Advertisement

WTC: ಸರಣಿಯಲ್ಲಿ 3 ಟೆಸ್ಟ್‌ ಪಂದ್ಯ ಕಡ್ಡಾಯ?

11:12 PM Oct 22, 2024 | Team Udayavani |

ಹೊಸದಿಲ್ಲಿ: ಬಹುತೇಕ ಆಕರ್ಷಣೆ ಕಳೆದು ಕೊಂಡಿರುವ ಟೆಸ್ಟ್‌ ಕ್ರಿಕೆಟ್‌, ಟಿ20 ಅಬ್ಬರದಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಿರುವ ಏಕದಿನ ಕ್ರಿಕೆಟ್‌ಗೆ ಮತ್ತೆ ಜೀವ ತುಂಬಲು ಐಸಿಸಿ ಮುಂದಾಗಿದೆ.

Advertisement

ಮೂಲಗಳ ಪ್ರಕಾರ, 4ನೇ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವಚಾಂಪಿಯನ್‌ಶಿಪ್‌ನಿಂದ ಒಂದು ಟೆಸ್ಟ್‌ ಸರಣಿಯಲ್ಲಿ ಕನಿಷ್ಠ 3 ಟೆಸ್ಟ್‌ ಕಡ್ಡಾಯ, ಹಾಗೆಯೇ ಹೆಚ್ಚೆಚ್ಚು ಹಗಲು-ರಾತ್ರಿ ಟೆಸ್ಟ್‌ ಪಂದ್ಯಗಳಿರಬೇಕು ಎಂದು ಐಸಿಸಿ ಕ್ರಿಕೆಟ್‌ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ.

ಸದ್ಯ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಮಾತ್ರ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡುತ್ತಿವೆ. ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್‌, ಶ್ರೀಲಂಕಾದಂತಹ ದೇಶಗಳು ಬಹುತೇಕ 2 ಪಂದ್ಯಗಳ ಸರಣಿಗೆ ಸೀಮಿತವಾಗಿವೆ. ಈ ದೇಶಗಳು ಟೆಸ್ಟ್‌ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಜನರನ್ನು ಮೈದಾನಕ್ಕೆ ತರಲು ಹಗಲು-ರಾತ್ರಿ ಪಂದ್ಯಗಳನ್ನು ಆಡಿಸಬೇಕೆಂದು ಐಸಿಸಿ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next