ಗೋರಖ್ ಪುರ್:ಉತ್ತರಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗೆ ಜಯ ಸಾಧಿಸಿದ್ದಾನೆ ಎಂದು ಸರ್ಟಿಫಿಕೇಟ್ ನೀಡಿದ್ದ ಹೆಚ್ಚುವರಿ ರಿಟರ್ನಿಂಗ್ ಆಫೀಸರ್(ಎಆರ್ ಒ) ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಶುಕ್ರವಾರ(ಮೇ 07) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಆನೆ ಓಡಿಸಲು ಹೋದ ಸಿಬ್ಬಂದಿಯ ಮೇಲೆ ಆನೆ ದಾಳಿ!
ರಿಟರ್ನಿಂಗ್ ಅಧಿಕಾರಿ ಸುನೀಲ್ ಕುಮಾರ್ ಅವರ ದೂರಿನ ಆಧಾರದ ಮೇಲೆ ಎಆರ್ ಒ ವಿರೇಂದ್ರ ಕುಮಾರ್ ವಿರುದ್ಧ ಮೋಸ, ವಂಚನೆಯ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಚುನಾವಣಾಧಿಕಾರಿ ವಂಚನೆ ಹಿನ್ನೆಲೆಯಲ್ಲಿ ಜಯಗಳಿಸಿದ ಅಭ್ಯರ್ಥಿಯ ಹೆಸರನ್ನು ಘೋಷಿಸಿ ಎಂದು ಆ ಪಿಸಿ ಅಭ್ಯರ್ಥಿಗಳ ಪರ ಬೆಂಬಲಿಗರು ನಯಿ ಬಜಾರ್ ಪೊಲೀಸ್ ಠಾಣೆಯ ಔಟ್ ಪೋಸ್ಟ್ ಗೆ ಬೆಂಕಿಹಚ್ಚಿರುವ ಘಟನೆ ಬುಧವಾರ ರಾತ್ರಿ ನಡೆದಿತ್ತು.
ಪೊಲೀಸ್ ಹೊರ ಚೌಕಿಗೆ ಬೆಂಕಿಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಮಂದಿಯನ್ನು ಬಂಧಿಸಿದ್ದು, ನಾಲ್ಕು ಪ್ರತ್ಯೇಕ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.