Advertisement

ಕನ್ನಡಿಗರ ಚಿತ್‌ –ಆನಂದ ಮೂರ್ತಿ

10:08 AM Jan 20, 2020 | mahesh |

ಚಿಮೂ ಎಂದೇ ಖ್ಯಾತರಾಗಿದ್ದ ಎಂ. ಚಿದಾನಂದ ಮೂರ್ತಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರ ಪ್ರಕಾರ ಸಂಶೋಧನೆ ಎಂದರೆ ಸತ್ಯಶೋಧನೆ! ತಮ್ಮ ನಿಲುವನ್ನು ಪ್ರಕಟಿಸುವಲ್ಲಿ ನಿಷ್ಠುರರಾಗಿದ್ದುದರಿಂದ ಕೆಲವರ ವಿರೋಧವನ್ನು ಕಟ್ಟಿಕೊಂಡದ್ದಿದೆ. ಎಲ್ಲರಿಗೂ ಪ್ರಿಯರಾಗಿ ಪ್ರಸಿದ್ಧರಾಗಬೇಕೆನ್ನುವ “ಜಾಣತನ’ದ ಧೋರಣೆ ಅವರದಾಗಿರಲಿಲ್ಲ. ಅವರ ನಿರ್ಗಮನದಿಂದಾಗಿ ಕನ್ನಡ ಪಂಡಿತರ ಅಗ್ರಪಂಕ್ತಿಯ ಸ್ಥಾನವೊಂದು ತೆರವಾದಂತಾಯಿತು.

Advertisement

ಚಿಮೂ ಕನ್ನಡಿಗರ ನಾಲಗೆಯ ಮೇಲೆ ನಲಿದಾಡುವ ಅಕ್ಕರೆಯ ಎರಡಕ್ಕರ ಕಣಾ !
ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕು ಹಿರೇಕೋಗಲೂರು ಗ್ರಾಮದಲ್ಲಿ (ಮೇ 11, 1931) ಹುಟ್ಟಿ ಕನ್ನಡಿಗರ ಅಚ್ಚುಮೆಚ್ಚಿನ ಸಾಹಿತಿಯಾದುದು ರೋಚಕ ಸಂಕಥನ. ಮೈಸೂರು ಮಹಾರಾಜ ಕಾಲೇಜಿನ ಶಿಸ್ತು ಮತ್ತು ಶ್ರದ್ಧೆಯ ವಿದ್ಯಾರ್ಥಿಯಾಗಿ ಅರಿವಿನ ಆರಾಧಕರಾಗಿ, ಜ್ಞಾನಪಿಪಾಸುವಾಗಿ ಸಡಹುಡನೆ ತರಗತಿಗೂ ಗ್ರಂಥಾಲಯಕ್ಕೂ ಎಡತಾಕುತ್ತ, ಅಂದಂದಿನ ಓದನ್ನು ಮೆಲಕು ಹಾಕುತ್ತ ಹುರುಪಿನಿಂದ ಹೇಗೆ ಎಂ. ಚಿದಾನಂದಮೂರ್ತಿ (ಚಿಮೂ) ಚಿಮ್ಮುತ್ತಿದ್ದರೆಂಬುದನ್ನು ಅವರ “ಒಡನೋದಿ’ಗಳ ಬಾಯಿಂದ ಕೇಳಿದರೆ ಪುಳಕ ಆಗುತ್ತದೆ.

1953-1955ರ ಅವಧಿಯಲ್ಲಿ ನಾನು ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಲ್ಲಿ ಇಂಟರ್‌ಮೀಡಿಯೇಟ್‌ ತರಗತಿಯ ವಿದ್ಯಾರ್ಥಿಯಾಗಿ¨ªೆ. ಆಗ ಸಿ. ಆರ್‌. ಕಮಲಮ್ಮ (ಈಗ ನನ್ನ ಮಡದಿಯಾಗಿರುವ ಕಮಲಾ ಹಂಪನಾ) ಕೂಡ ಅದೇ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದರು. ಆಗ ಪ್ರೊ. ಸಿ. ಮಹಾದೇವಪ್ಪನವರು ಮತ್ತು ಶೇಷಗಿರಿರಾವ್‌ ಕನ್ನಡ ವಿಭಾಗದ ಅಧ್ಯಾಪಕರಾಗಿದ್ದರು. ಶೇಷಗಿರಿರಾಯರು ನಿವೃತ್ತರಾದರು. ಅವರ ಜಾಗಕ್ಕೆ 1954ರಲ್ಲಿ ಚಿದಾನಂದಮೂರ್ತಿಯವರು ಬಂದರು. ಅವರು ಆಗತಾನೆ ಬಿಎ (ಆನರ್ಸ್‌) ಪದವಿ ಗಳಿಸಿದ್ದರು. ತಕ್ಷಣ ಕೆಲಸ ಸಿಕ್ಕಿದ್ದರಿಂದ, ಎಂಎ ತರಗತಿಗೆ ಸೇರಿ ಓದನ್ನು ಮುಂದುವರಿಸದೆ, ತುಮಕೂರು ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ಬಂದರು. ಉತ್ಸಾಹ-ಉಲ್ಲಾಸದಿಂದ ಪಾಠ ಮಾಡಿದರು. ವಿದ್ಯಾರ್ಥಿಗಳ ಪ್ರೀತಿಯನ್ನು ಸೂರೆಗೊಂಡರು. ಆದರೆ, ಮೂರೇ ತಿಂಗಳಲ್ಲಿ ಅವರಿಗೆ ಕೋಲಾರಕ್ಕೆ ವರ್ಗವಾಯಿತು. ವಿದ್ಯಾರ್ಥಿಗಳಿಗೆ ನಿರಾಶೆಯಾಯಿತು. ಅವರ ಜಾಗಕ್ಕೆ ತುಮಕೂರಿ ನವರೇ ಆದ ದೊಡ್ಡವೀರಯ್ಯನವರು ಅಧ್ಯಾಪಕರಾಗಿ ಬಂದರು. ವರ್ಷಗಳು ಉರುಳಿದುವು. ನಾನೂ ಎಂಎ ಮುಗಿಸಿ ಕನ್ನಡ ಅಧ್ಯಾಪಕನಾದೆ. ಮೈಸೂರು-ಮಂಡ್ಯ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕನಾಗಿ¨ªೆ. ಮಂಡ್ಯ ಕಾಲೇಜಿನಿಂದ ನನಗೆ ದಾವಣಗೆರೆ ಧ.ರಾ.ಮ. ಕಾಲೇಜಿಗೆ ವರ್ಗವಾಯಿತು. ಅಲ್ಲಿ 1962ರಲ್ಲಿ ನನ್ನ ವಿದ್ಯಾರ್ಥಿನಿಯರಲ್ಲಿ ಒಬ್ಬರಾಗಿದ್ದ ವಿಶಾಲಾಕ್ಷಿಯವರು ತಮ್ಮ ಓದು ಮುಗಿದ ಮೇಲೆ ನನ್ನ ಗುರುಗಳಾಗಿದ್ದ ಚಿದಾನಂದಮೂರ್ತಿಯವರ ಸೌಭಾಗ್ಯವತಿಯಾದರು. ಕಾಲಾಂತರದಲ್ಲಿ ಚಿಮೂರವರು ಮೈಸೂರು ವಿಶ್ವವಿದ್ಯಾಲಯ ತೊರೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅದೇ ಅವಧಿಯಲ್ಲಿ ನಾನೂ ಸಹ ಅವರ ಸಹೋದ್ಯೋಗಿ ಆಗಿದ್ದೆನೆಂಬ ಸವಿನೆನಪು ಹಚ್ಚಹಸಿರಾಗಿದೆ.

ಅವಿಚ್ಛಿನ್ನವಾದ ಕನ್ನಡ ಪ್ರೀತಿ
ಚಿಮೂರವರು ಬಹುಮುಖೀ ಸಾಮರ್ಥ್ಯ ಸಂಪನ್ನರು. ಅವರ ಆಸಕ್ತಿಯ ಹಾಗೂ ಬರಹದ ಹರಹು ದೊಡ್ಡದು. ಸಂಶೋಧನೆ, ಭಾಷಾವಿಜ್ಞಾನ, ಜಾನಪದ, ಶಬ್ದಾರ್ಥ ಜಿಜ್ಞಾಸೆ, ಪಾಠಪರಿಷ್ಕರಣ, ಕ್ಷೇತ್ರಕಾರ್ಯ, ಸಂಸ್ಕೃತಿ ಅಧ್ಯಯನ, ಸಮಾಜವಿಜ್ಞಾನ, ಛಂದಸ್ಸು, ಸ್ಥಳನಾಮ ಅಧ್ಯಯನ, ವಿದೇಶ-ಸ್ವದೇಶ ಪರ್ಯಟನ, ನಾಡುನುಡಿ ಮತ್ತು ಜನಪರ ಹೋರಾಟ ಮೊದಲಾದ ಹತ್ತಾರು ಕ್ಷೇತ್ರಗಳಲ್ಲಿ ಮೌಲಿಕ ಬರವಣಿಗೆ ಮಾಡಿ¨ªಾರೆ. ಚಿಮೂರವರ ಬುದ್ಧಿ-ಭಾವಗಳು ಒಪ್ಪಿಕೊಂಡ, ಅಂತರಂಗ ಅಪ್ಪಿಕೊಂಡ ಹಾಗೂ ಪರಿಪ್ರೇಕ್ಷ್ಯದಲ್ಲಿ ಆವರ್ತಿಸುವ ಪ್ರಧಾನ ವಿಷಯಗಳೆಂದರೆ ಕನ್ನಡ, ಕರ್ನಾಟಕ, ನಾಡು-ನುಡಿ-ಗಡಿ, ನೆಲ-ಜಲ ಮತ್ತು ಹಿಂದುತ್ವ. ಅವರ ನಾಡಿ ಮಿಡಿದರೆ ಇವು ಪಿಸುಗುಟ್ಟುತ್ತವೆ, ಭಾಷಣದಲ್ಲಿ ಅನುರಣಿಸುತ್ತವೆ ಮತ್ತು ಬರವಣಿಗೆಯಲ್ಲಿ ಆವರ್ತಿಸುತ್ತವೆ.

ಹೊಸತನ್ನು ಹುಡುಕುವ ತಹತಹ ಚಿಮೂರವರ ನರನಾಡಿಗಳಲ್ಲಿ ಮಿಡಿಯುತ್ತಿರುತ್ತದೆ. ಆಪಾತತಃ ಅವರು ಮೊದಲ ದರ್ಜೆಯ ಮೂರ್ಧನ್ಯ ಸಂಶೋಧಕರು. ಸಂಶೋಧನೆ ಅವರ ಮೊದಲ ಆಯ್ಕೆಯಾದರೂ ಅದಕ್ಕೆ ಸಮದಂಡಿಯಾದ ಆದ್ಯತೆಯನ್ನು ಇನ್ನೂ ಕೆಲವು ಪೂರಕ ವಲಯಗಳಿಗೆ ಇತ್ತಿದ್ದಾರೆಂಬುದನ್ನು

Advertisement

ಮರೆಯಲಾಗದು. ಅವರ ಸಂಶೋಧನೆಯ ನೆಲೆ-ಬೆಲೆಗಳನ್ನು ಸರಿಯಾಗಿ ಅರಿಯಲು ಅದರ ತಾತ್ವಿಕ ತಳಹದಿಯೇನು ಎಂಬುದನ್ನು ಮೊದಲು ಮನಗಾಣಬೇಕು. ಚಿಮೂರವರು ಅನುಸರಿಸಿದ ವಿಧಾನ ವಿಶಿಷ್ಟತೆಗಳನ್ನು ವಿಶ್ಲೇಷಣಾತ್ಮಕ, ವ್ಯಾಖ್ಯಾನಾತ್ಮಕ, ತುಲನಾತ್ಮಕ ಮತ್ತು ಸಮಾಜಮುಖೀ ಅಧ್ಯಯನಗಳೆಂಬ ಉಪಶೀರ್ಷಿಕೆಗಳಡಿ ಸಂಚಯಿಸಿ ವಿವೇಚಿಸಬೇಕಾಗುತ್ತದೆ. ಚಿಮೂರವರ ಅಧ್ಯಯನದ ಆಳನಿರಾಳ ಹರಹುಗಳ ಜತೆಜತೆಗೇ ಅವರ ಜೀವನ ಜಾತಕ, ಪ್ರಮುಖ ತೇದಿಗಳು, ಪಡೆದ ಸನ್ಮಾನ ಪ್ರಶಸ್ತಿಗಳು, ರಚಿಸಿದ ಕೃತಿಗಳು, ಆಂಗ್ಲ ಲೇಖನಗಳು, ಅವರನ್ನು ಕುರಿತು ಬರೆದ ಮತ್ತು ಅವರಿಗೆ ಅರ್ಪಿಸಿದ ಗ್ರಂಥಗಳನ್ನು ಮರೆಯುವಂತಿಲ್ಲ.

ಬಡವಾಗುತ್ತಿರುವ ಸಂಶೋಧನ ಕ್ಷೇತ್ರ
ವಿದ್ವತ್ತು ಇಂದು ಒಣಗಿ ಹೋಗುತ್ತಿದೆ, ಸಂಶೋಧಕರು ವಿರಳವಾಗುತ್ತಿದ್ದಾರೆ. ಪ್ರಾಚೀನ ಸಾಹಿತ್ಯದ ಓದು, ಬೋಧನೆ ವಿರಳವಾಗುತ್ತಿರುವಾಗ ಇನ್ನು ಹಳಗನ್ನಡ, ನಡುಗನ್ನಡ ಸಾಹಿತ್ಯಕೃತಿಗಳಲ್ಲಿನ ಪಾಠಪರಿಷ್ಕರಣಕ್ಕೆ ತೊಡಗುವವರಾರು! ಅದು ಇಂದು ಬಹುವಾಗಿ ಅಪರೂಪವಾಗುತ್ತಿರುವ ವಿದ್ವತ್ಕಾರ್ಯ. ಕವಿಪಾಠವನ್ನು ಅನುಸಂಧಾನಿಸುವ ಹಾದಿ ಕಸರತ್ತಿನದು. ಪ್ರಾಚೀನ ಕಾವ್ಯಗಳ ಕೆಲವು ಪದ್ಯಗಳ ಸರಿಯಾದ ಶಬ್ದಗಳನ್ನು , ಶುದ್ಧಪಾಠವನ್ನು ಗುರುತಿಸುವ ಬಗೆ ಕರಗತವಾಗಬೇಕಾದರೆ ಅಗಾಧ ಓದಿನಿಂದ, ಸತತಾಭ್ಯಾಸದಿಂದ ಬಂದ ಬುದ್ಧಿಭಾವ ಹದಗೊಂಡು ನೆನಪಿನ ಉಗ್ರಾಣದಲ್ಲಿ ನಿಕ್ಷಿಪ್ತವಾಗಿರಬೇಕು. ನೆನೆದೊಡನೆ ಪುಟಿದೆದ್ದು ಬರುವ ನಿಶಿತಮತಿಯೂ ನೆನಪಿನ ಬಲವೂ ಇರಬೇಕು. ಶಬ್ದದ ಜಾತಕ ಗೊತ್ತಿರಬೇಕು. ಲಭ್ಯವಿರುವ ವಿಭಿನ್ನ ಪಾಠಗಳಲ್ಲಿ ಕವಿಪಾಠಕ್ಕೆ ಹತ್ತಿರವಾಗಿರಬಹುದಾದ ಪಾಠ ಯಾವುದಾಗಿದ್ದಿರಬಹುದು ಎಂದು ಒಂದು ಸರಿಯಾಗಿರಬಹುದಾದ ತೀರ್ಮಾನಕ್ಕೆ ಬರುವ ಮೊದಲು ನಾನಾ ಸಾಧ್ಯತೆಗಳನ್ನು ಪರಾಮರ್ಶಿಸಬೇಕು.ಚಿದುರವರು ಪೂರಕ ಸಾಮಗ್ರಿಯನ್ನು ಸಂಚಯಿಸಿ, ಔಚಿತ್ಯವನ್ನು ಪರಿಭಾವಿಸಿ,ಶಬ್ದದ ಜಾತಕವನ್ನು ಬಿಡಿಸಿ ನೋಡಿ. ಸೂಕ್ತ ದೃಷ್ಟಾಂತಗಳನ್ನಿತ್ತು ಪ್ರಭಾಶಾಲಿಯಾಗಿ ಮನಗಾಣಿಸಿದ್ದಾರೆ. ಜತೆಗೆ ಸಂಶೋಧನೆಯ ಐತಿಹಾಸಿಕ ಹಂತ ಹಾಗೂ ಸಂಭವಿಸಿದ ಧನಾತ್ಮಕ ಪಲ್ಲಟಗಳನ್ನೂ ಕಿರಿದರಲ್ಲಿ ಅಡಕಗೊಳಿಸಿದ್ದಾರೆ. ಈ ಎಲ್ಲ ಗುಣಗಳ ಗಣಿಯಾಗಿದ್ದು ಶುದ್ಧಪಾಠ ನಿಷ್ಕರ್ಷೆಯಲ್ಲಿ ಅವರು ನೀಡಿರುವ ಕೊಡುಗೆಯ ಆಯಾಮವನ್ನು ಪೃಥಕ್ಕರಿಸಬೇಕು. ಇಂದಿನ ಸಾಹಿತ್ಯ ವಲಯ ಚಿಮೂರವರ ಈ ದಿಕ್ಕಿನ ಕೊಡುಗೆಯನ್ನು ಗುರುತಿಸಬೇಕಾದ ಅಗತ್ಯವಿದೆ. ಅವರು ತಳೆದ ನಿಲುವುಗಳು ಎಲ್ಲವೂ ಭಿನ್ನಾಭಿಪ್ರಾಯವೇ ಇಲ್ಲದೆ ಸರ್ವಸಮ್ಮತವಾಗಿದ್ದುವೆಂದು ನಾನಿಲ್ಲಿ ಸಾರುತ್ತಿಲ್ಲ. ವೀರಶೈವ, ಲಿಂಗಾಯಿತ, ಶರಣಸಾಹಿತ್ಯ, ಹಿಂದೂಧರ್ಮ, ಮತಾಂತರ ಮತ್ತು ಟಿಪ್ಪೂಸುಲ್ತಾನರ ಸಂಬಂಧದ ಅವರ ಧೋರಣೆಗೆ ತೀವ್ರ ವಿರೋಧಗಳಿವೆ. ಅವರು ತಳೆದ ನಿಲುವುಗಳು ಪ್ರಶ್ನಾತೀತವಲ್ಲ. ಭಿನ್ನಾಭಿಪ್ರಾಯ ಇದೆಯೆಂದು ಅವರು ರಾಜಿಯಾಗದೆ ತಮ್ಮ ವಿಚಾರಸರಣಿಗೇ ಆತುಕೊಂಡವರು. ತಮ್ಮ ಬದ್ಧತೆಯಿಂದ ಅವಿಚಲಿತರು. ಜನಪ್ರಿಯ ಚಳವಳಿಗಳಲ್ಲಿ , ಹಿಂದೂ ವಾದದ ವಕ್ತಾರತೆಯಲ್ಲಿ ಅವರಲ್ಲಿ ಹಿಂದೆ ಇದ್ದ ಓದುಬರೆಹ ಕೊಚ್ಚಿಹೋಯಿತೆಂಬ ಅರಿವಿನೋಜರ ಆಲಾಪದಲ್ಲಿ ಹುರುಳಿಲ್ಲವೆಂದು ತಮ್ಮ ತೀರ್ಮಾನವನ್ನು ಸಬಲವಾಗಿಯೇ ಸಮರ್ಥಿಸಿಕೊಂಡರು. ದಿಟ, ಚಿಮೂ ಭಾವುಕರು. ಭಾವಾವೇಶ, ಭಾವಪರವಶತೆ ಅವರ ಸ್ವಭಾವ. ಆದರೆ, ಭಾವುಕತೆ ಅವರ ವಿವೇಕವನ್ನು ಮ್ಲಾನಗೊಳಿಸಲಿಲ್ಲ.

ವೈಜ್ಞಾನಿಕ ಮನೋಭಾವದ ಪ್ರತಿಪಾದಕ
ಮೌಡ್ಯದ ಜಾಡ್ಯವನ್ನು ಝಾಡಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕುವೆಂಪು, ಎಚ್ಚೆನ್‌ ಪ್ರತಿಪಾದಿಸುತ್ತಿದ್ದರು. ಚಿಮೂರವರೂ ಆ ದಿಕ್ಕಿನ ದಾರಿಯಲ್ಲಿ ಪಯಣಿಸಿದವರು. ಕೆಲವು ವರ್ಷಗಳ ಹಿಂದೆ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತು. ಆಗ ವಿದ್ಯಾವಂತರಾದಿಯಾಗಿ ಬಹಳ ಜನರು ಮನೆಯಿಂದ ಹೊರಗೆ ಬರಲಿಲ್ಲ. ಆದರೆ, ಚಿಮೂ ಬೆಂಗಳೂರೆಂಬ ಮಹಾ ಕಲ್ಯಾಣನಗರದ ಹಾದಿಬೀದಿಗಳಲ್ಲಿ ರಾಜಾರೋಷವಾಗಿ ಅಡ್ಡಾಡಿ ಜನರ ಸ್ವಭಾವ, ಪ್ರತಿಕ್ರಿಯೆ ಮೊದಲಾದವನ್ನು ಸಂಗ್ರಹಿಸಿ ಪೂರ್ಣ ಸೂರ್ಯಗ್ರಹಣ (1982) ಗ್ರಂಥದಲ್ಲಿ ಸವಿವರವಾಗಿ ನಿರೂಪಿಸಿದ್ದಾರೆ. ವೈಯಕ್ತಿಕ ಸ್ನೇಹ ಗೌರವಾದರಗಳು ವೈಚಾರಿಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಇಲ್ಲವೇ ಮುಚ್ಚಿಹಾಕುವ ಪ್ರವೃತ್ತಿಗೆ ಚಿಮೂ ಮಣಿಯುತ್ತಿರಲಿಲ್ಲ. ಇದಕ್ಕೆ ಒಂದು ಸಮುಚಿತ ದೃಷ್ಟಾಂತವನ್ನು ಉಲ್ಲೇಖೀಸುತ್ತೇನೆ.

ಎಲ್‌. ಬಸವರಾಜುರವರು ಹಿರಿಯರು ಮತ್ತು ಚಿಮೂರವರಿಗೆ ಆತ್ಮೀಯರು. ಸರ್ವಜ್ಞ ಕನ್ನಡ ನಾಡು ಮತ್ತು ಸಾಹಿತ್ಯ ಕಂಡ ಅಪ್ರತಿಮ ಕವಿ. ಆತನ ತ್ರಿಪದಿಗಳ ಅಂಕಿತ ಸರ್ವಜ್ಞ. ಆದರೆ, ಎಲ್‌. ಬಸವರಾಜುರವರು ತಮಗೆ ದೊರೆತ 1636ರಲ್ಲಿ ಬರೆಯಲಾದ ವೆಂಕ ಎನ್ನುವವರ ಒಂದು ತಾಳೆಗರಿ ಹಸ್ತಪ್ರತಿಯಲ್ಲಿ ಸರ್ವಜ್ಞ ಎಂದಿರದೆ ಅದರ ಬದಲಾಗಿ ಪರಮಾರ್ಥ ಎಂಬ ಅಂಕಿತ ಇರುವುದನ್ನು ಕಂಡು ವಿದ್ವದೋನ್ಮಾದಗೊಂಡರು. ಇಂಥದ್ದೊಂದು ಅಪೂರ್ವ ಓಲೆಗರಿ “ಕನ್ನಡ ನಾಡಿನ ಪುಣ್ಯ’ವೆಂದೂ ಇದೊಂದು “ಅದ್ಭುತ ರೆಫ್ರಿಜರೇಟರ್‌’ಎಂದೂ ರೋಮಾಂಚಿತರಾದರು. ಪರಮಾರ್ಥ ಅಂಕಿತವೇ ಸರಿಯಾದುದು ಎಂದು ಫ‌ರ್ಮಾನು ಹೊರಡಿಸಿದರು. ಬಸವರಾಜುರವರ ಬರವಣಿಗೆಯ ಈ ವೀರಮಾಹೇಶ್ವರ ಗತ್ತಿಗೆ ಸಮಕಾಲೀನ ಅರಿವಿನೋಜರು ತಬ್ಬಿಬ್ಟಾದರು.

ಅಪ್ಪಾಜೀ – ಪುಟ್ಟ ನೆನಪಿನ ಅಂಗಳದಿಂದ ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತಿದ್ದ ಅಪ್ಪಾಜಿಗೆ ತುಂಬಾ ನೆಚ್ಚಿನ ಸಂಗತಿ ಎಂದರೆ ಸತ್ಯ. ಅವರು ಅದನ್ನು ನೇರವಾಗಿ ಹಾಗೂ ದಿಟ್ಟವಾಗಿ, ಆಧಾರಸಹಿತ ಹೇಳುವ ಸ್ವಭಾವದವರು. ಇದೇ ಅವರ ಧೈರ್ಯಕ್ಕೆ ಇದ್ದ ಬೆನ್ನೆಲುಬು. ಬದುಕಿನುದ್ದಕ್ಕೂ ಸತ್ಯದ ಹಾದಿಯನ್ನೇ ಸವೆಸಿದ ಅವರ ಈ ಗುಣ ನಮಗೆ ಎಂದೆಂದೂ ದಾರಿದೀಪವಾಗಲಿದೆ.

ಬಾಲ್ಯದಲ್ಲಿ ಟಿವಿ, ಮೊಬೈಲ್‌ ಇಲ್ಲದೆ ಇದ್ದುದರಿಂದ ಅಪ್ಪಾಜಿಯವರ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯುವುದು ಸಾಧ್ಯವಾಗುತ್ತಿತ್ತು. ನಾನು ಸ್ನೇಹಿತರ ಜೊತೆ ಆಟವಾಡುತ್ತಿರುವಾಗ ಅವರು ಅಲ್ಲಿಗೆ ಬಂದು ನಮ್ಮೊಡನೆ ಯಾವುದೇ ಸಂಕೋಚವಿಲ್ಲದೆ ಆಡುತ್ತಿದ್ದ ರೀತಿ ಪಕ್ಕದ ಮನೆಯವರೂ ನಾಚುವಂತಿತ್ತು. ಪ್ರವಾಸ ಹೋಗುವ ಟ್ರೆಂಡ್‌ ಇಲ್ಲದ ಆ ಸಮಯದಲ್ಲಿ, ಅವರು ತಮ್ಮ ಸಂಶೋಧನಾ ಪ್ರವಾಸಗಳಿಗೂ ಅಕ್ಕ ಶೋಭಾ ಮತ್ತು ನನ್ನನ್ನು ಕರೆದುಕೊಂಡು ಹೋಗಿ ಅವರ ಸಂಶೋಧನಾ ಪ್ರಕ್ರಿಯೆಗಳನ್ನು ಪರಿಚಯಿಸುತ್ತಿದ್ದ ರೀತಿ, ಇವತ್ತು ನಮಗೆ ಒಂದು ದೊಡ್ಡ ಪಾಠ. ರಜೆ ಬಂತೆಂದರೆ ಯಾವುದಾದರೂ ಹಳ್ಳಿಗೆ ಬೆಳಗ್ಗೆ ಹೋಗಿ, ಯಾರದೋ ಜಮೀನಿನಲ್ಲಿ ಆಡಿ, ಜೋಕಾಲಿ ತೂಗಿ, ಅಲ್ಲೇ ಊಟ ಮಾಡಿ, ಪಕ್ಕದಲ್ಲಿನ ತೊರೆಯಲ್ಲಿ ಈಜಿ ಸಂಜೆಗೆ ವಾಪಸು ಬರುವುದು ಅವರ ಪ್ರಕೃತಿ ಪ್ರೇಮದ ಸಂಕೇತ ಮತ್ತು ನಮಗೆ ಪ್ರಕೃತಿ ಬಗ್ಗೆ ಕಾಳಜಿ ಬರಲು ಕಾರಣವಾಯಿತು. ಒಮ್ಮೆ ರಜಕ್ಕಾಗಿ ನಮ್ಮ ಹಳ್ಳಿಗೆ ಹೋದ ಸಮಯದಲ್ಲಿ, ರಾತ್ರಿ ಟ್ರ್ಯಾಕ್ಟರ್‌ನ ಟ್ರೇಲರ್‌ ಮೇಲೆ ಹಾಸಿಗೆ ಹಾಸಿ, ನಕ್ಷತ್ರಗಳನ್ನು ನೋಡುತ್ತಾ ಮಲಗಿ, ರಾಜ ಮಹಾರಾಜರ ಕಥೆಗಳನ್ನು ಅವರು ಹೇಳುತ್ತಿದದ್ದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದೊಂದು ಭಾನುವಾರ -ದಂಡು ಪ್ರದೇಶದ “ರೆಕ್ಸ್‌’ ಚಿತ್ರಮಂದಿರಕ್ಕೆ ಹೋಗಿ ಟಿಕೆಟಿಗಾಗಿ ಸರದಿಯಲ್ಲಿ ನಿಂತು, “ನಾಲ್ಕು ಟಿಕೆಟ್‌ ಕೊಡಿ’ ಎಂದು ಅಪ್ಪಾಜಿ ಕೇಳಿದಾಗ ಆ ಕಡೆಯಿಂದ ಬಂತು, what do you want, Tell me in english ಎಂಬ ದನಿ. ಅಪ್ಪಾಜಿ ಹಲವು ಬಾರಿ ಕನ್ನಡದಲ್ಲಿ ಕೇಳಿದರೂ ಟಿಕೆಟ್‌ ಸಿಗಲಿಲ್ಲ. ಆದರೂ ಅಪ್ಪಾಜಿಯವರು ಅದನ್ನು ತೀವ್ರವಾಗಿ ವಿರೋಧಿಸಿದರು. ನನ್ನ ಮಟ್ಟಿಗೆ ಈ ಪ್ರಕರಣವೇ ಅಪ್ಪಾಜಿಯವರ ಕನ್ನಡಪರ ಹೋರಾಟಕ್ಕೆ ನಾಂದಿಯಾಯಿತು ಮತ್ತು ಅವರ ಜೀವನದ ತಿರುವನ್ನೇ ಬದಲಿಸಿತು.

ಕನ್ನಡಪರ ಚಳುವಳಿ ತೀವ್ರವಾದಂತೆ ನಮ್ಮ ಸಂಸಾರ -ಬದುಕು ಕೂಡ ಹೊಸ ಹೊಸ ರೂಪಗಳನ್ನು ಪಡೆಯಿತಲ್ಲದೆ ಈ ಹೊಸ ಜೀವನವನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಕೊಟ್ಟಿತು. ಅಪ್ಪಾಜಿಯವರು ಸತ್ಯವನ್ನೇ ಆಯುಧವಾಗಿ ಇರಿಸಿಕೊಂಡು ನಡೆದವರು. ಯಾರನ್ನೂ ದ್ವೇಷಿಸದ ಅವರು, ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಸಂದರ್ಭಗಳಲ್ಲಿ ಕೆಲವು ಜನ ಅವರನ್ನು ತಪ್ಪಾಗಿ ಗ್ರಹಿಸಿದರು. ಆದರೂ ಕೂಡ ಯಾರಿಗೂ ನೋವಾಗದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಟಿಪ್ಪು ಸುಲ್ತಾನ್‌ ಬಗ್ಗೆ ಎದ್ದ ವಿವಾದದ ಬಗ್ಗೆ ಅಪ್ಪಾಜಿಯವರು ಸಾಕಷ್ಟು ರಿಸರ್ಚ್‌ ಮಾಡಿ ಅದಕ್ಕೆ ಬೇಕಾದ ಪುರಾವೆಗಳನ್ನು ಸಂಗ್ರಹಿಸಿ ಒಂದು ಪತ್ರಿಕಾಗೋಷ್ಠಿಯಲ್ಲಿ ಅದನ್ನು ಬಿಡುಗಡೆ ಮಾಡಿದಾಗ, ಎಲ್ಲರ ಬಾಯಿ ಬಂದ್‌ ಆಯಿತು. ಜನರಲ್ಲಿ ಇದ್ದ ಹಲವು ತಪ್ಪು ಕಲ್ಪನೆಗಳು ಅಪ್ಪಾಜಿಯವರ ಈ ಶೋಧದಿಂದ ದೂರವಾಯಿತು ಮತ್ತು ಇಂದಿಗೂ ಅವರು ಬರೆದಿರುವ ಪುಸ್ತಕ ಒಂದು ರೆಫ‌ರೆನ್ಸ್‌ ಪುಸ್ತಕವಾಗಿದೆ. ಈ ವಿಷಯವನ್ನು ಪ್ರಸ್ತಾಪ ಮಾಡಿದ ಮೇಲೆ ಅವರಿಗೆ ಪ್ರಶಂಸೆಯ ಪತ್ರಗಳು ಬಂದವು. ಕೆಲವು ಅವರನ್ನು ಕೊಲ್ಲುವ ಬೆದರಿಕೆಯನ್ನೂ ಒಡ್ಡಿದವು. ಆದರೆ ಇದ್ಯಾವುದಕ್ಕೂ ಅಪ್ಪಾಜಿಯವರಾಗಲಿ, ನಾವಾಗಲೀ, ಸೊಪ್ಪು ಹಾಕಲಿಲ್ಲ. ಇನ್ನೊಮ್ಮೆ ಬೀದರ್‌ನಲ್ಲಿ ಕೆಲವು ಪುಂಡ ಹುಡುಗರು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದಾಗ ಅಪ್ಪಾಜಿಯವರು ಅದನ್ನು ಖಂಡಿಸಿರುವುದಲ್ಲದೆ ಆ ಪುಂಡರಿಗೆ ತಕ್ಕ ಶಿಕ್ಷೆ ಕೊಡಿಸಿದರು. ಆಗಲೂ ಅವರಿಗೆ ಹಲವು ಬೆದರಿಕೆಯ ಪತ್ರಗಳು ಬಂದರೂ ಅವರು ಧೃತಿಗೆಡಲಿಲ್ಲ. ಈ ಎಲ್ಲ ಸಂಧರ್ಭಗಳಲ್ಲಿ ಅಪ್ಪಾಜಿಯವರು ಯಾವ ಪಂಗಡವರನ್ನೂ ದೂಷಿಸಲಿಲ್ಲ. ಅವರಿಗೆ ಸರಿ ಅನ್ನಿಸಿದ್ದನ್ನು ದಿಟ್ಟವಾಗಿ ಹೇಳುವ ಅವರ ನಡೆ ಎಲ್ಲೂ ತಪ್ಪಲಿಲ್ಲ.

ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಚಳುವಳಿಯ ಹಾದಿಯಲ್ಲಿ ಅವರು ಧುಮುಕಿರುವ ಸಂಗತಿ ನಮ್ಮಲ್ಲಿ ಆತಂಕಗಳನ್ನು ಮೂಡಿಸಿತ್ತು. ಬೆಂಗಳೂರಿನಿಂದ ಹಂಪಿಯವರೆಗೆ ಪಾದಯಾತ್ರೆ ಕೈಗೊಂಡಾಗ ನಮ್ಮ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ. ಆದರೆ, ಅಮ್ಮನ ಧೈರ್ಯ ಮತ್ತು ಸಂಯಮ ನಮಗೆ ಊರುಗೋಲು ಆಗಿತ್ತು. ಇವೆಲ್ಲದರಲ್ಲೂ ಅಪ್ಪಾಜಿಗೆ ಅಮ್ಮನೇ ದೊಡ್ಡ ಶಕ್ತಿಯಾಗಿದ್ದರು. ಸಂಸಾರದ ಎಲ್ಲ ಜವಾಬ್ದಾರಿಯನ್ನು ಅಮ್ಮ ಹೊತ್ತಿದ್ದರಿಂದ ಅಪ್ಪಾಜಿಯವರಿಗೆ ತಮ್ಮ ಹೋರಾಟಗಳ ಕಡೆಗೆ ಪೂರ್ಣ ಗಮನ ಹರಿಸಲು ಸಾಧ್ಯವಾಯಿತು.

ಕೊನೆಯದಾಗಿ, ಅಪ್ಪಾಜಿಯವರು, ಯಾವುದೇ ಆಸೆ ಆಮಿಷ ಗಳಿಗೆ ಬಗ್ಗಿದವರಲ್ಲ ಮತ್ತು ಯಾವುದೇ ಪದವಿ-ಪುರಸ್ಕಾರಗಳಿಗೆ ಹಂಬಲಿಸಿದವರಲ್ಲ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ನಮ್ಮ ಮನೆಯ ಬಾಗಿಲಿಗೆ ಬಂದು ರಾಜಕೀಯಕ್ಕೆ ಬರಬೇಕೆಂದು ಕೇಳಿಕೊಂಡರೂ, ಅಪ್ಪಾಜಿಯವರು ಅದ್ಯಾವುದಕ್ಕೂ ಓಗೊಡಲಿಲ್ಲ. ನಾನೂ ಕೆಲವು ಬಾರಿ, “ನೀವು ರಾಜಕೀಯಕ್ಕೆ ಹೋಗಬೇಕು, ಅದರಿಂದ ಕನ್ನಡಕ್ಕೆ ಒಳ್ಳೆಯದಾಗುವುದು’ ಎಂದು ಹೇಳಿದ್ದೆ. ಅವರು ಅದಕ್ಕೆ ಸುತರಾಂ ಒಪ್ಪಲಿಲ್ಲ. ಒಂದು ರೀತಿಯಲ್ಲಿ ಅದು ಅವರ ನಿಷ್ಪಕ್ಷಪಾತ ನಿಲುವು ಭದ್ರವಾಗಲು ಸಹಾಯಕವಾಯಿತು. ಈ ಕಾರಣಕ್ಕಾಗಿ ಅವರಿಗೆ ರಾಜಕೀಯ, ಸಾಂಸ್ಕೃತಿಕ ಮತ್ತು ಬೇರೆ ಬೇರೆ ಕ್ಷೇತ್ರಗಳ ಜನರಿಂದ ಪ್ರೀತಿ-ವಿಶ್ವಾಸ ಹಾಗೂ ಗೌರವ ದೊರಕಿತು. ನೈಜವಾದ ಸಾಮಾಜಿಕ ಕಳಕಳಿಯ ಪ್ರತಿಬಿಂಬ ಅವರಾಗಿದ್ದರು. ಆದುದರಿಂದಲೇ ಅವರು ಇಷ್ಟೊಂದು ಅಭಿಮಾನಿಗಳ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿದ್ದರು. ಅವರ ಮಗನಾಗುವ ಈ ಪುಣ್ಯವನ್ನು ನನಗೆ ಕೊಟ್ಟ ದೇವರಿಗೆ ಎಂದೆಂದೂ ಚಿರಋಣಿ. ಚಿಮೂರವರು ತೌಲನಿಕ ಅಧ್ಯಯನದಿಂದಲೂ ಆಂತರಿಕ ಪ್ರಮಾಣದಿಂದಲೂ ಪರಮಾರ್ಥ ಎಂಬ ಪದ ಅಂಕಿತವಾಗಲು ಸಾಧ್ಯವಿಲ್ಲ, ಸರ್ವಜ್ಞ ಎಂಬುದೇ ಸಾಧುವಾದ ಮತ್ತು ಕವಿ ಬಳಸಿದ ಅಂಕಿತವೆಂದು ಸಾಬೀತುಪಡಿಸಿದರು.

ಅವರ ಸಹಪಾಠಿ ಹಾಮಾ ನಾಯಕರು ಕನ್ನಡ ಬಾಷೆ, ಸಂಸ್ಕೃತಿ, ಸಾಹಿತ್ಯ, ಜನಪದ ಸಾಹಿತ್ಯ, ನೆಲಜಲ ಮತ್ತು ಗಡಿ ವಿಚಾರಗಳಲ್ಲಿ ಪ್ರಚಲಿತ ವಿದ್ಯಮಾನವನ್ನು ಅನುಲಕ್ಷಿಸಿ ನ್ಯಾಯಸಮ್ಮತವೂ ನಿಷ್ಪಕ್ಷಪಾತವೂ ಆದ ಅಭಿಪ್ರಾಯ ಪ್ರಕಟಿಸುತ್ತಿದ್ದರು. ಅವರು ಕುವೆಂಪು ಮಾದರಿಯನ್ನು ಅನುಸರಿಸಿದವರು. ಆದರೆ, ಬೀದಿಗಿಳಿದು ಹೋರಾಟ ಮಾಡಲಿಲ್ಲ. ಕರ್ನಾಟದ ಪರವಾಗಿ ಬೀದಿಗಿಳಿದು ಜನತೆಗೆ ಸ್ಥೈರ್ಯ ತುಂಬಿದ ಅನಕೃ ಮಾದರಿಯನ್ನು ಚಿಮೂ ಮುಂದುವರಿಸಿದರು. ಕರ್ನಾಟಕ ಪರವಾದ ಹಕ್ಕೊತ್ತಾಯದಲ್ಲಿ ನಿರತವಾಗಿದ್ದ ಜನಮುಖೀ ಕನ್ನಡ ಚಳವಳಿಗೆ ಹೊಸ ಪರಿಕಲ್ಪನೆ, ಅರ್ಥಪೂರ್ಣ ದಿಕ್ಕು ಮತ್ತು ಧ್ವನಿಯನ್ನು ನೀಡಿದರು. ಹೀಗೆ ಜ್ಞಾನಮುಖೀಯಾಗಿ ದಾಪುಗಾಲು ಹಾಕುತ್ತ ಸಾಗುತ್ತಿದ್ದ ಚಿಮೂರವರ ವಿದ್ವತ್‌ ಪಯಣ ಒಮ್ಮಿಂದೊಮ್ಮೆಲೆ ದಿವ್ಯ ತಿರುವು ಪಡೆದು ಸಮಾಜಮುಖೀಯಾಗಿ ಹೊರಳಿದ್ದು ಅವರನ್ನು ಬಲ್ಲವರೆಲ್ಲರ ಹುಬ್ಬೇರಿಸಿತು. ನಾಲ್ಕು ಗೋಡೆಯ ನಡುವಣ ಪಾಠಪ್ರವಚನ ಬಿಟ್ಟು ಸಾರ್ವಜನಿಕ ರಂಗಕ್ಕೆ ಧುಮ್ಮಿಕ್ಕಿದರು. ಗೋಕಾಕ್‌ ಚಳವಳಿ ಅವರಿಗೊಂದು ವರವಾಗಿ ಪರಿಣಮಿಸಿತು. ಈ ರೀತಿ ನಿಡುಬಾಳಿನಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದ ಪಲ್ಲಟಗಳೂ ವೇಗವಾಗಿ ಆವರ್ತನಗೊಂಡ ಈ ಸ್ಥಿತ್ಯಂತರಗಳ ಓಘವೂ ಗಮನಾರ್ಹವಾದುವು. ಈ ಸ್ಥಿತ್ಯಂತರದಲ್ಲೊಂದು ಸೋಜಿಗವೂ ಅಂತರ್ಗತವಾಗಿದೆ. ಹೋರಾಟಕ್ಕೆ ಬದ್ಧತೆ, ಕಸುವು, ಯೌವನ- ಇವು ಮುಪ್ಪುರಿಗೊಳ್ಳಬೇಕು. ತಾರುಣ್ಯದಲ್ಲಿ ಹೋರಾಟಮಾಡಿ ಮುಪ್ಪಿನಲ್ಲಿ ಮುದುಡಿ ಕೂಡುವುದು ಸರ್ವೇಸಾಮಾನ್ಯ.

ಆದರೆ, ಚಿಮೂ ಇದರ ತದ್ವಿರುದ್ಧ ಸಾಧನೆಗೆ ದೃಷ್ಟಾಂತವಾದರು! ಬಾಳಿನ ಏರುಗಾಲ ದಾಟಿ ಇಳಿಗಾಲ ಇಣಿಕಿದಾಗ, ಐವತ್ತು ವರ್ಷ ವಯಸ್ಸಾದಮೇಲೆ ಅವರು ಬೀದಿಗಿಳಿದರು. ಸುಪ್ರಸಿದ್ಧವಾದ ಚರಿತ್ರಾರ್ಹ ಗೋಕಾಕ್‌ ಚಳವಳಿಯಲ್ಲಿ (1982-83) ಅಖಾಡಕ್ಕಿಳಿದವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಕನ್ನಡದ ಅಸ್ಮಿತೆಯ ಅರಿವನ್ನು ಜನಮನದಲ್ಲಿ ಬೇರೂರಿಸಿದರು. ಅದುವರೆಗೂ ಎಂಸಿಎಂ ಎಂದು ವಿದ್ಯಾರ್ಥಿಗಳಲ್ಲಿ ಪ್ರಿಯರಾಗಿದ್ದವರು ಈಗ ಜನರ ಬಾಯಲ್ಲಿ ಚಿಮೂ ಎಂದು ಜನಾನುರಾಗಿ ಆದರು. ಅವರ ಹೆಸರಿನ ಆದ್ಯಕ್ಷರಗಳಲ್ಲಾದ ಪಲ್ಲಟ ಅವರ ಬಾಳಿನ ಪಯಣದಲ್ಲಿ ಕಾಣಿಸಿದ ತಿರುವಿನ ರೂಪಕ. ಜನಪರ ಚಳವಳಿಗಳ ರುಚಿ ಕಂಡಮೇಲೆ, ಅದರ ಮಹತ್ವ ಮನಗಂಡ ಮೇಲೆ ಅದರ ಆಲಿಂಗನದಿಂದ ದೂರ ಸರಿಯಲು ಮನಸು ಬರುವುದಿಲ್ಲ. ತರುವಾಯ ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಕೇಂದ್ರ ಸರ್ಕಾರ ಮಾನ್ಯ ಮಾಡುವಂತೆ ಮಣಿಸುವ ಜನಾಂದೋಳನದಲ್ಲೂ ಸಕ್ರಿಯವಾಗಿ ಭಾಗವಹಿಸಿದರು. ಅವರ ಬಹುರೂಪಿ ಕನ್ನಡಮುಖೀ ದಿಟ್ಟ ನಡೆಯಲ್ಲಿ ಇವು ಎರಡು ಉದಾಹರಣೆಗಳಷ್ಟೆ. ಹಂಪಿ ಪುರಾತನ ಸ್ಮಾರಕ ಸಂರಕ್ಷಣೆ, ಶಕ್ತಿ ಕೇಂದ್ರ ಸ್ಥಾಪನೆ (1988) ನೆನಪಿಡಬೇಕಾದ ಪ್ರಯತ್ನಗಳು.

ಚಿಮೂರವರ ಒಟ್ಟು ಬರವಣಿಗೆಯ ಆಯಾಮ, ಅನನ್ಯತೆ ಮತ್ತು ಮಹತ್ವವನ್ನು ಗುರುತಿಸುವಾಗ ಅವರ ಸಂಶೋಧನೆ ಪ್ರಧಾನವಾಗುತ್ತದೆ. ಅದುವರೆಗಿನ ಪ್ರೌಢ ಬರಹಗಳು ಬಹುವಾಗಿ ಪ್ರಾಚೀನ ಸಾಹಿತ್ಯದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದುವು. ಕ್ಷೇತ್ರಕಾರ್ಯ ಅವಲಂಬಿತವಾಗಿರಲಿಲ್ಲ. ಶಾಸನಗಳನ್ನು ಪರಿಗಣಿಸುತ್ತಿರಲಿಲ್ಲ. ಚಿಮೂರವರು ಪ್ರಾಚೀನ ಕವಿಕಾವ್ಯಗಳನ್ನು ಅವಗಣಿಸದೆ ಶಾಸನಗಳ ಪರಿಪ್ರೇಕ್ಷ್ಯದಲ್ಲಿ ನಿಲ್ಲಿಸಿ ಅನುಸಂಧಾನಿಸಿದರು. ಕ್ಷೇತ್ರಕಾರ್ಯಕ್ಕೆ ಜೀವತುಂಬಿದರು. ಕೈಗೊಂಡ ಪ್ರಯತ್ನಕ್ಕೆ ಶಿಖರಪ್ರಾಯವೆಂಬಂತೆ ಆಚಾರ್ಯ ತೀನಂಶ್ರೀಯವರು ಮಾರ್ಗದರ್ಶಕರಾದರು. ಕಿರಿದರಲ್ಲಿ ಹೇಳುವುದಾದರೆ, ಇನ್ನು ಮುಂದೆ ವಿದ್ವತ್ತನ್ನೂ ಸಂಶೋಧನೆಯನ್ನೂ ರೂಢಿಸಿಕೊಳ್ಳಲು ಬಯಸುವವರು ಚಿದಾನಂದಮೂರ್ತಿಯವರನ್ನೂ ಅವರ ವಾಗ್ಮಿಯವನ್ನೂ ಅವಶ್ಯ ಓದುತ್ತಾರೆ. ಅಷ್ಟು ಸತ್ವ ಮತ್ತು ಮಹತ್ವ ಇರುವ ಆಕರಸ್ವರೂಪಿಯಾದ ಮೌಲಿಕ ಗ್ರಂಥಗಳನ್ನು ಆಳವಾದ, ವಿಪುಲವಾದ ಅಧ್ಯಯನದಿಂದ ರಚಿಸಿದ್ದಾರೆ.

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆಗಿದ್ದ (1978-1986) ಅವಧಿಯಲ್ಲಿ ಅವರ ಅಪೇಕ್ಷೆಯ ಮೇರೆಗೆ 1984ರಲ್ಲಿ, ಸಂಶೋಧನ ಕಮ್ಮಟವನ್ನು ಬೃಹತ್‌ ಪ್ರಮಾಣದಲ್ಲಿ ಹಮ್ಮಿಕೊಂಡಿದ್ದೆ. ಹತ್ತು ದಿನಗಳ ಕಾಲ ನಡೆದ ಆ ಶಿಬಿರದಲ್ಲಿ ಅಂದಿನ ಕರ್ನಾಟಕದ ಮತ್ತು ಹೊರರಾಜ್ಯದ ಒಟ್ಟು 80 ಜನ ಕನ್ನಡ ಎಂಎ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಳವಾದ ಅಧ್ಯಯನ ಮತ್ತು ಒಳನೋಟಗಳನ್ನು ಒಳಗೊಂಡ ಅವರ ವಾಗ್ಮೆಯದಲ್ಲಿ ಅವಶ್ಯ ಹೆಸರಿಸಬೇಕಾದ್ದು ಮತ್ತು ಅವರ ಹೆಸರನ್ನು ಅಜರಾಮರಗೊಳಿಸಿದ್ದು ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ (1966). ಇದಲ್ಲದೆ ಮೂಲ ಆಕರಗಳನ್ನು ಅವಲಂಬಿಸಿ ಬರೆದ ಇನ್ನಿತರ ಗ್ರಂಥಗಳಲ್ಲಿ ಪ್ರಮುಖವಾದುವು- ಚಿದಾನಂದ ಸಮಗ್ರ ಸಂಪುಟ (2002), ಸಂಶೋಧನ ತರಂಗ (1966), ಸಂಶೋಧನೆ (1967), ಬಸವಣ್ಣ (1972), ಪಾಂಡಿತ್ಯ ರಸ (2000), ಶೂನ್ಯ ಸಂಪಾದನೆಯನ್ನು ಕುರಿತು (1962), ವೀರಶೈವ ಧರ್ಮ (2000), ವಾಗರ್ಥ (1981), ವಚನ ಸಾಹಿತ್ಯ (1975), ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ (1985), ಕರ್ನಾಟಕ – ನೇಪಾಳ (2003), ಕರ್ನಾಟಕ ಸಂಸ್ಕೃತಿ (1991), ಹೊಸತು ಹೊಸತು (1993), ಪಂಪಕವಿ ಮತ್ತು ಮೌಲ್ಯ ಪ್ರಸಾರ (1966), ಗ್ರಾಮೀಣ (1977), ಭಾಷಾವಿಜ್ಞಾನ ಮೂಲತತ್ವಗಳು (1965) ಇತ್ಯಾದಿ. ಅವರಿಗೆ ಬಂದ ಅನೇಕಾನೇಕ ಪ್ರಶಸ್ತಿಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಮುಖವಾದುವು. ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ನನಗೂ ಅವರಿಗೂ ಒಂದೇ ವರ್ಷ ಪ್ರಾಪ್ತವಾಗಿದ್ದು ಅಂದು ನಮ್ಮಿಬ್ಬರಿಗೂ ಗುರುವರೇಣ್ಯರಾಗಿದ್ದ ತೀ. ನಂ. ಶ್ರೀಕಂಠಯ್ಯನವರ ಹುಟ್ಟಿದ ಹಬ್ಬದ ದಿನಾಂಕವಾಗಿತ್ತು ಎಂಬುದನ್ನು ನೆನೆದು ಸಂತೋಷಪಟ್ಟೆವು.

ನಿಮೋನಿಯಾ ಜ್ವರದ ಬಳಲಿಕೆಯಿಂದ ಕಳೆದೆರಡು ತಿಂಗಳಿಂದ ಅವರ ಆರೋಗ್ಯದಲ್ಲಿ ಏರುಪೇರುಗಳಿದ್ದುವು. ಜನವರಿ 9ರಂದು ಉಸಿರಾಟದ ತೊಂದರೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಜನವರಿ 11ರಂದು ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಹದ ಯಾತ್ರೆಯನ್ನು ಪೂರೈಸಿದರು. ಇವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ವಿಲೀನವಾಯಿತು. ಆದರೆ, ಅವರ ಸಾಹಸ, ಸಾಧನೆ, ಸಂಶೋಧನೆ ಚಿರಸ್ಥಾಯಿ. ವಿದ್ವತ್ತು, ವಿವೇಕ, ಮತ್ತು ಬೀದಿಗಿಳಿದು ಹೋರಾಟ- ಇವು ಕವಲು ದಾರಿಯ ಮೂರು ಭಿನ್ನ ಮಾರ್ಗಗಳು. ಆದರೆ, ಚಿದಾನಂದಮೂರ್ತಿಯವರ ನಿಡುಬಾಳಿನಲ್ಲಿ ಈ ಮೂರೂ ಮುಪ್ಪುರಿಗೊಂಡು ಮೇಳೈಸಿದ್ದವು.

ಎಂ. ಸಿ. ವಿನಯ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next