Advertisement

ಯಚುಲಿ ಬೇಸಿಗೆ ರಾಜಧಾನಿ!

06:20 AM Nov 09, 2017 | Team Udayavani |

ಯಚುಲಿ: ಪ್ರೇಮಿಗಳ ಸ್ವರ್ಗವೆಂದೇ ಬಣ್ಣಿಸಲಾಗುವ ಅರುಣಾಚಲ ಪ್ರದೇಶದ ಯಚುಲಿ ನಗರವನ್ನು ಆ ರಾಜ್ಯದ ಬೇಸಿಗೆ ರಾಜಧಾನಿಯೆಂದು ಘೋಷಿಸಲಾಗಿದೆ. ಟಿಬೆಟ್‌ ಗಡಿ ಭಾಗಕ್ಕೆ ಅಂಟಿಕೊಂಡಂತಿರುವ ಈ ನಗರಕ್ಕೆ ಟಿಬೆಟ್‌ನಿಂದ ಬರುತ್ತಿರುವ ಅಕ್ರಮ ವಲಸಿಗರನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. 

Advertisement

ಅಂದಹಾಗೆ, ಅರುಣಾಚಲ ಪ್ರದೇಶದ ಪಶ್ಚಿಮ ಭಾಗದ ರಾಜಧಾನಿಯೆಂದು ಯೆಚು ಲಿಯನ್ನು ಹೆಸರಿಸಲಾಗಿದ್ದು, ಈ ಪಶ್ಚಿಮ ಭಾಗವು 11 ಜಿಲ್ಲೆ ಹಾಗೂ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅರುಣಾಚಲದ ಮುಖ್ಯ ರಾಜಧಾನಿ ಇಟಾನಗರದ ಈಶಾನ್ಯ ದಿಕ್ಕಿಗೆ ಸುಮಾರು 100 ಕಿ.ಮೀ. ದೂರದಲ್ಲಿದ್ದು, 3 ಸಾವಿರ ಜನಸಂಖ್ಯೆ ಹೊಂದಿದೆ. 

ಈ ಊರಿಗೆ ರಾಜಧಾನಿ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಪೆಮಾ ಖಂಡು, “”ಇದೊಂದು ಐತಿಹಾಸಿಕ ದಿನ. ರಾಜ್ಯದ ಪಶ್ಚಿಮ ಭಾಗದ ನಿಯಂತ್ರ ಣವು ವಿಭಾಗೀಯ ಆಯುಕ್ತರ ಕೈಯ್ಯಲ್ಲಿರಲಿದ್ದು, 50 ಲಕ್ಷ ರೂ.ವರೆಗಿನ ಸರಕಾರಿ ಯೋಜನೆಗಳ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಅವರಿಗೆ ನೀಡಲಾಗಿದೆ” ಎಂದು ತಿಳಿಸಿದರು. 

ಏತನ್ಮಧ್ಯೆ, ತಮ್ಮ ಊರಿಗೆ ಬೇಸಿಗೆ ರಾಜಧಾನಿ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂತುಷ್ಟರಾಗಿರುವ ಜನತೆ, ವಿಭಾಗೀಯ ಆಯುಕ್ತರ ಹಾಗೂ ಉಪ ಪೊಲೀಸ್‌ ಮಹಾ ನಿರ್ದೇಶಕರಿಗಾಗಿ ಕಟ್ಟಲಾಗುವ ಕಚೇರಿಗಳಿಗೆ ಸ್ವಯಂಪ್ರೇರಿತವಾಗಿ ಸುಮಾರು 200 ಹೆಕ್ಟೇರ್‌ ಭೂಮಿಯನ್ನು ದಾನ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. ಯಚುಲಿಗೆ ರಾಜಧಾನಿ ಸ್ಥಾನಮಾನದ ಬೇಡಿಕೆ 20 ವರ್ಷ‌ ಹಿಂದೆಯೇ ಬಂದಿತ್ತು. ಆಗ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಈಗ ಅನುಮತಿ ಸಿಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next