ಜೇವರ್ಗಿ: ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವ ಜನಾಂಗ ಹೊಂದಿರುವ ದೇಶ ನಮ್ಮದಾಗಿದ್ದು, ಯುವ ಜನಾಂಗ ಪ್ರಕಾಶಿಸಿದರೆ ಮಾತ್ರ ಭಾರತ ಪ್ರಕಾಶಿಸಲು ಸಾಧ್ಯ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಗುವಿವಿ ಕಲಬುರಗಿ ವತಿಯಿಂದ ತಾಲೂಕಿನ ಸೊನ್ನ ಸಿದ್ದಲಿಂಗೇಶ್ವರ ವಿರಕ್ತ ಮಠದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯೆ ಸಾಧಕನ ಸೊತ್ತು, ಹೊರತು ಸೋಮಾರಿ ಸೊತ್ತಲ್ಲ. ದೇಶದ ಯುವಜನಾಂಗದ ಮೇಲೆ ಜವಾಬ್ದಾರಿ ಹೆಚ್ಚಿದೆ.
ವಿದ್ಯಾರ್ಥಿಗಳು ತಮ್ಮ ಸಮಯ ವ್ಯರ್ಥವಾಗಿ ಕಳೆಯದೆ ನಿರಂತರ ಓದಿನಲ್ಲಿ ಕಳೆಯಬೇಕು. ನಿರಂತರ ಓದು, ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು. ದೇಶದ ವಿದ್ಯಾವಂತ ಜನರು ಪ್ರಕಾಶಿಸಿದರೆ ಭಾರತ ಇಡೀ ವಿಶ್ವಕ್ಕೆ ಪ್ರಕಾಶಿಸುತ್ತದೆ. ವಿದ್ಯಾರ್ಥಿಗಳು ಸಮಾಜದ, ಶಿಕ್ಷಕರ ಋಣ ತೀರಿಸಬೇಕಾದರೆ ವಿದ್ಯೆ ಎಂಬ ತಪಸ್ಸಿನಲ್ಲಿ ಪಾಸಾಗಬೇಕಾಗುತ್ತದೆ. ಅಂತಹ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ ಡಾ| ಗಿರೀಶ ರಾಠೊಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ಪ್ರಾಂಶುಪಾಲ ಡಾ| ಪ್ರಭುಶೆಟ್ಟಿ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಶಿವನಗೌಡ ಹಂಗರಗಿ, ಎಸ್.ಎಸ್. ಸಲಗರ, ಕರವೇ ಅಧ್ಯಕ್ಷ ಶಿವಲಿಂಗ ಹಳ್ಳಿ, ಮಹಿಬೂಬ್ ಇನಾಮದಾರ, ವಿಜಯಕುಮಾರ ಬಿರಾದಾರ, ಡಾ| ವಿಷ್ಣುವರ್ಧನ ಮೂಲಿಮನಿ, ಡಾ| ಶರಣಮ್ಮ, ಶಶಿಧರ ಯಡ್ರಾಮಿ, ಡಾ| ವಿನಾಯಕ, ಡಾ| ನಾಗರೆಡ್ಡಿ, ಡಾ| ಗೀತಾರಾಣಿ, ಡಾ| ಕರಿಗೂಳೇಶ್ವರ, ವೀರೇಶ ಕ್ಷತ್ರೀಯ, ವಿನೋದಕುಮಾರ ಆತಿಥಿಗಳಾಗಿ ಆಗಮಿಸಿದ್ದರು. ಡಾ| ಗುರುಪ್ರಕಾಶ ಹೂಗಾರ ಸ್ವಾಗತಿಸಿದರು. ಪ್ರಾಧ್ಯಾಪಕ ಭೀಮಣ್ಣ ನಿರೂಪಿಸಿ ವಂದಿಸಿದರು