Advertisement

“ಯಾನ’ಮುಂದುವರೆದಿದೆ

10:58 AM Oct 23, 2017 | |

ವಿಜಯಲಕ್ಷ್ಮೀ ಸಿಂಗ್‌ “ಯಾನ’ ಎಂಬ ಚಿತ್ರವನ್ನು ಶುರು ಮಾಡಿದ್ದು ನೆನಪಿರಬಹುದು. ಕಳೆದ ವರ್ಷ ಈ ಚಿತ್ರ ಪ್ರಾರಂಭವಾಗಿತ್ತು. ಆ ನಂತರ ಯಾವುದೇ ಸುದ್ದಿ ಇರಲಿಲ್ಲ. ಈಗ ಚಿತ್ರವು ಕೊನೆಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರದ ಪ್ರೋಮೋ ಹಾಡು ಬಿಡುಗಡೆಯಾಗಲಿದೆ.

Advertisement

ಹೌದು, “ಯಾನ’ ಚಿತ್ರದ ಪ್ರೋಮೋ ಹಾಡು ನಾಡಿದ್ದು ಮಂಗಳವಾರ ಬಿಡುಗಡೆಯಾಗಲಿದೆ. ಹಾಡನ್ನು ಬಿಡುಗಡೆ ಮಾಡುತ್ತಿರುವವರು ಸುದೀಪ್‌. ಈ ಪ್ರೋಮೋ ಸಾಂಗ್‌ ಬಿಡುಗಡೆಯಾದ ನಂತರ ಕೆಲವೇ ತಿಂಗಳಲ್ಲಿ ಚಿತ್ರ ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ.

ಅಂದ ಹಾಗೆ, “ಯಾನ’ ಚಿತ್ರದಲ್ಲಿ ಜೈಜಗದೀಶ್‌ ಮತ್ತು ವಿಜಯಲಕ್ಷ್ಮೀ ಸಿಂಗ್‌ ತಮ್ಮ ಮಕ್ಕಳಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ನಾಯಕಿಯರನ್ನಾಗಿ ಪರಿಚಯಿಸುತ್ತಿದ್ದಾರೆ. ಈ ಮೂವರೂ, “ಕೋತಿಗಳು ಸಾರ್‌ ಕೋತಿಗಳು’ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರ ಮಕ್ಕಳಾಗಿ ನಟಿಸಿದ್ದರು.

ಈಗ ಮೊದಲ ಬಾರಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಟೀನೇಜ್‌ ಹುಡುಗಿಯರ ಬದುಕನ್ನು ಬಿಂಬಿಸುವ ಈ ಚಿತ್ರಕ್ಕೆ ವಿಜಯಲಕ್ಷ್ಮೀ ಸಿಂಗ್‌ ಅವರೇ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನು “ಸಿಂಪಲ್‌’ ಸುನಿ ಸಂಭಾಷಣೆಗಳನ್ನು ರಚಿಸಿದ್ದಾರೆ.

ಚಿತ್ರಕ್ಕೆ ಕರಂ ಚಾವ್ಲಾ ಛಾಯಾಗ್ರಹಣ ಮಾಡಿದರೆ, ಜೋಶ್ವಾ ಶ್ರೀಧರ್‌ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ವಿಜಯಲಕ್ಷ್ಮೀ ಸಿಂಗ್‌ ಮತ್ತು ಜೈಜಗದೀಶ್‌ ಜೊತೆಗೆ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ಕೈಜೋಡಿಸಿದ್ದಾರೆ.

Advertisement

ಇದಕ್ಕೂ ಮುನ್ನ ಹರೀಶ್‌ ಮತ್ತು ಶರ್ಮಿಳಾ ಶೇರಿಗಾರ್‌, ಕೋಡ್ಲು ರಾಮಕೃಷ್ಣ ನಿರ್ದೇಶನದ “ಮಾರ್ಚ್‌ 22′ ಚಿತ್ರ ನಿರ್ಮಿಸಿದ್ದರು. ಚಿತ್ರ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಈ ಚಿತ್ರದ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next