Advertisement

ಮನೆ ಗೋಡೆ ಮೇಲೆ ಪಾಕ್‌ ಜಿಂದಾಬಾದ್‌ ಬರಹ

11:12 PM Mar 01, 2020 | Lakshmi GovindaRaj |

ಕಲಬುರಗಿ: ಮನೆಯೊಂದರ ಗೋಡೆ ಮೇಲೆ “ಪಾಕಿಸ್ತಾನ ಜಿಂದಾಬಾದ್‌’ ಎಂದು ಬರೆದು ವಿಕೃತಿ ಮೆರೆದ ಘಟನೆ ನಗರದ ಸಾತ್‌ ಗುಂಬಜ್‌ ಬಳಿ ಶನಿವಾರ ರಾತ್ರಿ ನಡೆದಿದ್ದು, ಪೊಲೀಸರು ಕಿಡಿಗೇಡಿಗಳ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿದ್ದಾರೆ.

Advertisement

ಸಾತ್‌ ಗುಂಬಜ್‌ ಸಮೀಪವಿರುವ ಕಿಶನ್‌ರಾವ್‌ ಹಾಗರಗುಂಡಗಿ ಎನ್ನುವರ ಮನೆ ಗೋಡೆ ಮೇಲೆ ಕಿಡಿಗೇಡಿಗಳು, ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬರಹ ಅಳಿಸಿ ಹಾಕಿದ್ದಾರೆ.

ಪಾಕ್‌ ಪರ ಪ್ರೇಮ ಮೆರೆದು ವಿಕೃತ ವೆಸಗಿದ ಆರೋಪಿಗಳು ನಾಪತ್ತೆಯಾಗಿ ದ್ದಾರೆ. ಇದೇ ವೇಳೆ ಕಾರಿಗೂ ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಕಿಶನ್‌ರಾವ್‌ ಮನೆ ಎದುರು ಅಬ್ದುಲ್ಲಾ ಎನ್ನುವವರ ಕಾರು ನಿಲ್ಲಿಸಲಾಗಿತ್ತು.

ಈ ಕಾರಿಗೆ ಬೆಂಕಿ ಹಚ್ಚಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂದು ಗೊತ್ತಾಗಿದೆ. ವಿಕೃತಿ ಮೆರೆದವರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next