್ವಾರ ಗ್ರಾಮದ 21 ವರ್ಷದ ಪುರುಷ (ಪಿ-3468), ಅಲ್ಲಿಪುರ ದೊಡ್ಡ ತಾಂಡಾದ 28 ವರ್ಷದ ಪುರುಷ (ಪಿ-3469) ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆ.

ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಹಾರಾಷ್ಟ್ರದ ಮುಂಬೈನಿಂದ ಯಾದಗಿರಿ ಜಿಲ್ಲೆಗೆ ಮೇ 12, 14 ಮತ್ತು 18ರಂದು ಹಿಂದಿರುಗಿದ್ದಾರೆ. ಪಿ-3469 ವ್ಯಕ್ತಿಯನ್ನು ಅಲ್ಲಿಪುರ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆ ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಲಾಗಿತ್ತು. ಉಳಿದ ನಾಲ್ವರನ್ನು ಗುರುಮಠಕಲ್‌ನ ಎಸ್‌ಟಿ ಹಾಸ್ಟೆಲ್‌ ಕ್ವಾರಂಟೈನ್‌ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈವರೆಗೆ 28 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next