ಸಸ್ಯಶಾಸ್ತ್ರಜ್ಞ, ಬರಹಗಾರ ಡಾ.ಬಿ.ಜಿ.ಎಲ್. ಸ್ವಾಮಿ ಜನ್ಮಶತಮಾನೋತ್ಸವದ ಅಂಗವಾಗಿ “ಡಾ.ಬಿ.ಜಿ.ಎಲ್. ಸ್ವಾಮಿ- ನೂರರ ನೆನಪು’ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಬಿ.ಎಂ.ಶ್ರೀ. ಪ್ರತಿಷ್ಠಾನದ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಸುಂದರರಾಜನ್, “ಬಿ.ಜಿ.ಎಲ್.ಸ್ವಾಮಿ ಅವರ ಸಸ್ಯಶಾಸ್ತ್ರೀಯ ಬರಹ ಹಾಗೂ ಸಂಶೋಧನೆ’ ಕುರಿತು ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿ, “ಬಿ.ಜಿ.ಎಲ್.ಸ್ವಾಮಿ ಅವರ ವಿಡಂಬನಾತ್ಮಕ ಬರಹಗಳು’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಲೇಖಕ ಎಸ್. ದಿವಾಕರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಲ್ಲಿ?: ಬಿ.ಎಂ.ಶ್ರೀ. ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೊನಿ
ಯಾವಾಗ?: ಡಿ.16, ಭಾನುವಾರ ಬೆಳಗ್ಗೆ 10.30