Advertisement

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

02:37 PM Jun 18, 2021 | Team Udayavani |

ಸೌಥಂಪ್ಟನ್: ಐತಿಹಾಸಿಕ ಪಂದ್ಯ.. 144 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ ಮೊತ್ತ ಮೊದಲ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ..  ವಿಶ್ವ ಶ್ರೇಷ್ಠ ಆಟಗಾರರ ಸೆಣಸಾಟ ಎಂದೆಲ್ಲಾ ವಿಶ್ವ ಕ್ರಿಕಟ್ ನ ಕುತೂಹಲ ಕೆರಳಿಸಿರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಇದೀಗ ನಿಗದಿತ ಸಮಯಕ್ಕೆ ಆರಂಭವಾಗುತ್ತಿಲ್ಲ. ಕಾರಣ ವರುಣನ ಕಾಟ!

Advertisement

ಹೌದು.. ಇಂಗ್ಲೆಂಡ್ ನ ಸೌಥಂಪ್ಟನ್ ನಲ್ಲಿ ಮಳೆಯಾಗುತ್ತಿದೆ. ನಿನ್ನೆಯಿಂದಲೂ ಅಲ್ಲಿ ಮಳೆಯಾಗುತ್ತಿದೆ. ಸದ್ಯ ಮಳೆ ಕಡಿಮೆಯಾಗಿದ್ದರೂ ನಿಗದಿತ ಸಮಯದಲ್ಲಿ ಪಂದ್ಯ ಆರಂಭವಾಗುವುದಿಲ್ಲ.

ಇದನ್ನೂ ಓದಿ:ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ

ಈ ಬಗ್ಗೆ ಬಿಸಿಸಿಐ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದೆ. ಮಳೆಯ ಕಾರಣದಿಂದ ಪಂದ್ಯದ ಮೊದಲ ಸೆಶನ್ ನಡೆಯವುದಿಲ್ಲ ಎಂದಿದೆ.

Advertisement

ಭಾರತ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲ್ಯಾಂಡ್ ಸಂಭವನೀಯ ತಂಡ: ಡೆವೊನ್ ಕಾನ್ವೇ, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ.ವಾಟ್ಲಿಂಗ್ (ವಿ.ಕೀ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್ / ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್

Advertisement

Udayavani is now on Telegram. Click here to join our channel and stay updated with the latest news.

Next