Advertisement

ಓದಿನಿಂದ ಬರವಣಿಗೆ ಪ್ರಬುದ್ಧತೆ: ಹುಲಕಲ್‌

11:18 AM Feb 03, 2018 | Team Udayavani |

ಜೇವರ್ಗಿ: ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಬರವಣಿಗೆ ಪ್ರಬುದ್ಧತೆಯಿಂದ ಕೂಡಿರಲು ಸಾಧ್ಯ ಎಂದು
ಕ್ಷೇತ್ರಶಿಕ್ಷಣಾಕಾರಿ ಶಾಂತಪ್ಪ ಹುಲಕಲ್‌ ಹೇಳಿದರು.

Advertisement

ಪಟ್ಟಣದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆವರಣದಲ್ಲಿ ಶುಕ್ರವಾರ ಕಸಾಪ ತಾಲೂಕು ಘಟಕದ ವತಿಯಿಂದ ತಾಲೂಕಿನ ಸೃಜನಶೀಲ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕವಿಗೋಷ್ಠಿ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಥೆ, ಕವನಗಳು ಹುಟ್ಟುತ್ತವೆ. ಬದುಕಿನ
ವಸ್ತುಗಳೇ ಕಥೆ, ಕವನಕ್ಕೆ ಮೂಲವಾಗಿದೆ. 

ಸಾಹಿತ್ಯ ಓದುವುದರಿಂದ ಮನಸ್ಸು ವಿಕಸಿತವಾಗುತ್ತದೆ. ಮನೋಧರ್ಮ ಬದಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಒಲವು ಮೂಡಿಸಬೇಕು. ಕನ್ನಡ ಸಾಹಿತ್ಯದತ್ತ ವೃತ್ತಿಪರರು ಪ್ರೀತಿ ತೋರಿದಾಗ ಸಹಜವಾಗಿ ಕನ್ನಡ ಬೆಳೆಯುತ್ತದೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕಸಾಪ ಉಪಾಧ್ಯಕ್ಷ ಡಾ.ಗಿರೀಶ ರಾಠೊಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಶೆಳ್ಳಗಿಯ ಶಿಕ್ಷಕ ಶರಣು ಸಾಳೇರ, ನಾಗಿದಲಾಯಿ ಶಿಕ್ಷಕ ಮಲ್ಲು ಚನ್ನಮಲ್ಲಗೋಳ ಉಪನ್ಯಾಸ ನೀಡಿದರು. 

ಹಿರಿಯ ಸಾಹಿತಿ ಎಲ್‌.ಬಿ.ಕೆ.ಆಲ್ದಾಳ, ಮುಖಂಡರಾದ ರಮೇಶಬಾಬು ವಕೀಲ, ಪುರಸಭೆ ಸದಸ್ಯ ಮಹಾಂತಯ್ಯ ಹಿರೇಮಠ, ನೀಲಕಂಠ ಅವುಂಟಿ, ಸಂಸ್ಥೆಯ ಆಡಳಿತಾಧಿಕಾರಿ ಡಾ| ಬಸವರಾಜ ಕುಮೂರ, ಕಸಾಪ ಕಾರ್ಯದರ್ಶಿ ನಾನಾಗೌಡ ಕೂಡಿ, ಪ್ರಾಚಾರ್ಯರಾದ ವೆಂಕಟರಾವ್‌ ಮುಜುಮದಾರ, ಅಮೀನಪ್ಪ ಹೊಸಮನಿ, ಜಗದೀಶ ಉಕನಾಳಕರ್‌, ಶ್ರೀಶೈಲ ಖಣದಾಳ, ದವಲತ್ತರಾಯ ಪಾಟೀಲ, ನಾಗನಗೌಡ ಜೈನಾಪುರ, ಲಿಂಗರಾಜ ಹಂಚಿನಾಳ, ಮಂಜುಳಾ ಆಗಮಿಸಿದ್ದರು. ಶಿಕ್ಷಕ ನಿಂಗಣ್ಣ ಬಾಲಪ್ಪಗೋಳ ನಿರೂಪಿಸಿದರು, ಕಸಾಪ ಕಾರ್ಯದರ್ಶಿ ಶಂಬಣ್ಣ ಹೂಗಾರ ಸ್ವಾಗತಿಸಿದರು, ಶಿಕ್ಷಕ ಜಗನ್ನಾಥ ಇಮ್ಮಣ್ಣಿ ವಂದಿಸಿದರು.

Advertisement

ವಿದ್ಯಾರ್ಥಿಗಳು, ಕವಿಗಳು ಸ್ವರಚಿತ ಕವನ ವಾಚನ ಮಾಡಿದರು. ಉಪನ್ಯಾಸಕ ಎಸ್‌. ಸಾಲಿಮಠ, ಶಿಕ್ಷಕರಾದ ಚಂದ್ರಕಾಂತ ಕುಲಕರ್ಣಿ, ಮಹಾಂತೇಶ ಹೂಗಾರ, ಅಶೋಕ ಕೋಳಕೂರ, ಶರಣಯ್ಯ ಹಿರೇಮಠ, ಪರಸಪ್ಪ ತಳವಾರ, ಎಸ್‌.ಬಿ. ಮಮದಾಪುರ, ಕಂಠೆಪ್ಪ ಮಾಸ್ತರ ಹರವಾಳ, ಶಿವಲಿಂಗ ಕಲ್ಲಹಂಗರಗಿ, ಗುಂಡು ವಾರದ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next