Advertisement

ಪಕ್ಷದ ಆ ತೀರ್ಮಾನಗಳು ಸರಿಯಲ್ಲ: ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ ವೈಎಸ್ ವಿ ದತ್ತಾ

02:16 PM Dec 25, 2020 | keerthan |

ಶಿವಮೊಗ್ಗ: ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು. ಇಲ್ಲದೇ ಇದ್ದರೆ ನಾವು ಜನರ ಮಧ್ಯೆ ನಗೆ ಪಾಟಲಿಗೀಡಾಗಬೇಕಾಗುತ್ತದೆ. ಆಗ ತನ್ನಿಂತಾನೆ ಪಕ್ಷ ದುರ್ಬಲವಾಗುತ್ತದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ ವೈ.ಎಸ್.ವಿ.ದತ್ತಾ ತನ್ನದೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಿಷಯದಲ್ಲಿ ನಮ್ಮ ಪಕ್ಷ ತೆಗೆದುಕೊಂಡ ತೀರ್ಮಾನ ಸರಿಯಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ:ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಅಕ್ರಮಕ್ಕೆ ಯತ್ನ: ವಿನಯ್ ಕುಮಾರ್ ಸೊರಕೆ ಆಕ್ರೋಶ

ನಾವು ದೆಹಲಿ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸಿದವರು‌. ಈಗಲೂ ನಾವು ಅದಕ್ಕೇ ಬದ್ಧರಾಗಿರಬೇಕು. ಧಾರ್ಮಿಕ ಹಾಗೂ ಭಾವನಾತ್ಮಕತೆ ನಮಗೆ ಮುಖ್ಯವಲ್ಲ ಎಂದು ನಾವು ಸಾರಬೇಕಿದೆ. ನಮಗೆ ಅಧಿಕಾರವಿರಲಿ ಇಲ್ಲದಿರಲಿ ಅದಕ್ಕೆ ತಲೆಕೆಡಿಸಿಕೊಳ್ಳಬಾರದು‌. ಜನರೇ ನಮ್ಮನ್ನು ಗುರುತಿಸುವಂತಾಗಬೇಕು ಎಂದು ವೈಎಸ್ ವಿ ದತ್ತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next