Advertisement

ಆಳಂದ ಬರ ತಾಲೂಕು ಘೋಷಣೆಗೆ ಸರ್ಕಾರಕ್ಕೆ ಒತ್ತಾಯ

10:53 AM Oct 06, 2018 | Team Udayavani |

ಆಳಂದ: ಮಳೆ, ಬೆಳೆ ಇಲ್ಲದೆ ಜನ ಜಾನುವಾರ ಸಂಕಷ್ಟದಲ್ಲಿದ್ದರೂ ಸಹಿತ ಬರ ಘೋಷಣೆಯಿಂದ ತಾಲೂಕನ್ನು ಕೈಬಿಟ್ಟಿರುವ ಸರ್ಕಾರದ ಕ್ರಮ ಸರಿಯಲ್ಲ. ಆದ್ದರಿಂದ ಕೂಡಲೇ ಬರ ಘೋಷಣೆ ಕೈಗೊಂಡು ಪರಿಹಾರ
ಒದಗಿಸಬೇಕು ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದರು.

Advertisement

ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ತಾಪಂ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ವರದಿ ಮಂಡಿಸುವಾಗ ಮಧ್ಯ ಪ್ರವೇಶಿಸಿದ ಸದಸ್ಯರು ಬರ ಘೋಷಣೆಗಾಗಿ ಸರ್ಕಾರವನ್ನು ಆಗ್ರಹಿಸಿದರು.

ಜೂನ್‌ನಿಂದ ಆಗಸ್ಟ್‌ ವರೆಗೆ ನಿರೀಕ್ಷಿತ ಮಳೆ ಬಂದ ಅಂಕಿಅಂಶಗಳಿಂದಾಗಿ ತಾಲೂಕು ಬರಘೋಣೆ ಆಗಿಲ್ಲ.
ನಂತರ ಮಳೆ ಕೊರತೆಯಾಗಿ ಬೆಳೆ ಬಾಡುತ್ತಿವೆ. ಕೆಲವು ಕಡೆ ಉತ್ತಮ ಬೆಳೆಯಾಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಹೇಳಿದಾಗ ಸದಸ್ಯರು ಆಕ್ಷೇಪಿಸಿ ಬರ ಘೋಷಣೆ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಆಗ ಮಧ್ಯ ಪ್ರವೇಶಿಸಿದ ಸದಸ್ಯ ದತ್ತಾತ್ರೇಯ ದುರ್ಗದ, ಬಸವರಾಜ ಸಾಣಕ ನಿಂಬರಗಾ, ಮಾದನಹಿಪ್ಪರಗಾ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಬೆಳೆ ಬಾರದೆ ನಷ್ಟವಾಗಿದ್ದು, ಬರ ಕುರಿತು ಸರ್ಕಾರಕ್ಕೆ ನೈಜ ವರದಿ ನೀಡುವಂತೆ ಆಗ್ರಹಿಸಿದರು.

ಅಧಿಕಾರಿ ಶರಣಗೌಡ ಇಲಾಖೆ ವರದಿ ಮಂಡಿಸಿ, ನಾಲ್ಕು ವಿಧಗಳಲ್ಲಿ 541 ಕೃಷಿ ಹೂಂಡ ನಿರ್ಮಾಣಕ್ಕೆ ಅವಕಾಶವಿದ್ದು,
ರೈತರು ಅರ್ಜಿ ಸಲ್ಲಿಸಬೇಕು. ಸ್ಪಿಂಕ್‌ರ್‌ಗೆ ಶೇ. 90 ರಷ್ಟು ಸಹಾಯಧನವಿದೆ ಎಂದು ಮಾಹಿತಿ ಒದಗಿಸಿದರು.
ಯಾವುದೇ ಇಲಾಖೆ ಅಧಿ ಕಾರಿಗಳು ತಮ್ಮ ಇಲಾಖೆಗೆ ಸರ್ಕಾರ ನೀಡಿದ ಯೋಜನೆಗಳ ಅನುಷ್ಠಾನದ ಕುರಿತು
ಪೂರ್ಣವಾಗಿ ಲಿಖೀತ ಮತ್ತು ಸ್ಪಷ್ಟ ವರದಿಯನ್ನು ಸಭೆಗೆ ನೀಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕೊಂಡಾಪುರ ಅಧಿಕಾರಿಗಳಿಗೆ ತಾಕೀತು ನೀಡಿದರು.

Advertisement

ಸಿಡಿಪಿಒ ಶ್ರೀಕಾಂತ ಮೇಂಗಜಿ ಇಲಾಖೆ ವರದಿ ಮಂಡಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಸೌಲಭ್ಯಗಳನ್ನು
ಸಮಪರ್ಕವಾಗಿ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯ ದೀಪಕ ಹೊಡ್ಲ್, ಬಸವರಾಜ ಸಾಣಕ, ಸಿದ್ಧರಾಮ
ವಾಘಮೋರೆ ಸಭೆ ಗಮನಕ್ಕೆ ತಂದರು.

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಮೌಲಾಲಿ ವರದಿ ಮಂಡಿಸುವಾಗ ಉಪಾಧ್ಯಕ್ಷ ಗುರುನಾಥ ಪಾಟೀಲ, ಸದಸ್ಯೆ
ಸುಜಾತಾ ಖೋಬರೆ, ಸಂಗೀತಾ ರಾಠೊಡ ಅವರುಗಳು ಮಾತನಾಡಿ ಅಧಿಕಾರಿಗಳು ಸುಳ್ಳು ದಾಖಲೆ ನೀಡುತ್ತಿದ್ದಾರೆ
ಎಂದು ಹರಿಹಾಯ್ದರು. ಈ ಕುರಿತು ಲಿಖೀತವಾಗಿ ಮಾಹಿತಿ ಒದಗಿಸುವಂತೆ ಇಒ ಅನಿತಾ ಆದೇಶಿಸಿದರು.

ತಾಲೂಕು ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಇಲಾಖೆ ಯೋಜನೆ ಸೌಲಭ್ಯಗಳ ಕುರಿತು ವಿವರಿಸಿದರು. ಕ್ಷೇತ್ರ ಶಿಕ್ಷಣಾ ಧಿಕಾರಿ ದೊಡ್ಡರಂಗಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ತಾಲೂಕು ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದರು. ಈ ವೇಳೆ ರುದ್ರವಾಡಿ ಶಾಲೆಗೆ ಶಿಕ್ಷಕರ ಕೊರತೆಯಿದೆ ಎಂದು ಸದಸ್ಯೆ ಸುಜಾತಾ ಖೋಬರೆ ಶಿಕ್ಷಣಾ ಧಿಕಾರಿ ಗಮನಕ್ಕೆ ತಂದರು.

ವ್ಯವಸ್ಥಾಪಕ ಬಸವರಾಜ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ಸದಸ್ಯ ಶಿವಪ್ಪ ವಾರಿಕ, ಮಹಾದೇವಿ ಘಂಟೆ, ಪಾರ್ವತಿ ಶಿವರಾಜ ಮಹಾಗಾಂವ ಹಾಗೂ ಸದಸ್ಯರು ಹಾಜರಿದ್ದರು. ಡಾ| ಸಂಜಯ ರೆಡ್ಡಿ, ಜಿಪಂ ಅಧಿಕಾರಿಗಳು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next