ಬೀಜಿಂಗ್: ಜಗತ್ತಿನಲ್ಲೇ ಅತ್ಯಂತ ಪ್ರಬಲ ನಾಯಕನಾಗಬೇಕು ಎಂದು ಹೊರಟಿದ್ದ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಕಮ್ಯೂನಿಸ್ಟ್ ಕ್ರಾಂತಿ ನಡೆದಿದ್ದು, ಕ್ಸಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂಬ ದಟ್ಟ ವದಂತಿ ಹರಿದಾಡುತ್ತಿರುವ ಬೆನ್ನಲ್ಲೇ ಮಂಗಳವಾರ (ಸೆ.27) ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:PFI Ban: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ 5 ಕಾರಣಗಳೇನು?
ಕ್ಸಿ ಜಿನ್ ಪಿಂಗ್ ಅವರು ಬಿರುಸಿನ ಸಭೆಗಳನ್ನು ನಡೆಸುತ್ತಿದ್ದು, ಮುಂದಿನ ತಿಂಗಳು ನಡೆಯಲಿರುವ ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಸಭೆಯಲ್ಲಿ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಸ್ ಸಿಒ ಶೃಂಗದಲ್ಲಿ ಪಾಲ್ಗೊಂಡು ಬೀಜಿಂಗ್ ಗೆ ಮರಳಿದ್ದ ಕ್ಸಿ ಜಿನ್ ಪಿಂಗ್ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಕ್ಸಿ ವಿರುದ್ಧ ಸೇನಾ ಕ್ರಾಂತಿ ನಡೆದಿದ್ದು, ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ಊಹಾಪೋಹ ಟ್ವಿಟರ್ ನಲ್ಲಿ ವಿಶ್ವವ್ಯಾಪಿ ಟ್ರೆಂಡ್ ಆಗಿತ್ತು. ಚೀನಾ ಮೂಲದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರು ಬೀಜಿಂಗ್ ಗೆ ಸೇನಾ ವಾಹನಗಳು ತೆರಳುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ಹಾಕಿ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ, ಚೀನಾ ಸೇನೆಯು ಬೀಜಿಂಗ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದೆಯಂತೆ. ಜನರಲ್ ಲಿ ಕ್ವಿಯಾಮಿಂಗ್ ಅವರನ್ನು ಕ್ಸಿ ಜಿನ್ ಪಿಂಗ್ ಅವರ ಉತ್ತರಾಧಿಕಾರಿ ಮಾಡಲಾಗಿದೆಯಂತೆ ಎಂದು ನಾನಾ ರೀತಿಯ ಮಾಹಿತಿ ಹಂಚಿಕೊಳ್ಳಲಾಗಿತ್ತು.