Advertisement

XXXL ಹ್ಯಾಂಡ್‌ಬ್ಯಾಗ್‌!

11:22 AM May 31, 2017 | Harsha Rao |

ವ್ಯಾನಿಟಿಬ್ಯಾಗ್‌ ಎಂಬುದು ದುಡ್ಡಿನ ಪರ್ಸ್‌, ಕರವಸ್ತ್ರ ಮತ್ತು ಕಾಂಪ್ಯಾಕ್ಟ್ ಮೇಕಪ್‌ ಕಿಟ್‌ಅನ್ನು ಕೊಂಡೊಯ್ಯಲು ಮಹಿಳೆಯರು ಬಳಸುತ್ತಿದ್ದ ಪುಟ್ಟದಾದ ಕೈಚೀಲವಾಗಿತ್ತು. ಆದರೀಗ ಮೊಬೈಲ್‌ ಫೋನ್‌, ಛತ್ರಿ, ನೀರಿನ ಬಾಟಲಿ, ಮನೆಯ ಬೀಗದಕೈ, ಗಾಡಿಯ ಬೀಗದ ಕೈ, ಪೆನ್‌, ಕಾಗದ, ಟಿಶ್ಯೂ, ಶಾಲು, ಜಾಕೆಟ್‌ ಅಥವಾ ಕೋಟ್‌, ಎಲ್ಲವನ್ನೂ ಮಹಿಳೆಯರು ಹೋದಲ್ಲೆಲ್ಲಾ ಕೊಂಡುಹೋಗಬೇಕಾದ ಸ್ಥಿತಿ ಬಂದಿದೆ. ಇವೆಲ್ಲವನ್ನೂ ಹೊತ್ತೂಯ್ಯುವ ಚೀಲವೂ ಆಕಾರದಲ್ಲಿ ದೊಡ್ಡದಾಗಿಬಿಟ್ಟಿದೆ! ಆದ್ದರಿಂದಲೇ ಬಹುದೊಡ್ಡ ಹ್ಯಾಂಡ್‌ ಬ್ಯಾಗ್‌ ಅಥವಾ ವ್ಯಾನಿಟಿ ಬ್ಯಾಗ್‌ಗಳು ಈಗ ಟ್ರೆಂಡ್‌ ಆಗುತ್ತಿವೆ. ಹಿಂದೆಲ್ಲ ದೊಡ್ಡ ಬ್ಯಾಗ್‌ಅನ್ನು ಹೊತ್ತುಕೊಂಡು ನಡೆದಾಡಲು ಮುಜುಗರವಾಗುತ್ತಿದ್ದರೆ ಈಗ ದೊಡ್ಡ ಬ್ಯಾಗೇ ಫ್ಯಾಷನ್‌ ಆಗಿಬಿಟ್ಟಿದೆ!

Advertisement

ಇವುಗಳಿಂದ ಅದೆಷ್ಟು ಉಪಯೋಗವಾಗುತ್ತಿದೆ ಎಂದರೆ, ತಾಯಂದಿರು ತಮ್ಮ ಮಕ್ಕಳ ಡೈಪರ್‌, ಹಾಲಿನ ಬಾಟಲಿ, ಬಟ್ಟೆಬರೆ, ಎಲ್ಲವನ್ನೂಜೊತೆಗೇ ಕೊಂಡೊಯ್ಯುತ್ತಾರೆ. ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಕಡತಗಳನ್ನು, ಕಾಗದಪತ್ರಗಳನ್ನೂ, ಲ್ಯಾಪ್‌ಟಾಪ್‌ ಮತ್ತು ಇತರ ವಸ್ತುಗಳನ್ನು ಆರಾಮವಾಗಿ ತಮ್ಮ ದೊಡ್ಡ ಹ್ಯಾಂಡ್‌ಬ್ಯಾಗ್‌ನಲ್ಲೇ ಕೊಂಡೊಯ್ಯುತ್ತಿ¨ªಾರೆ. ಒಂದೆರಡು ದಿನದ ಪ್ರವಾಸಕ್ಕೆ ಹೋಗುವವರೂ ಇದೇ ಹ್ಯಾಂಡ್‌ಬ್ಯಾಗಿನಲ್ಲಿ ಬೇಕಾದ ಎಲ್ಲಾ ಬಟ್ಟೆಬರೆಗಳನ್ನು ತುಂಬಿಸಿಕೊಂಡು ಹೋಗುತ್ತಾರೆ!  ಎಲ್ಲವೂ ಒಂದರÇÉೇ ಹಿಡಿಸೋದ್ರಿಂದ ಹೆಚ್ಚಿನ ಭಾರ ಹೊರುವ ಚಿಂತೆಯಿಲ್ಲ, ಸ್ಟೈಲಿಗೂ ಕಮ್ಮಿ ಇಲ್ಲ!

ಇನ್ನು ಮೇಕಪ್‌ಗೆ ಆದ್ಯತೆ ನೀಡುವವರು, ಮತ್ತದನ್ನು ಹೆಚ್ಚಾಗಿ ಬಳಸುವವರು ಹೇರ್‌ಡ್ರೈಯರ್‌, ಸ್ಟ್ರೇಯ್‌rನರ್‌, ಕರ್ಲರ್‌, ಬ್ರಷ್‌, ಡ್ರೈ ಶಾಂಪೂ, ಹೇರ್‌ ಸಿರಂ, ಸ್ಪ್ರೆà ಮತ್ತಿತರ ಕೇಶ ವರ್ಧಕ ಉತ್ಪನ್ನಗಳನ್ನು ಜೊತೆಗೇ ಕೊಂಡೊಯ್ಯಲು ಇಷ್ಟಪಡುತ್ತಾರೆ.  ಅದರಲ್ಲೂ ಮಾಡೆಲಿಂಗ್‌ ಕ್ಷೇತ್ರದಲ್ಲಿರುವವರಿಗೆ ಇವೆಲ್ಲ ಬಹಳಅಗತ್ಯ. ಇವುಗಳಿಗೆ ಪ್ರತ್ಯೇಕ ಚೀಲ, ಬಟ್ಟೆಗಳಿಗಾಗಿ ಪ್ರತ್ಯೇಕ ಚೀಲ, ಮೇಕಪ್‌ ಸಾಮಗ್ರಿಗಳಿಗೆ ಪ್ರತ್ಯೇಕ ಚೀಲ! ಹೀಗೆ ಬೇರೆ ಬೇರೆ ಚೀಲಗಳನ್ನು ಹೊತ್ತುಕೊಂಡು ಹೋಗುವ ಬದಲಿಗೆ ಎಲ್ಲವನ್ನೂಒಂದೇ ಚೀಲದಲ್ಲಿ ಹಾಕಿಕೊಂಡರೆ ಸುಲಭ. ಮತ್ತು ಆ ಚೀಲ ಸ್ಟೈಲಿಶ್‌ ಆಗಿದ್ದರೆ ಸುಂದರ! ಎಂಬ ಆಲೋಚನೆಯಿಂದಲೇ ಈ ಗಿಗಿಗಿಔ ಹ್ಯಾಂಡ್‌ ಬ್ಯಾಗ್‌ಗಳು ರ್‍ಯಾಂಪಿನಿಂದ ಮಾರುಕಟ್ಟೆಗೆ ಬಂದಿರುವುದು.

ಇವುಗಳಲ್ಲಿ ವಿಧವಿಧವಾದ ಬಣ್ಣ, ವಿನ್ಯಾಸ, ಆಕೃತಿ ಮತ್ತು ಸ್ಟೈಲ… ಅಲ್ಲದೆ ಮೆಟೀರಿಯಲ್‌ಅನ್ನೂ ಗ್ರಾಹಕರು ನೋಡುತ್ತಿದ್ದಾರೆ.ದಿನನಿತ್ಯದ ಉಪಯೋಗಕ್ಕೆ ಬಳಸುವವರು ಇದರಲ್ಲಿ ವಾಟರ್‌ಪ್ರೂಫ್ ಮತ್ತು ರಫ್ ಮಟೀರಿಯಲ್‌ ಇರುವ ಹ್ಯಾಂಡ್‌ಬ್ಯಾಗನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಚಳಿಗಾಲ, ಮಳೆಗಾಲ, ಬೇಸಿಗೆ, ಹೀಗೆ ಎÇÉಾ ಸಮಯದಲ್ಲೂ ಇಂಥ ವಾಟರ್‌ಪ್ರೂಫ್ ಹ್ಯಾಂಡ್‌ಬ್ಯಾಗ್‌ಗಳು ಉಪಯೋಗಕ್ಕೆ ಬರುತ್ತವೆ. 

ಇದರಲ್ಲಿ ಡಬಲ್‌ಸೈಡೆಡ್‌, ಇನ್‌ಸೈಡ್‌ ಔಟ್‌ನಂಥ ಆಯ್ಕೆಗಳೂ ಇವೆ. ಅಂದರೆ, ಬ್ಯಾಗಿನ ಹೊರಗೊಂದು ಬಣ್ಣ, ಒಳಗೊಂದು ಬಣ್ಣ. ಇದರಿಂದ ಏನು ಉಪಯೋಗ ಎಂದರೆ, ಬ್ಯಾಗಿನ ಹೊರಬದಿ ಕೊಳೆಯಾದಲ್ಲಿ, ಬ್ಯಾಗಿನ ಒಳಬದಿಯನ್ನು ಹೊರಕ್ಕೆ ಹಾಕಿ, ಹೊರಬದಿಯನ್ನು ಒಳಬದಿಯಾಗಿಸಬಹುದು! ಇಲ್ಲವೇ, ಬೇರೆ- ಬೇರೆ ಬ್ಯಾಗ್‌ಗಳಂತೆ ಕಾಣಲು ಒಂದು ದಿನ ಒಂದುಬಣ್ಣ, ಮತ್ತೂಂದು ದಿನ ಮತ್ತೂಂದು ಬಣ್ಣದ ಬದಿಯನ್ನು ಬಳಸಬಹುದು. ಅಲ್ಲದೆ, ಉಟ್ಟಬಟ್ಟೆಯೊಂದಿಗೆ ಮ್ಯಾಚ್‌ ಆಗುವ ಬದಿಯನ್ನು ಬ್ಯಾಗಿನ ಹೊರಬದಿಯನ್ನಾಗಿಯೂ ಬಳಸಬಹುದು. ಆದ್ದರಿಂದ ದೊಡ್ಡ ಹ್ಯಾಂಡ್‌ಬ್ಯಾಗ್‌ಗಳನ್ನು ಮುಜುಗರವಿಲ್ಲದೆ ಶೋ ಆಫ್ ಮಾಡಿ!

Advertisement

– ಅದಿತಿ ಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next