Advertisement

ಕರ್ಮನ್‌ ಕೌರ್‌ಗೆ ಡಬ್ಲ್ಯುಟಿಎ ಪ್ರಶಸ್ತಿ

11:20 PM Jul 24, 2023 | Team Udayavani |

ಇವಾನ್ಸ್‌ವಿಲ್ಲೆ (ಯುಎಸ್‌ಎ): ಭಾರತದ ತೃತೀಯ ಶ್ರೇಯಾಂಕಿತ ಆಟಗಾರ್ತಿ ಕರ್ಮನ್‌ ಕೌರ್‌ ಥಾಂಡಿ 60 ಸಾವಿರ ಡಾಲರ್‌ ಬಹುಮಾದ ಇವಾನ್ಸ್‌ವಿಲ್ಲೆ ಐಟಿಎಫ್ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. ಫೈನಲ್‌ನಲ್ಲಿ ಥಾಂಡಿ 4ನೇ ಶ್ರೇಯಾಂಕದ ಉಕ್ರೇನ್‌ ಎದುರಾಳಿ ಯುಲಿಯಾ ಸ್ಟಾರೊದುಬೆràವಾ ಅವರನ್ನು 7-5, 4-6, 6-1ರಿಂದ ಮಣಿಸಿದರು.

Advertisement

25 ವರ್ಷದ ಕರ್ಮನ್‌ ಕೌರ್‌ ಥಾಂಡಿ ಗೆದ್ದ 4ನೇ ಪ್ರಶಸ್ತಿ ಇದಾಗಿದೆ. ಇದರೊಂದಿಗೆ ಅವರು ರ್‍ಯಾಂಕಿಂಗ್‌ನಲ್ಲಿ 51 ಸ್ಥಾನ ಮೇಲೇರಿ 210ಕ್ಕೆ ತಲುಪಿದರು. ಭಾರತದ ವನಿತಾ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ (200) ಅನಂತರದ ಸ್ಥಾನ ಕೌರ್‌ ಅವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next