Advertisement

ಕ್ಸಿಯೋಮಿ 11ಐ ಹೈಪರ್‌ ಚಾರ್ಜ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

04:16 PM Jan 19, 2022 | Team Udayavani |

ಹೊಸದಿಲ್ಲಿ: ಕ್ಸಿಯೋಮಿ 11ಐ ಹೈಪರ್‌ಚಾರ್ಜ್‌ 5ಜಿ ಮತ್ತು ಕ್ಸಿಯೋಮಿ 11ಐ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಕ್ಸಿಯೋಮಿ 11ಐ ಹೈಪರ್‌ಚಾರ್ಜ್‌ 5ಜಿ ಫೋನ್‌ 120ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯ ಹೊಂದಿದ್ದು ಕೇವಲ 15 ನಿಮಿಷಗಳಲ್ಲಿ ಫುಲ್ ಚಾರ್ಜ್‌ ಆಗುವುದಾಗಿ ಸಂಸ್ಥೆ ಹೇಳಿದೆ.

Advertisement

ಫೋನ್‌ 108 ಎಂಪಿ ಪ್ರೈಮರಿ ಕೆಮರಾ ಮತ್ತು 16ಎಂಪಿ ಸೆಲ್ಫೀ ಕೆಮರಾ ಹೊಂದಿದೆ. 4500 ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ. 6ಜಿಬಿ ರ್ಯಾಮ್‌, 128 ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನ್‌ಗೆ 26,999 ರೂ. ಬೆಲೆಯಿದ್ದರೆ 8ಜಿಬಿ ರ್ಯಾಮ್‌, 128 ಇಂಟರ್‌ನಲ್‌ ಸ್ಟೋರೇಜ್‌ ಇರುವ ಫೋನ್‌ನ ಬೆಲೆ 28,999 ರೂ.

ಎಚ್‌ಎಎಲ್‌ನ ಐಜೆಟಿ ಪಲ್ಟಿ ಸಾಹಸ
ಭಾರತೀಯ ವಾಯುಪಡೆಯ ಪೈಲಟ್‌ಗಳ ತರಬೇತಿಗೆಂದು ಬೆಂಗಳೂರಿನ ಹಿಂದೂಸ್ಥಾನ್‌ ಏರೋನಾಟಿಕಲ್‌ ಲಿ. ಸಂಸ್ಥೆ ತಯಾರಿಸಿರುವ ಇಂಟರ್‌ಮೀಡಿಯೇಟ್‌ ಜೆಟ್‌ ಟ್ರೈನರ್‌(ಐಜೆಟಿ) ಗುರುವಾರ ಆಗಸದಲ್ಲಿ ತನ್ನ ಕೊನೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಐಎಎಫ್ ಕಾಪ್ಟರ್‌ಗಳ ಪೈಲಟ್‌ ಗಳು ಎಲ್ಲ ಪರಿಸ್ಥಿತಿಗೂ ಸಿದ್ಧವಿರಬೇಕಾಗುತ್ತದೆ.

ಹಲವು ಬಾರಿ ಅವರ ಕಾಪ್ಟರ್‌ಗಳು ಆಗಸದಲ್ಲೇ ಪಲ್ಟಿ ಹೊಡೆಯಬೇಕಾದ ಸನ್ನಿವೇಶವೂ ಉಂಟಾಗುತ್ತದೆ. ಅದಕ್ಕೆಂದು ಪೈಲಟ್‌ಗಳಿಗೆ ಎರಡನೇ ಹಂತದ ತರಬೇತಿಯಲ್ಲಿ ಜೆಟ್‌ಗಳ ಪಲ್ಟಿ ಹೊಡೆಸುವ ತರಬೇತಿಯನ್ನೂ ನೀಡಲಾಗುತ್ತದೆ. ಅದಕ್ಕೆಂದೇ ಎಚ್‌ಎಎಲ್‌ ಈ ಜೆಟ್‌  ಅನ್ನು ತಯಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next