Advertisement

ಇನ್ನೂ ಅವಕಾಶ ಲಭಿಸದಿದ್ದಲ್ಲಿ ರಾಜಕೀಯ ಸನ್ಯಾಸ

06:20 AM Apr 09, 2018 | Team Udayavani |

ನಾನು ರಾಜಕೀಯ ನಾಯಕನಾಗಿ ಬೆಳೆಯಲು ನನ್ನಲ್ಲಿನ ಭಾಷಣ ಕಲೆ ಉತ್ತಮ ಪ್ರಭಾವ ಬೀರಿದೆ. ಹಾಗಾಗಿ ನಾನು 1983 ಹಾಗೂ 85ಗಳಲ್ಲಿ ಬಿಜೆಪಿಯಿಂದಲೇ ಸ್ಪರ್ಧೆಗಿಳಿದಿದ್ದೆ. ಸೋತಿದ್ದೆ. ಮೊದಲ ಬಾರಿ ಅಲ್ಪ ಮತದಿಂದ ಸೋತ ನನಗೆ ನಿಗಮದ ಅಧ್ಯಕ್ಷತೆಯೊಂದು ತನಗೆ ಲಭಿಸಿದ್ದರೂ ಮತ್ತೆ ಬಿಜೆಪಿ ನಾಯಕರು ಆ ಬಳಿಕ ನನ್ನನ್ನು ಅವಗಣಿಸಿದ್ದರು. ಹಾಗಾಗಿ ನಾನು, ವಸಂತ ಬಂಗೇರ ಹಾಗೂ ಎಂ.ಕೆ. ವಿಜಯ ಕುಮಾರ್‌ ಜೆಡಿಎಸ್‌ಗೆ ಸೇರಿದ್ದೆವು. ತನಗೆ ಅಲ್ಲೂ ಏನೂ ಬೆಳೆಯುವ ಅವಕಾಶಗಳು ಲಭಿಸಲಿಲ್ಲ. ಪಕ್ಷಾಂತರವು ನನಗೆ ಸಹಕಾರಿಯಾಗಲಿಲ್ಲ. ಇದೀಗ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ ಎಂಬುದಾಗಿ ವೈ. ಗಂಗಾಧರ ಸುವರ್ಣ ಹೇಳಿದ್ದಾರೆ.

Advertisement

ಪಕ್ಷಾಂತರಿಗಳಿಗೆ ರಾಜಕೀಯವು 
ಎಂದೂ ಗೌರವ ತರಲಾರದೇ ?

       ಹಾಗೇನಿಲ್ಲ. ಜಾರ್ಜ್‌ ಫೆರ್ನಾಂಡಿಸ್‌, ಸಿದ್ದರಾಮಯ್ಯ, ಯು. ಆರ್‌. ಸಭಾಪತಿಯಂಥವರು ಪಕ್ಷಗಳನ್ನು ಹಲವು ಬಾರಿ ಬದಲಿಸಿದರೂ ರಾಜಕೀಯ ಮುತ್ಸದ್ಧಿಗಳಾಗಿ ಬೆಳೆದವರು. ರಾಜಕೀಯದಲ್ಲಿ ಯಾವುದನ್ನೂ ಉಪೇಕ್ಷಿಸಲಾಗದು.
 
ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ವೇಳೆ ಯಾವುದು 
ತಮ್ಮ ಸೋಲಿಗೆ ಕಾರಣವಾಯಿತು?

       ಚುನಾವಣೆಗೆ ಹೊಸಮುಖ ನಾನಾಗಿದ್ದೆನು. ಮಾಜಿ ಶಾಸಕ ಭಾಸ್ಕರ ಶೆಟ್ಟಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹೊಸಮುಖ ವಸಂತ ಸಾಲ್ಯಾನರನ್ನು ಮಣಿಸಲು ರಾಜಕೀಯ ತಂತ್ರ ಹೂಡಿ 6ಮಂದಿಯನ್ನು ಅವರೇ ಕಣಕ್ಕಿಳಿಸಿದ್ದರು. ಕ್ರಾಂತಿರಂಗದ ಅಭ್ಯರ್ಥಿ ಶ್ರೀಧರ ಕಲ್ಮಾಡಿ ಬಿರುಸಿನ ಪ್ರಚಾರದ ಅನಂತರ ನಿಧಾನಗತಿಗೆ ಶರಣಾದರು. ಅದುವೇ ನನಗೆ ಮುಳುವಾಯಿತು. 

ಕಾಂಗ್ರೆಸ್‌ನಲ್ಲಿ ಮತ್ತೆ ಇದೀಗ ಆಕಾಂಕ್ಷಿಯೇ?
       ಅವಕಾಶ ಲಭ್ಯವಾದಲ್ಲಿ ಬಿಡುವುದಿಲ್ಲ. ಹಲವಾರು ಯುವ ಆಕಾಂಕ್ಷಿ ಗಳಿದ್ದಾರೆ. ಯಾರಿಗೇ ಆಗಲಿ ಬಿ ಪಾರ್ಮ್ ನೀಡಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ನಮ್ಮ ಹೈಕಮಾಂಡ್‌ ಆಗಿರುವುದರಿಂದ ನಾನೇನೂ ಹೇಳುವುದಿಲ್ಲ ಎಂದಿದ್ದಾರೆ.

ಹಿಂದಿನಂತೆ ಈಗಿನ ಸ್ಪರ್ಧೆ ಇದ್ದೀತೇ?
       ವಾತಾವರಣವು ಸಂಪೂರ್ಣ ಬದಲಾಗಿದೆ. ಮತದಾರರು ಪ್ರಜ್ಞಾವಂತರಿದ್ದಾರೆ. ಹಾಗಾಗಿ ಅಂದಿನ ಸ್ಥಿತಿಗತಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಮಾತು ಮುಖ್ಯವಾಗದು. ಇಲ್ಲಿ ಧನಬಲವೇ ಮುಖ್ಯವೆನಿಸುತ್ತಿದೆ. ಕ್ಷೇತ್ರದ ಪ್ರಗತಿಯನ್ನು ಜನತೆ ಗಮನಿಸುತ್ತಿದ್ದಾರೆ. 

ತಮ್ಮ ಮುಂದಿನ ನಡೆ ಏನು?
       ಶಾಲಾ ಜೀವನದಿಂದಲೇ ರಾಜಕೀಯ ರಂಗ ಪ್ರವೇಶಿದ್ದ ನಾನು ಈ ಬಾರಿಯೂ ಕಾಂಗ್ರೆಸ್‌ನಲ್ಲಿ ರಾಜಕೀಯವಾಗಿ ಬೆಳೆಯಲು ಉತ್ತಮ ಅವಕಾಶಗಳು ಸಿಗದಿದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ.

Advertisement

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next