Advertisement
ಹೀಗೆ ಆಕರ್ಷಣೆಯ ತಾಣವಾಗಿ ಜಗತ್ತನ್ನೇ ತನ್ನತ್ತ ಸೆಳೆಯಲು ಆಯ್ಕೆಯಾಗಿರುವುದು ಮುಂಬಯಿ ಮಹಾನಗರದ ಕಡಲ ಕಿನಾರೆ. ಈ ಎಲ್ಲ ಕಾರ್ಯಗಳಿಗೆ ಸ್ಥಳಾವಕಾಶ ಒದಗಿಸಲಿರುವುದು, ವಾಣಿಜ್ಯ ನಗರಿಯ ನಂ.1 ಸಂಸ್ಥೆ “ಮುಂಬಯಿ ಬಂದರು ಪ್ರಾಧಿಕಾರ (ಎಂಪಿಟಿ). “ತಾಜ್ ಹೋಟೆಲ್, ಬಲ್ಲಾರ್ಡ್ ಎಸ್ಟೇಟ್, ರಿಲಾಯನ್ಸ್ ಬಿಲ್ಡಿಂಗ್ ಸೇರಿದಂತೆ ಹಲವು ಪ್ರತಿಷ್ಠಿತ ಆಸ್ತಿಗಳನ್ನು ಹೊಂದಿರುವ ಎಂಬಿಪಿಟಿ, ಅತ್ಯಂತ ವಿಶಾಲವಾದ ಬಂದರು ಪ್ರದೇಶವನ್ನು ಹೊಂದಿದ್ದು, ಈ ಬಂದರನ್ನು ಅಭಿವೃದ್ಧಿಪಡಿಸುವ ಸುಂದರ ಯೋಜನೆಗಳು ನಮ್ಮ ಬಳಿ ಇವೆ. ಈ ಭೂಮಿಯನ್ನು ಬಿಲ್ಡರ್‌ಗಳಿಗೆ ಕೊಡದೆ, ಸರಕಾರವೇ ಖುದ್ದಾಗಿ ನಿಂತು, ನಿರ್ವಹಣೆ ಹೊಣೆ ಹೊರಲಿದ್ದು, ಮುಂಬಯಿನ ಸಮುದ್ರ ತೀರದಲ್ಲಿ ಬುರ್ಜ್ ಖಲೀಫಾಗಿಂತಲೂ ಎತ್ತರದ ಕಟ್ಟಡ, ಮರೀನ್ ಡ್ರೈವ್‌ಗಿಂತ 3 ಪಟ್ಟು ದೊಡ್ಡದಾದ ಹಸಿರು ಪಥ ನಿರ್ಮಾಣವಾಗಲಿದೆ,’ ಎನ್ನುತ್ತಾರೆ ಗಡ್ಕರಿ. ಬಂದರಿನ ಮೂಲ ಸೌಲಭ್ಯಗಳ ವಿನ್ಯಾಸ ಹಾಗೂ ಮಾಸ್ಟರ್ ಪ್ಲಾನ್‌ಗೆ ಸಂಬಂಧಿಸಿದಂತೆ ಮುಂಬಯಿ ಪೋರ್ಟ್ ಈಗಾಗಲೇ ಜಾಗತಿಕ ಟೆಂಡರ್ ಕರೆದಿದೆ.
1873ರಲ್ಲಿ ಸ್ಥಾಪನೆಯಾದ ಮುಂಬಯಿ ಪೋರ್ಟ್ ಟ್ರಸ್ಟ್, ದೇಶದ ಅಗ್ರ 12 ಬಂದರುಗಳ ಪೈಕಿ ಒಂದೆನಿ ಸಿದ್ದು, ಮುಂಬಯಿನ ನಂ.1 ಲ್ಯಾಂಡ್‌ಲಾರ್ಡ್ ಎನಿಸಿದೆ. ಅಭಿವೃದ್ಧಿಯಾಗುವ ಪ್ರದೇಶ
ಸುಮಾರು 500 ಹೆಕ್ಟೇರ್ ಪ್ರದೇಶ ಅಭಿವೃದ್ಧಿಗೆ ಒಳಪಡಲಿದ್ದು, ಬಂದರು ಕಾರ್ಯಾಚರಣೆ, ವ್ಯವಹಾರ, ಕಚೇರಿ, ವಾಣಿಜ್ಯ, ರೀಟೇಲ್, ಮನೋರಂಜನೆ, ಸಮುದಾಯ ಯೋಜನೆಗಳು ಮತ್ತು ಸಮುದಾಯ ಭವನಗಳು ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇಲ್ಲಿ ತಲೆಯೆತ್ತಲಿವೆ.
Related Articles
ಮಡ್‌ಗಾಂವ್ ಡಾಕ್ಸ್ ಮತ್ತು ವಡಾಲ ನಡುವೆ ಸುಮಾರು 7 ಕಿ.ಮೀ ಉದ್ದದ ಮರೀನ್ ಡ್ರೈವ್ ನಿರ್ಮಿಸುವುದು ಈ ಯೋಜನೆಯ ಪ್ರಮುಖ ಭಾಗ. ಇದು ಹಾಲಿ ಇರುವ ಮರೀನ್ ಡ್ರೈವ್‌ಗಿಂತಲೂ ಮೂರು ಪಟ್ಟು ದೊಡ್ಡದಿರಲಿದೆ.
Advertisement
ಖಲೀಫಾ ಮೀರಿಸುವ ಕಟ್ಟಡಇದೇ ಬಂದರು ಪ್ರದೇಶದಲ್ಲಿ ದುಬೈನ್ ಬುರ್ಜ್ ಖಲೀಫಾಗಿಂತಲೂ ಎತ್ತರವಾಗಿರುವ ಕಟ್ಟಡ ನಿರ್ಮಿಸುವ ಯೋಜನೆಯಿದೆ. ಬೃಹತ್ ಮರೀಗೆ ಹೊಂದಿಕೊಂಡಂತೆಯೇ ಈ ಗಗನಚುಂಬಿ ಕಟ್ಟಡ ನಿರ್ಮಾಣವಾಗಲಿದ್ದು, ಜಗತ್ತಿನ ಆಕರ್ಷಣೆಯ ಕೇಂದ್ರವಾಗಲಿದೆ. ಮುಂದಿನ ಯೋಜನೆ
ಮುಂಬಯಿ ಬಂದರು ಅಭಿವೃದ್ಧಿಗೊಂಢ ಅನಂತರ ಕೋಲ್ಕತಾ ಬಂದರನ್ನು ಸುಂದರವಾಗಿಸುವ ಕಾರ್ಯ ನಡೆಯಲಿದೆ. ಇದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಖಂಡಾಲ ಬಂದರನ್ನು ಸ್ಮಾರ್ಟ್ ಆಗಿಸುವ ಆಲೋಚನೆ ಕೂಡ ಕೇಂದ್ರಕ್ಕಿದೆ.