Advertisement

ಬಡತನ, ನೋವು ಮರೆಯಲು ಬರವಣಿಗೆ

06:00 AM Apr 23, 2018 | |

ಉಡುಪಿ: ಬಡತನ, ಕಷ್ಟ, ನೋವನ್ನು ಮರೆಯುವುದಕ್ಕಾಗಿ ಬರೆಯಲು ತೊಡಗಿದೆ. ಸಾಹಿತ್ಯ ನನ್ನ ಅಂತರಂಗದ ಪ್ರತಿಬಿಂಬ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು. ಎ. 22ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ| ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ “ರಂಗಭೂಮಿ ಉಡುಪಿ’ ವತಿಯಿಂದ ಜರಗಿದ “ಆನಂದೋತ್ಸವ – 2018’ರಲ್ಲಿ “ತಲ್ಲೂರು ಗಿರಿಜಾ-ಡಾ| ಶಿವರಾಮ ಶೆಟ್ಟಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಶುಭಾಶಂಸನೆಗೈದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌, ಎಲ್ಲವನ್ನೂ ಧನಾತ್ಮಕವಾಗಿ ಸ್ವೀಕರಿಸುವ, ಯೋಚಿಸುವ, ನೋಡಿ ಅನುಭವಿಸುವ, ಸಂಭ್ರಮಿಸುವ ಮನಸ್ಸು ಅಂಬಾತನಯ ಮುದ್ರಾಡಿ ಅವರದು ಎಂದರು.

Advertisement

“ರಂಗಭೂಮಿ’ ಗೌರವಾಧ್ಯಕ್ಷ ಡಾ| ಎಚ್‌. ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಗಿರಿಜಾ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ನಂದಕುಮಾರ್‌ ಉಪಸ್ಥಿತರಿದ್ದರು. ಸಂವಾದದಲ್ಲಿ ಡಾ| ಮಾಧವಿ ಭಂಡಾರಿ, ನಾರಾಯಣ ಹೆಗಡೆ, ಲಕ್ಷ್ಮೀನಾರಾಯಣ ಭಟ್‌, ಕು.ಗೋ. ಪಾಲ್ಗೊಂಡಿದ್ದರು. “ರಂಗಭೂಮಿ’ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಮತ್ತು ನಟಿ ಪೂರ್ಣಿಮಾ ಸುರೇಶ್‌ ನಿರ್ವಹಿಸಿದರು.

ಚೆನ್ನಾಗಿ ಕಲಿಸಬಲ್ಲ ಶಿಕ್ಷಕರ ಕೊರತೆ
ಇಂದು ಹೆಚ್ಚಿನವರಿಗೆ ಕನ್ನಡ ಮಾತು ಬರುತ್ತದೆ, ಭಾಷೆ ಬರುವುದಿಲ್ಲ. ಕನ್ನಡ ಮಾತನಾಡುವವರಲ್ಲಿ ಅಕ್ಷರ ಶಕ್ತಿ, ಪದ ಶಕ್ತಿ, ಧ್ವನಿ ಶಕ್ತಿ ಇಲ್ಲ. ಮಕ್ಕಳಲ್ಲಿ ಕನ್ನಡ ಪ್ರೀತಿ ಉಂಟು ಮಾಡುವ ಕೆಲಸವನ್ನು ಹೆತ್ತವರು ಮತ್ತು ಶಿಕ್ಷಕರು ಎಷ್ಟರ ಮಟ್ಟಿಗೆ ಮಾಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಇಂದು ಕನ್ನಡವನ್ನು ಚೆನ್ನಾಗಿ ಕಲಿಸಬಲ್ಲ ಶಿಕ್ಷಕರ ಕೊರತೆ ಇದೆ ಎಂದು ಸಂವಾದದಲ್ಲಿ ಅಂಬಾತನಯ ಮುದ್ರಾಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next