Advertisement

ಬರವಣಿಗೆ, ಭಾಷಣದಿಂದ ಸಮಾಜ ತಿದ್ದಲಾಗದು

12:29 PM Sep 24, 2018 | |

ಬೆಂಗಳೂರು: ಬರವಣಿಗೆ ಹಾಗೂ ಭಾಷಣದಿಂದಲೇ ಸಮಾಜ ತಿದ್ದುವುದು ಅಸಾಧ್ಯದ ಮಾತಾಗಿದ್ದು, ಕ್ರಿಯಾಶೀಲ ಆಂದೋಲನಗಳು ಹೆಚ್ಚಿನ ಸಂಖ್ಯೆಯಲ್ಲಾಗಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಡಾ.ಹೆಬ್ಟಾಲೆ ಕೆ.ನಾಗೇಶ್‌ ಅವರ “ಅಗ್ರಹಾರ’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇವಲ ಬರವಣಿಗೆ, ಭಾಷಣದಿಂದ ಸಮಾಜ ತಿದ್ದಲು ಹೊರಟಿದ್ದೇವೆ. ಆದರೆ, ನಾವಿರುವುದು ವಿಷಮ ಸಮಾಜವಾಗಿದ್ದು, ಇಂತಹ ವಿಷಮತೆ ಹೋಗಲಾಡಿಸಲು ಆಂದೋಲನಗಳು ಅಗತ್ಯವಿದೆ. ಹೀಗಾಗಿ, ಸಮಾಜಮುಖೀ ಆಂದೋಲಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.

ಇಂದು ಗೊಂದಲಮಯ ಸಮಾಜದಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ಅûಾಂಶ, ರೇಖಾಂಶಗಳ ರೀತಿ ಸಮಾಜದಲ್ಲೂ ಗೆರೆ ಹಾಕಿಕೊಂಡು ಬದುಕು ನಡೆಸುತ್ತಿದ್ದೇವೆ. ಇವುಗಳಿಂದ ಮೊದಲು ಹೊರಬಂದು ಸಮಾಜಮುಖೀ ಜೀವನ ನಡೆಸಬೇಕು.

ಇನ್ನು ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ದೊಡ್ಡಮಟ್ಟದ ಬರಹಗಳನ್ನು ಓದು ತಾಳ್ಮೆ ಕಠಿಣ ಶಬ್ದಗಳು ಅರ್ಥವಾಗಿಸಿಕೊಳ್ಳು ಜಾಣ್ಮೆ ಮರೆಯಾಗುತ್ತಿದೆ. ಹಾಗಾಗಿ, ಲೇಖಕರೂ ಸಹ ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ಶಬ್ದಗಳನ್ನು ಬಳಸಿ ಕೃತಿಗಳನ್ನು ರಚಿಸಬೇಕು ಎಂದು ತಿಳಿಸಿದರು.

ಚಿಂತಕಿ ಡಾ.ಎನ್‌. ಗಾಯತ್ರಿ ಮಾತನಾಡಿ, ಈ ಕಾದಂಬರಿ ಹಲವಾರು ಅಗ್ರಹಾರ ಕಥೆ ಹೇಳುತ್ತದೆ. ಪಾರಂಪರಿಕ ತಂತ್ರಜ್ಞಾನವನ್ನು ಮೀರಿ ಹಲವಾರು ಕೌಶಲ್ಯವನ್ನು ಸಾರಿದೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಾಂಕೇತಿಕ ಅರ್ಥದಲ್ಲಿ ತತ್ವವನ್ನು ವಿವರಿಸುತ್ತ ಹೋಗುತ್ತೆ. ಪತ್ರಗಳ ಭಾಷೆಯ ಮೂಲಕ ಹಳ್ಳಿಯ ವೈಚಾರಿಕತೆಯನ್ನು ಮೂಡಿಸಿದ್ದಾರೆ.

Advertisement

ತಳ ಸಮುದಾಯದವರು ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದು, ಅವರಿಗೆ ಉನ್ನತ ಶಿಕ್ಷಣ ಬೇಕು ಎನ್ನುವುದನ್ನು ಹೇಳುತ್ತದೆ. ಒಟ್ಟಾರೆ ಕಲಿಕೆ, ಓದು ಎನ್ನುವುದು ಕೇವಲ ಮೇಲ್ಜಾತಿಯವರ ಸ್ವತ್ತಲ್ಲ ಎಂಬುದನ್ನು ಹೆಬ್ಟಾಲೆ ಕೆ ನಾಗೇಶ್‌ ಅವರು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಇಂದಿಗೂ ಕೆಳಜಾತಿ ಮೇಲ್ಜಾತಿ ಎಂಬ ಜಾತಿ ವ್ಯವಸ್ಥೆ ಜೀವಂತವಾಗಿದೆ. ಜಾತಿಗಾಗಿ ಜೀವವನ್ನೇ ತೆಗೆಯುತ್ತಿದ್ದಾರೆ. ಇಂತಹ ಮರ್ಯಾದೆಗೇಡು ಹತ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹೆಬ್ಟಾಲೆ ನಾಗೇಶ್‌ ಅವರು ತಮ್ಮ ಕಾದಂಬರಿಯಲ್ಲಿ ದಲಿತರ ನೋವನ್ನು ಅಭಿವ್ಯಕ್ತಿಸಿದ್ದಾರೆ.

ಶೋಷಿತ ಸಮುದಾಯವನ್ನು ಗುರುತಿಸಿ, ಅವರ ನೋವು ನಲಿವನ್ನು ಚಿತ್ರಿಸಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳು ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳಿಗೆ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಗ್ರಂಥಾಲಯದಲ್ಲಿ ಪುಸ್ತಕ ಓದಿದರೆ ಸಮಾಜ ಅಭಿವೃದ್ಧಿಯಾಗುತ್ತದೆ ಎಂಬು ಅಂಶವನ್ನು ಅತ್ಯುತ್ತಮವಾಗಿ ಬಿಂಬಿಸಿದ್ದಾರೆ ಎಂದರು. ಲೇಖಕ ಡಾ. ಹೆಬ್ಟಾಲೆ ಕೆ ನಾಗೇಶ್‌, ಡಾ. ಸಿದ್ದರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next