Advertisement

ಡಬ್ಲ್ಯುಟಿಎ ಟೆನಿಸ್‌: ಮುಖ್ಯ ಸುತ್ತಿಗೆ ಪ್ರಾಂಜಲಾ

11:07 AM Oct 29, 2018 | |

ಮುಂಬಯಿ: ಭಾರತದ 3ನೇ ಶ್ರೇಯಾಂಕಿತೆ ಪ್ರಾಂಜಲಾ ಯಡ್ಲಪಳ್ಳಿ “ಮುಂಬಯಿ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿ’ಯ ಮುಖ್ಯ ಸುತ್ತಿಗೆ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
“ಕ್ರಿಕೆಟ್‌ ಕ್ಲಬ್‌ ಆಫ್ ಇಂಡಿಯಾ’ ಅಂಗಳದಲ್ಲಿ ನಡೆದ ಮುಂಬಯಿ ಓಪನ್‌ನ 2ನೇ ಹಾಗೂ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪ್ರಾಂಜಲಾ ಜಾರ್ಜಿಯದ ಒಕ್ಸಾನಾ ಕಲಶ್ನಿಕೋವಾ ಅವ ರನ್ನು 6-4, 6-3 ನೇರ ಸೆಟ್‌ಗಳಿದ ಸೋಲಿಸಿದರು. ಪ್ರಾಂಜಲಾ ಡಬ್ಲ್ಯುಟಿಎ ಟೆನಿಸ್‌ ಕೂಟದ ಪ್ರಧಾನ ಸುತ್ತು ಪ್ರವೇಶಿಸಿದ್ದು ಇದೇ ಮೊದಲು.

Advertisement

19 ವರ್ಷದ ಪ್ರಾಂಜಲಾ ಈಗಾಗಲೇ ಮುಖ್ಯ ಸುತ್ತಿಗೆ ಕಾಲಿಟ್ಟಿರುವ ಅಂಕಿತಾ ರೈನಾ (ನೇರ ಪ್ರವೇಶ), ಕರ್ಮನ್‌ ಕೌರ್‌ ಥಾಂಡಿ ಹಾಗೂ ಋತುಜಾ ಭೋಂಸ್ಲೆ  (ವೈಲ್ಡ್‌ ಕಾರ್ಡ್‌ ಪ್ರವೇಶ) ಅವರನ್ನು ಸೇರಿಕೊಂಡಿದ್ದಾರೆ.

ಕಳೆದ ವರ್ಷ ಅನಾ ಬೊಗ್ಡೆನ್ ವಿರುದ್ಧ ಸೋತು ನೇರ ಪ್ರವೇಶ ತಪ್ಪಿಸಿಕೊಂಡ ಪ್ರಾಂಜಲಾ ಈ ಬಾರಿ ಅನಾ ಅವರನ್ನು ಮೊದಲ ಅರ್ಹತಾ ಸುತ್ತಿನಲ್ಲೇ ಸೋಲಿಸಿರುವುದು ವಿಶೇಷ. ಮತ್ತೋರ್ವ ಭಾರತೀಯ ಆಟಗಾರ್ತಿ, ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್‌ ಮಹಕಾ ಜೈನ್‌ ಜಪಾನಿನ ಹಿರೊ ಕೊ ಕುವಟಾ ವಿರುದ್ಧ 6-3, 6-4 ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದರು.

ಮಂಗಳವಾರದಿಂದ ಆರಂಭ
“ಮುಂಬಯಿ ಓಪನ್‌’ ಮುಖ್ಯ ಸುತ್ತು ಸೋಮವಾರದಿಂದ ಆರಂಭ ವಾಗಬೇಕಿತ್ತು. ಆದರೆ ಭಾರತ-ವೆಸ್ಟ್‌ ಇಂಡೀಸ್‌ ನಡುವಿನ 4ನೇ ಏಕದಿನ ಪಂದ್ಯ ಇಲ್ಲೇ ನಡೆಯುವುದರಿಂದ ರ್ಯಾಕೆಟ್‌ ಸಮರ ಮಂಗಳವಾರದಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next