ಹಾಸನ: ತಿಂಗಳಿಂದೀಚೆಗೆ ನೂರಾರು ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಿ ಹಾಸನ ಡೀಸಿ ರೋಹಿಣಿ ಸಿಂಧೂರಿ ಸೇರಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿರುವ ಅಧಿಕಾರಿಗಳನ್ನೂ ವರ್ಗಾವಣೆ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಿನ್ನೆ, ಮೊನ್ನೆಯ ರಾಜಕಾರಣಿಯಲ್ಲ. 20 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರ ನಡೆಸಿರುವ ಅವರು ಚುನಾವಣಾ ಆಯೋಗದ ನಿರ್ದೇಶನಗಳಿಗೂ ಗೌರವ ಕೊಡುವುದಿಲ್ಲ ಎನ್ನುವುದಾದರೆ ಇನ್ಯಾವ
ರೀತಿಯ ಆಡಳಿತ ನಡೆಸ್ತಾರೆ? ರಾಜ್ಯದಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವೆ ಎಂದು ಹೇಳುವ ಆತ್ಮಬಲ ಅವರಿಗಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ನಾನು ಯಾರಿಗೂ ಯಜಮಾನನಲ್ಲ “ದೇವೇಗೌಡರು ನಮ್ಮ ಯಜಮಾನರು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ” ನಾನು ಯಾರಿಗೂ ಯಜಮಾನನಲ್ಲ , ಅವರು ಒಳ್ಳೆ ಭಾವನೆಯಿಂದ ಹೇಳಿದ್ದಾರೋ, ವ್ಯಂಗ್ಯವಾಗಿ ಹೇಳಿದ್ದಾರೋ ಗೊತ್ತಿಲ್ಲ. ಹೆಚ್ಚು ಪ್ರತಿಕಿಯಿಸುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರಿಗೂ ತಿರುಗೇಟು ನೀಡಿದ ದೇವೇಗೌಡ, ಯಾರ ವಿರುದ್ಧ ವಾಗಿ, ಪರವಾಗಿ, ಹಗುರವಾಗಿ ಮಾತನಾಡುವುದಿಲ್ಲ . ಆದರೆ ಅವರು (ಎ.ಮಂಜು) ಏನೇನು ಮಾಡಿದ್ದಾರೆಂಬ ಅಂಕಿ ಅಂಶ ಆಧಾರವಾಗಿ ಟ್ಟುಕೊಂಡೇ ಮಾತನಾಡಿದ್ದೇನೆ ಎಂದರು. ಬಾಬುಗೌಡ ಸಹಿತ ಹಲವರು ಜೆಡಿಎಸ್‌ಗೆ
ಬೆಂಗಳೂರು: ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಸೇರಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರಿನ
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಗುರುವಾರ ಜೆಡಿಎಸ್ ಸೇರ್ಪಡೆಗೊಂಡರು. ನಗರದ ಜೆಡಿಎಸ್ ಕೇಂದ್ರ ಕಚೇರಿಯ
ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖಂಡರನ್ನು ಸ್ವಾಗತಿಸಿ
ಮಾತನಾಡಿ, ಈ ಬೆಳವಣಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬಲಗೊಳ್ಳುತ್ತಿರುವ ಪ್ರತೀಕ ಎಂದರು.