Advertisement

Maski: ರೈಟರ್ ಬಸನಗೌಡ ಹೃದಯಾಘಾತದಿಂದ ನಿಧನ

10:48 AM Aug 11, 2023 | Team Udayavani |

ಮಸ್ಕಿ: ಪೊಲೀಸ್ ಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಆ. 10 ರ ಗುರುವಾರ ನಡೆದಿದೆ.

Advertisement

ಪಟ್ಟಣದ ಪೊಲೀಸ್ ಪೇದೆ ಬಸನಗೌಡ ಆಗೋಲಿ(34) ಮೃತಪಟ್ವರು.

ಹಲವು ವರ್ಷಗಳಿಂದ ಇಲ್ಲಿನ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಎಂದಿನಂತೆ ಗುರುವಾರ ರಾತ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದಾರೆ.

ಬಸನಗೌಡ ಆಗೋಲಿ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆಗೆ ಸಾವನಪ್ಪಿದ್ದಾರೆ‌. ಪೇದೆ ಸಾವಿಗೆ ಠಾಣಾಧಿಕಾರಿಗಳು, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next