ಚೀನಾ : ವಿಶ್ವ ಪುಸ್ತಕ ದಿನ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದೇಶವಾಸಿಗಳಿಗೆ ಕೆಲವು ಪುಸ್ತಕಗಳನ್ನು ಓದಲು ಸೂಚಿಸಿದ್ದು, ಈ ಪೈಕಿ ರವೀಂದ್ರನಾಥ್ ಟ್ಯಾಗೋರರ ಕೃತಿಯೂ ಪ್ರಮುಖ!
“ಟ್ಯಾಗೋರರ ಗೀತಾಂಜಲಿಯನ್ನು ಮಕ್ಕಳಿಗೆ ಓದಿಸಿ. ಅವರಲ್ಲಿ ಓದುವ ಹವ್ಯಾಸ ಬೆಳೆಸಿ’ ಎಂದು ಮನವಿ ಮಾಡಿರುವ ಸಂಗತಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರೊಂದಿಗೆ, ರಷ್ಯನ್ ಲೇಖಕರಾದ ಮೈಕೇಲ್ ಲೆರ್ಮೊಂಟಲ್ಸ್ ಅವರ “ಎ ಹೀರೋ ಆಫ್ ಅವರ್ ಟೈಮ್’, ಕಾರ್ಲ್ಮಾರ್ಕ್‌ರ “ದಿ ಕಮ್ಯುನಿಸ್ಟ್ ಮ್ಯಾನಿಫ್ಯಾಸ್ಟೊ’, “ದಾಸ್ ಕ್ಯಾಪಿಟಲ್’ ಅಲ್ಲದೆ, ಲಿಯೋ ಟಾಲ್‌ಸ್ಟಾಯ್ ಅವರ ಪ್ರಸಿದ್ಧ ಕಾದಂಬರಿ “ವಾರ್ ಆ್ಯಂಡ್ ಪೀಸ್’, ಅರ್ನೆಸ್ಟ್ ಹೆಮಿಂಗ್ವೇ ಅವರ “ದಿ ಓಲ್ಡ್ ಮ್ಯಾನ್ ಆ್ಯಂಡ್ ಸೀ’ ಓದಲೂ ಸೂಚಿಸಿದ್ದಾರೆ.
ಅಲ್ಲದೆ, ಜಿನ್‌ಪಿಂಗ್ ಪಟ್ಟಿಯಲ್ಲಿ ಶೇಕ್ಸ್‌ಪಿಯರ್‌ನ “ಎ ಮಿಡ್‌ಸಮ್ಮರ್ ನೈಟ್ ಡ್ರೀಮ್ಸ್, ದಿ ಮರ್ಚೆಂಟ್ ಆಫ್ ವೆನ್ನಿಸ್, ಹ್ಯಾಮ್ಲೆಟ್, ಒಥೆಲೊ, ಕಿಂಗ್‌ಲಿಯರ್, ಮ್ಯಾಕ್‌ಬೆತ್, ರೋಮಿಯೊ ಆ್ಯಂಡ್ ಜೂಲಿಯೆಟ್’ ಕೃತಿಗಳೂ ಸೇರಿವೆ.
ಇದನ್ನೂ ಓದಿ : ಪೂರ್ಣಾವಧಿ ಸರ್ಕಾರ ರಚನೆಯಾದರೆ ತಂಬಾಕಿಗೆ ಹೊಸ ನಿಯಾಮಾವಳಿ: ಹೆಚ್ ಡಿಕೆ