ಯಾದಗಿರಿ: ರವಿವಾರವಷ್ಟೇ 24 ಜನರಿಗೆ ವಕ್ಕರಿಸಿದ್ದ ಮಹಾಮಾರಿ ಕೋವಿಡ್ ಜಿಲ್ಲೆಗೆ ಎಡೆಬಿಡದೇ ಕಂಟಕವಾಗಿ ಕಾಡುತ್ತಿದೆ.
ಸೋಮವಾರ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ 15 ಜನರಲ್ಲಿ ಸೋಂಕು ದೃಢವಾಗಿದ್ದು ಈಗ ಸೋಂಕಿತರ ಸಂಖ್ಯೆ 126 ಗೆ ಏರಿಕೆಯಾಗಿದೆ.
ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದ 3 ವರ್ಷದ ಬಾಲಕಿ ಪಿ- 2113, 3 ವರ್ಷದ ಬಾಲಕ ಪಿ- 2121 ಹಾಗೂ 5 ವರ್ಷದ ಬಾಲಕ ಪಿ-2118 ಸೇರಿದಂತೆ ಒಟ್ಟು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇವರೆಲ್ಲಾ ಮಹಾರಾಷ್ಟ್ರ ದಿಂದ ಬಂದಿದ್ದಾರೆ.
ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತರುವುದು, ಪ್ರಮುಖವಾಗಿ ಸೋಂಕಿನ ಲಕ್ಷಣಗಳೇ ಇಲ್ಲದಿರುವವರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಮುಖ ವಿಚಾರವೆಂದರೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಅಂತರ ಕಾಪಾಡದಿರುವುದು ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳಲ್ಲಿ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಈ ಮದ್ಯೆಯೇ ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಗುರುಮಠಕಲ್ ಕ್ಷೇತ್ರದ ಕ್ವಾರಂಟೈನ್ ಕೇಂದ್ರಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು ಅಲ್ಲಿ ಜನರಿಗೆ ಮೂಲ ಸೌಕರ್ಯದ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
ಜಿಲ್ಲೆಯ ಶಾಸಕರ ಸಲಹೆ ಸೂಚನೆ ಪಡೆಯಲು ಮನವಿ ಮಾಡಿದ್ದಾರೆ.